ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ಮೌನದ ಮಹಾಮನೆಯೊಳಗೆ

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ನಿನ್ನ ಮೌನದ
ಮಹಾಮನೆಯೊಳಗೊಂದು
ಚಂದದ ಬಂದೀಖಾನೆಯಿದೆ
ತೀರ ಕಾಣದ ಗಿಣಿಯೊಂದು
ಅನವರತ ಉಲಿಯುತ್ತದೆ
ತಂತಿ ನಿಶ್ಶಬ್ದ ಮಿಡಿಯುತ್ತದೆ
ಕೆಂಪನೆಯ ಕೊಕ್ಕಿಗೂ
ವಜನಿಲ್ಲದ ಕೆಲಸವಿದೆ
 
ಮಾತು ಮಣ್ಣಾಗುತ್ತದೆ.
ಹೆಡೆಮುರಿಕಟ್ಟಿ
ತಗ್ಗು ತುಂಬಿಕೊಳ್ಳುತ್ತದೆ
ಹಗ್ಗಸನಿಕೆಗಳ ಹಂಗಿಲ್ಲದ
ಚರಮ ಗೀತೆ
ನಿನ್ನದೇ ದನಿ ಬೇಡುತ್ತದೆ.
 
ನಿನ್ನ ಮೌನದ ಮಹಾಮನೆಯೊಳಗೊಂದು
ಚಂದದ ಬಂದೀಖಾನೆಯಿದೆ
ಕವಾಟಗಳಿಲ್ಲದ ಕಪ್ಪುಗೋಡೆಯಿದೆ
ಮತ್ತು
ಅನುಕ್ಷಣದ ನನ್ನ ಸೋಲ
ಸಲಹುವ ಕಾರಸ್ಥಾನವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT