ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ದಾಳಿ: ಭಾರತೀಯ ಯೋಧನ ಸಾವು

Last Updated 22 ಜುಲೈ 2014, 10:41 IST
ಅಕ್ಷರ ಗಾತ್ರ

ಜಮ್ಮು (ಐಎಎನ್ಎಸ್): ಜಮ್ಮು ಮತ್ತು ಕಾಶ್ಮೀರದ ನೈಜ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲೆಗಳ ಕಡೆಗೆ ಪಾಕಿಸ್ತಾನಿ ಪಡೆಗಳು ಮಂಗಳವಾರ ಗುಂಡು ಹಾರಿಸಿದಾಗ ಭಾರತೀಯ ಯೋಧನೊಬ್ಬ ಹತನಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಖ್ನೋರ್ ವಿಭಾಗದ ಪಲ್ಲನ್ ವಲ್ಲಾ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಪಾಕಿಸ್ತಾನಿ ಪಡೆಗಳು ಸ್ವಯಂಚಾಲಿತ ಶಸ್ತ್ತ್ರಾಸ್ತ್ರ ಸಹಿತ ಹಲವು ವಿಧದ ಶಸ್ತ್ರಾಸ್ತ್ರ ಬಳಸಿದವು ಎಂದು ಸೇನಾ ವಕ್ತಾರ ಕರ್ನಲ್ ಮನಿಶ್ ಮೆಹ್ತಾ ಐಎಎನ್ ಎಸ್ ಗೆ ತಿಳಿಸಿದರು.

ಉಗ್ರಗಾಮಿಗಳಿಗೆ ನೈಜ ನಿಯಂತ್ರಣ ರೇಖೆಯಲ್ಲಿ ಭಾರತದ ಕಡೆಗೆ ನುಸುಳಲು ಅನುವು ಮಾಡಿಕೊಡುವ ಸಲುವಾಗಿ ಈ ಗುಂಡು ದಾಳಿ ನಡೆಸಲಾಯಿತು ಎಂದು ಅವರು ನುಡಿದರು. ಏನಿದ್ದರೂ ಈ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT