ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ್ಲುಜಾ ನಗರ ಇರಾಕ್‌ ವಶಕ್ಕೆ

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಫಲ್ಲುಜಾ(ಎಎಫ್‌ಪಿ): ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಶದಲ್ಲಿದ್ದ ಫಲ್ಲುಜಾ ನಗರವನ್ನು ಇರಾಕ್‌ ಪಡೆಗಳು ಮರುವಶ ಮಾಡಿಕೊಂಡಿವೆ.  ಉಗ್ರರ ಭದ್ರಕೋಟೆ ಭೇದಿಸಲು ಸರ್ಕಾರಿ ಪಡೆಗಳು ತಿಂಗಳಿಂದ ನಡೆಸಿದ ಕಾರ್ಯಾಚರಣೆ  ಯಶಸ್ವಿಯಾಗಿದೆ.

‘ಫಲ್ಲುಜಾ ನಗರಕ್ಕೆ ಈಗ ಐ.ಎಸ್‌ ಉಗ್ರರಿಂದ ಯಾವುದೇ ಬೆದರಿಕೆ ಇಲ್ಲ’ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆಪ್ಟಿನೆಂಟ್‌ ಜನರಲ್‌ ಅಬೆದಿಲ್ ವಾಹಬ್‌ ಅಲ್‌ ಸಾದಿ ಭಾನುವಾರ ಹೇಳಿದ್ದಾರೆ.

‘ಫಲ್ಲುಜಾ ನಗರ ಸಂಪೂರ್ಣ ನಮ್ಮ ವಶಕ್ಕೆ ಬಂದಿದ್ದರೂ ವಾಯವ್ಯ ಭಾಗದಲ್ಲಿ ಐ.ಎಸ್‌ ವಿರುದ್ಧ ಹೋರಾಟ ಮುಂದುವರಿದಿದೆ. ಅಲ್ಲಿಯೂ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಅವರು ವಿವರಿಸಿದ್ದಾರೆ.

ಇರಾಕ್‌ನ ಭದ್ರತಾ ಪಡೆಗಳು ಫಲ್ಲುಜಾವನ್ನು ವಶಕ್ಕೆ ಪಡೆಯಲು ಮೇ 22 ಮತ್ತು 23 ರಂದು ಭಾರಿ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದವು. ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಿರುದ್ಧ ತಮ್ಮ ಪಡೆಗಳಿಗೆ ವಿಜಯ ದೊರೆತಿದೆ ಎಂದು ಪ್ರಧಾನಿ ಹೈದರ್‌ ಅಲ್‌ ಅಬಾದಿ ಅವರು ಜೂನ್‌ 17 ರಂದೇ ಘೋಷಣೆ ಮಾಡಿದ್ದರು.

ಫಲ್ಲುಜಾದಲ್ಲಿ ನಡೆದ ಕದನದಲ್ಲಿ ನೂರಾರು ನಾಗರಿಕರು ಮೃತಪಟ್ಟಿದ್ದಾರೆ. ಹಲವು ಜನ ತಮ್ಮ ಮನೆಗಳನ್ನು ತೊರೆದು ದೂರ ಹೋಗಿದ್ದಾರೆ. ಐಎಸ್‌ ವಿರುದ್ಧ ವೈಮಾನಿಕ  ದಾಳಿ ನಡೆಸಲು  ಅಮೆರಿಕ ನೇತೃತ್ವದ ಮೈತ್ರಿ ಪಡೆಗಳು  ಇರಾಕ್‌ಗೆ ನೆರವು ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT