ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಗೊಂದಲ

Last Updated 28 ಜುಲೈ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕ­ರ­ಣದ ತರುವಾಯ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಜಿಪಿಎಸ್‌ ವ್ಯವಸ್ಥೆ, ಸಿ.ಸಿ ಕ್ಯಾಮೆರಾ  ಅಳವಡಿಸಬೇಕು ಎಂದು ನಗರ ಪೊಲೀಸರು ಹೊರಡಿ­ಸಿರುವ  ಮಾರ್ಗಸೂಚಿಗಳು ಇದೀಗ ಖಾಸಗಿ ವಾಹ­ನ­ಗಳ ಮಾಲೀಕರಲ್ಲಿ ಗೊಂದಲ ಮೂಡಿಸಿವೆ.

ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇಲ್ಲದ ಪರಿಣಾಮ ನಿತ್ಯ ಶಾಲಾ ಮಕ್ಕ­ಳನ್ನು ಕರೆದೊಯ್ಯುವ  ಸಾವಿರಾರು ಖಾಸಗಿ ವಾಹನಗಳ ಮಾಲೀ­ಕರು ಇದು ತಮಗೆ ಅನ್ವಯಿಸುತ್ತದೆಯೇ, ಇಲ್ಲವೇ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.

ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಸುಮಾರು 15 ಸಾವಿರ ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು ಹೊತ್ತೊ­ಯ್ಯು­ತ್ತವೆ. ಇವು ಪಾಲಕರು ವೈಯಕ್ತಿಕವಾಗಿ ಬಾಡಿಗೆ ಆಧಾರದಲ್ಲಿ ನಿಯೋಜಿಸಿದ ವಾಹನಗಳಾಗಿವೆ.

ವಾಹನ ಸೌಲಭ್ಯವಿಲ್ಲದ ಶಾಲೆಯಲ್ಲಿ ಕಲಿಯುವ ಮಕ್ಕಳ ಪಾಲ­ಕರು ಅನಿವಾ­ರ್ಯ­ವಾಗಿ ಈ ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿದೆ. ಇದೀಗ, ಆಗಸ್ಟ್ 31ಕ್ಕೆ ಗಡುವು ನೀಡಿ ಪೊಲೀ­ಸರು ಹೊರಡಿಸಿರುವ ಮಾರ್ಗಸೂಚಿ­ಯನ್ವಯ ಶಾಲಾ ಮಕ್ಕಳನ್ನು ಕರೆ­ದೊ­ಯ್ಯುವ ವಾಹನಗಳು ಕಡ್ಡಾಯ­­ವಾಗಿ ಜಿಪಿಎಸ್‌ ವ್ಯವಸ್ಥೆ, ಸಿ.ಸಿ ಕ್ಯಾಮೆರಾ  ಅಳವಡಿಸಬೇಕು. ಜತೆಗೆ, ಚಾಲಕನ ಜತೆಗೆ ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸ ಬೇಕಾಗುತ್ತದೆ.

ನಿರ್ದಿಷ್ಟವಾಗಿ ಯಾವ ಯಾವ ವಾಹನಗಳಿಗೆಲ್ಲ ಈ ಮಾರ್ಗ­ಸೂಚಿ ಅನ್ವಯಿಸುತ್ತದೆ ಎನ್ನುವುದನ್ನು ಪೊಲೀಸ್ ಇಲಾಖೆ ಸ್ಪಷ್ಟ­ವಾಗಿ ಹೇಳಿಲ್ಲ. ಆದ್ದರಿಂದ, ಶಾಲೆಗಳಿಗೆ ಮಕ್ಕಳನ್ನು ಬಿಟ್ಟುಬರಲು ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವಾಹನಗಳ ಮಾಲೀಕರಿಗೆ ಗೊಂದಲ ಮೂಡಿದೆ.

‘ಮಾರ್ಗಸೂಚಿಯು, ಸ್ವಂತ ಸಾರಿಗೆ ವ್ಯವಸ್ಥೆ ಹೊಂದಿದ ಶಾಲೆಯ ವಾಹನ­ಗಳಿಗೆ ಮಾತ್ರವೋ ಅಥವಾ ನಮಗೂ ಕೂಡ ಅನ್ವಯಿಸುತ್ತದೆಯೋ ಎನ್ನು­ವುದು ಈವರೆಗೆ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಇದು ನಮಗೂ ಅನ್ವಯ ಆಗುವುದಾದರೆ ನಾವು ಅದನ್ನು ಪಾಲಿಸಲು ಸಿದ್ಧರಿದ್ದೇವೆ. ಮೊದಲು ಈ ಕುರಿತು ಸ್ಪಷ್ಟತೆ ಮೂಡಲಿ’ ಎನ್ನುತ್ತಾರೆ ಅಖಿಲ ಕರ್ನಾಟಕ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಅಧ್ಯಕ್ಷ ಪಿ.ಎಸ್. ಷಣ್ಮುಗಂ.

‘ಈ ವಾರದಲ್ಲಿ ಸಭೆ ಕರೆದಿದ್ದು, ಅದರಲ್ಲಿ ಮಾರ್ಗಸೂಚಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದೊಮ್ಮೆ ಪಾಲಕರು ಇದನ್ನು ಪಾಲಿ­ಸ­ಬೇಕೆಂದು ಒಮ್ಮತದ ಅಭಿ­ಪ್ರಾಯ ವ್ಯಕ್ತಡಿಸಿದರೆ ಪಾಲಿಸು­ತ್ತೇವೆ’ ಎಂದರು. ಈ ಕುರಿತು ಮಾಹಿತಿ ಪಡೆ­-ಯಲು ಪ್ರಯತ್ನಿಸಿದರೆ ಪೊಲೀಸ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT