ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾನ್ವಿತರಿಗೆ ಅವಕಾಶ

ದೊಡ್ಡಬಳ್ಳಾಪುರ: ಉದ್ಯೋಗ ಮೇಳ ಉದ್ಘಾಟನೆ
Last Updated 12 ಫೆಬ್ರುವರಿ 2016, 9:25 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆಧುನಿಕ ಸಂವಹನ ಯುಗದಲ್ಲಿ ಸಂಸ್ಥೆಗಳು ಉದ್ಯೋಗಿಗಳನ್ನು ಕಾಲೇಜಿನಲ್ಲೇ ಕ್ಯಾಂಪಸ್ ಆಯ್ಕೆ ಮಾಡುತ್ತಿರುವುದು ಶ್ಲಾಘನೀಯ. ಉದ್ಯೋಗಾರ್ಥಿಗಳಿಗೂ ಇದು ಉತ್ತಮ ಅವಕಾಶವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಉದ್ಯೋಗ ಮಾಹಿತಿ ಕೋಶ ಸಂಯೋಜನ                ಅಧಿಕಾರಿ ಡಾ.ನಾರಾಯಣ ಪ್ರಸಾದ್ ಹೇಳಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೆ.ಜಿ.ಐ.ಗ್ರೂಪ್‌ ವತಿಯಿಂದ  ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಸಾಮರ್ಥ್ಯವನ್ನು ಪರೀಕ್ಷೆಗೊಳಿಸಿದಾಗ ಆತ್ಮವಿಶ್ವಾಸದಿಂದ ಮಾತನಾಡಿ ತಮ್ಮ ಮಾತಿನ ಕೌಶಲ್ಯವನ್ನು ಅವರ ಮುಂದೆ ಪ್ರಸ್ತುತಪಡಿಸಿ ಎಂದು ಹೇಳಿದರು.
ಕೆ.ಜಿ.ಐ ಗ್ರೂಪ್‌ನ ರಾಜೇಶ್ ಮಾತನಾಡಿ, ನಿಮ್ಮ ಭವಿಷ್ಯಕ್ಕೆ ನೀವು ಪಡೆದುಕೊಳ್ಳುವ ಉದ್ಯೋಗ ಬಹಳ ಮುಖ್ಯವಾಗುತ್ತದೆ. ಉದ್ಯೋಗವನ್ನು ಆಯ್ದುಕೊಳ್ಳಲು ಪ್ರತಿಭಾನ್ವಿತರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಮಾತನಾಡಿ, ಈ ಉದ್ಯೋಗ ನಮ್ಮ ಕಾಲೇಜಿಗೆ ಸುವರ್ಣವಕಾಶವಾಗಿದೆ 13 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ ಎಂದರು.

ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಉದ್ಯೋಗ ಮಾಹಿತಿ ಸಂಚಾಲಕರಾದ ಡಾ. ಸಿದ್ದರಾಮ ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT