ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ್‌ಕುಮಾರ್‌ ಬಿಡುಗಡೆಗೆ ಯತ್ನ

Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಆಪ್ಘಾನಿಸ್ತಾನದ ಹೆರಾತ್‌ ಪ್ರಾಂತ್ಯದಲ್ಲಿ ಶಂಕಿತ ತಾಲಿ­ಬಾನ್‌ ಉಗ್ರರಿಂದ ಅಪ­ಹರ­ಣ­ಕ್ಕೊಳ­ಗಾ­ಗಿ­­­ರುವ ಭಾರತದ ನೆರವು ಕಾರ್ಯ­­ಕರ್ತ ಫಾದರ್‌ ಅಲೆಕ್ಸಿಸ್ ಪ್ರೇಮ್‌­ಕುಮಾರ್‌ ಅವರ ಬಿಡುಗಡೆ ವಿಷಯ­ವನ್ನು ವಿದೇ­ಶಾಂಗ ವ್ಯವ­ಹಾರ ಸಚಿವೆ ಸುಷ್ಮಾ ಸ್ವರಾಜ್‌ ಬಳಿ ಈಗಾಗಲೇ ಪ್ರಸ್ತಾ­­ಪಿಸಿ­ದ್ದಾಗಿ ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಪೊನ್‌ ರಾಧಾಕೃಷ್ಣನ್‌ ಶನಿವಾರ ಹೇಳಿದ್ದಾರೆ.

‘ನಾನು ಈ ಸಂಬಂಧ ಸುಷ್ಮಾ ಸ್ವರಾಜ್‌ ಬಳಿ ಮಾತ­­ನಾಡಿದ್ದೇನೆ. ಅಲ್ಲದೇ  ಪತ್ರ­ವನ್ನೂ ಬರೆದಿ­ದ್ದೇನೆ. ಇದೊಂದು ದುರ­ದೃ­ಷ್ಟ­ಕರ ಘಟನೆ. ಪ್ರೇಮ್‌­ಕುಮಾರ್‌ ಬಿಡು­ಗಡೆಗೆ ನಾವು ಪ್ರಯತ್ನ ಮಾಡುತ್ತಿ­ದ್ದೇವೆ. ಅವರು ಸುರಕ್ಷಿತ­ವಾಗಿ ಭಾರತಕ್ಕೆ ಮರಳು­ತ್ತಾ­ರೆ­­ನ್ನುವ ಭರವಸೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT