ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಸಮಸ್ಯೆ ಪರಿಹರಿಸಿ

ಅಕ್ಷರ ಗಾತ್ರ

ಆಡುಗೋಡಿ ಬಳಿಯ ಮಹಾಲಿಂಗೇಶ್ವರ ಬಡಾವಣೆಯ ಪಡಿತರ ಅಂಗಡಿಯಲ್ಲಿ ತೂಕದ ಯಂತ್ರದ ಮುಂದಿನ ಭಾಗವನ್ನು (ಸ್ಕ್ರೀನ್‌) ಬಟ್ಟೆಯಿಂದ ಮುಚ್ಚಿ ಪಡಿತರ ಚೀಟಿದಾರರಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಪಡಿತರವನ್ನು ವಿತರಿಸಲಾಗುತ್ತಿದೆ. ಇದರಿಂದ ಯಾವ ವ್ಯಕ್ತಿಗೆ ಎಷ್ಟು ಪಡಿತರ ನೀಡಲಾಗುತ್ತಿದೆ ಎಂದು ತಿಳಿಯುವುದೇ ಇಲ್ಲ.

ಸರ್ಕಾರ ಒಬ್ಬ ವ್ಯಕ್ತಿಗೆ 5 ಕೆ.ಜಿ. ಎಂದು ನಿಗದಿ ಪಡಿಸಿದ್ದರೆ, ಪಡಿತರ ಅಂಗಡಿಯವರು ಒಬ್ಬ ವ್ಯಕ್ತಿಗೆ 4 ಕೆ.ಜಿ. ನೀಡುತ್ತಿದ್ದಾರೆ. ತಾಳೆಎಣ್ಣೆಗೆ ಸರ್ಕಾರ ನಿಗದಿ ಪಡಿಸಿರುವ ಬೆಲೆ ₨ 25. ಆದರೆ ಪಡಿತರ ಅಂಗಡಿಯವರು ತೆಗೆದುಕೊಳ್ಳುವುದು ₨30. ಈಗಲೇ ಆಹಾರ ಇಲಾಖೆ ಪಡಿತರ ಅಂಗಡಿ ಮುಚ್ಚಿಸಿ ಬೇರೆ ಹತ್ತಿರದ ಪಡಿತರ ಅಂಗಡಿಯಿಂದ ಮಹಾಲಿಂಗೇಶ್ವರ ಬಡಾವಣೆ ಜನರಿಗೆ ಧಾನ್ಯ ವಿತರಣೆ ಮಾಡಲಾಗುತ್ತಿತ್ತು. ಆದರೆ ಯಾರದ್ದೋ ಬೆಂಬಲ ಪಡೆದು ಮತ್ತೆ ಅದೇ ಪಡಿತರ ಅಂಗಡಿಯವರು ಪರವಾನಗಿ ಪಡೆದು ಧಾನ್ಯ ವಿತರಿಸುತ್ತಿದ್ದಾರೆ. 

ಆ ವ್ಯಕ್ತಿಯನ್ನು ಯಾರಾದರೂ ಏನಾದರೂ ಕೇಳಿದರೆ ಯಾರು ನನ್ನನ್ನು ಏನು ಮಾಡಲು ಆಗುವುದಿಲ್ಲ ಎಂದು ನಿರ್ಭೀತರಾಗಿ ಉತ್ತರ ನೀಡುತ್ತಾರೆ.

ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಅನುಮಾನ ಇದ್ದರೆ ಪಡಿತರ ಚೀಟಿದಾರರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮಹಾಲಿಂಗೇಶ್ವರ ಬಡಾವಣೆ ನಿವಾಸಿಗಳ ಪಡಿತರ ಚೀಟಿದಾರರ ಸಮಸ್ಯೆ ಪರಿಹರಿಸಬೇಕೆಂದು ಕಳಕಳಿಯ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT