ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ತನಿಖೆಗೆ ಉಗ್ರಪ್ಪ ಒತ್ತಾಯ

Last Updated 30 ಜುಲೈ 2014, 20:26 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಹೋಬ­ಳಿಯ ಶ್ರೀಗಂಧಕಾವಲಿನ ಭೂಪ­­ರಿ­ವರ್ತಿತ 4 ಎಕರೆ ಜಮೀನನ್ನು ಜಗದೀಶ ಶೆಟ್ಟರ್‌ ಅವರು ಮುಖ್ಯ­ಮಂತ್ರಿ­ಯಾಗಿದ್ದ ಅವಧಿ­ಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಪರ­ಭಾರೆ ಮಾಡಿ­ರುವ ಕ್ರಮ ಕುರಿತು ನ್ಯಾಯಾಂಗ ಅಥವಾ ಸಿಐಡಿ ತನಿಖೆ ನಡೆ­­­ಸ­ಬೇಕು ಎಂದು ವಿಧಾನ ಪರಿ­ಷತ್‌ ಸದಸ್ಯ, ಕಾಂಗ್ರೆಸ್ಸಿನ ವಿ.ಎಸ್‌. ಉಗ್ರಪ್ಪ ಒತ್ತಾ­ಯಿ­ಸಿದರು.

ವಿಧಾನಸೌಧದಲ್ಲಿ ಬುಧವಾರ ಪತ್ರಿ­ಕಾ­­ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅಕ್ರಮ ಎಸಗಿ ಬಿಜೆಪಿ ವಿಧಾ­­ನ­ಸಭಾ ಚುನಾವಣೆಗೆ ಕೋಟ್ಯಂತರ ರೂಪಾಯಿ ಕಿಕ್‌ಬ್ಯಾಕ್‌ ಪಡೆದು­ಕೊಂಡಿದೆ. ಸುಂದರೇಶ್‌ ಅವ­ರಿಗೆ ನೀಡಿ­ರುವ ಜಮೀನನ್ನು ಮುಟ್ಟು­ಗೋಲು ಹಾಕಿ­­ಕೊಳ್ಳಬೇಕು’ ಎಂದು ಆಗ್ರ­ಹಿಸಿ­ದರು. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT