ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ತಂತ್ರ ಬೇಡ

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬಿಬಿಎಂಪಿ ಚುನಾವಣೆಗೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಆಯಾ ಪಕ್ಷಗಳಿಂದ ಘೋಷಣೆಯಾಗಬೇಕಿದೆ. ಆದರೆ, ಅಕ್ರಮವಾಗಿರುವ ಎಷ್ಟೋ ಕೃತ್ಯಗಳು ಚುನಾವಣೆ ಸಮಯದಲ್ಲಿ ಸಕ್ರಮ ಮಾರ್ಗವಾಗಿ ಬದಲಾಗಿರುವುದು ಆತಂಕಕಾರಿ ಬೆಳವಣಿಗೆ.

ರಾಷ್ಟ್ರೀಯ ಪಕ್ಷಕ್ಕೆ ಸೇರಿದ ಅಭ್ಯರ್ಥಿಯೊಬ್ಬರ ಹಿಂಬಾಲಕರು ವೃದ್ಧಾಪ್ಯ, ವಿಧವಾ ವೇತನ ಬರುವಂತೆ ಮಾಡುತ್ತೇವೆ ಎಂದು ಜನರಲ್ಲಿ ಭರವಸೆ ಹುಟ್ಟಿಸಿ, ಪಡಿತರ ಅಥವಾ ಆಧಾರ್ ಚೀಟಿಯನ್ನು ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ. ಇದು, ಚುನಾವಣೆವರೆಗೂ ಇವುಗಳನ್ನು ಇರಿಸಿಕೊಂಡು ಬೆದರಿಸುವ ತಂತ್ರವಷ್ಟೇ.

ಪ್ರಜಾಪ್ರಭುತ್ವದಲ್ಲಿ ಪಡಿತರ ಚೀಟಿ ತೆಗೆದುಕೊಂಡು ಬೆದರಿಸುವಂತಹ ಕೃತ್ಯ ಸಮಾಜಘಾತುಕ. ಚುನಾವಣಾ ಆಯೋಗ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ಆಯಾ ಪಕ್ಷಗಳ ನಾಯಕರೂ ತಮ್ಮ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT