ಉಡುಪಿ: ‘ಕಲಾ ಪ್ರಕಾರವು ಅವಶ್ಯಕತೆಗೆ ಅನುಗುಣವಾಗಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಯನ್ನು ಆಧುನಿಕ ಮಾಧ್ಯಮಗಳಲ್ಲಿ ಅಳವಡಿ ಸುವ ಅನಿವಾರ್ಯತೆ ಇದೆ’ ಎಂದು ಮಂಗಳೂರು ಆಕಾಶವಾಣಿಯ ಸಹಾ ಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಹೇಳಿದರು.

ಆಕಾಶವಾಣಿ ಮಂಗಳೂರು, ಉಡುಪಿ ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರ ಮದಲ್ಲಿ ಯಕ್ಷಗಾನ ಅರ್ಥಧಾರಿ ಡಾ. ರಾಘವ ನಂಬಿಯಾರ್ ಅವರ ‘ರಾನಂ ಪ್ರಸಂಗ ಸಂಪುಟ’ ಯಕ್ಷಗಾನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಂದು ಎಲ್ಲ ಕಲೆ
ಗಳೂ ಸಂದಿಗ್ಧ ಘಟ್ಟದಲ್ಲಿವೆ. ಆದ್ದ ರಿಂದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳ ಸಹಾಯ ಪಡೆಯುವ ಅಗತ್ಯವಿದೆ. ಈ ಬಗ್ಗೆ ಕಲಾ ಪ್ರಕಾರದಲ್ಲಿರುವವರು ಚಿಂತಿಸಬೇಕು ಎಂದು ಅವರು ಹೇಳಿದರು.

ಆಕಾಶವಾಣಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಂಗ ಳೂರು ಸೇರಿದಂತೆ ಒಟ್ಟು 32 ಲಕ್ಷ ಕೇಳುಗರಿದ್ದಾರೆ. ಹಾಗಾಗಿ ಆಕಾಶವಾಣಿ ಯಲ್ಲಿ ಯಕ್ಷಗಾನ ತುಂಬಾ ಯಶಸ್ವಿ ಕಲಾಪ್ರಕಾರವಾಗಿ ಮೂಡಿಬಂದಿದೆ ಎಂದರು.

ಕೃತಿ ಪರಿಚಯಿಸಿ ಮಾತನಾಡಿದ ಡಾ. ಪಾದೆಕಲ್ಲು ವಿಷ್ಣುಭಟ್ಟ, ‘ಯಕ್ಷಗಾನ ಕಾಲಮಿತಿಗೆ ಒಳಗಾಗಬೇಕು. ಸಂಕುಚಿತ ಗೊಳ್ಳಬೇಕೆಂಬ ಮಾತು ಅಪಾಯವನ್ನು ಉಂಟು ಮಾಡಬಹುದು. ಇದು ಯಕ್ಷಗಾದ ಬಗ್ಗೆ ಚಿಂತನೆ ಹಾಗೂ ಕೆಲಸ ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಯಕ್ಷಗಾನ ಪ್ರಸಂಗ ಗಳನ್ನು ಗ್ರಂಥದ ರೂಪದಲ್ಲಿ ದಾಖಲು ಮಾಡುವ ಕೆಲಸ ಅಪಾಯ ವನ್ನು ಸೂಚಿಸುವುದಿಲ್ಲ. ಅದು ನಮ್ಮ ಶಕ್ತಿ, ಸಾಮರ್ಥ್ಯ ಹಾಗೂ ಕಲೆಯ ವೈಶಿಷ್ಟ್ಯತೆ ಯನ್ನು ತಿಳಿಸುವ ಪ್ರಯತ್ನ’ ಎಂದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್, ಡಾ. ರಾಘವ ನಂಬಿಯಾರ್ ಉಪಸ್ಥಿತರಿದ್ದರು. ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.