ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ದಾಖಲೀಕರಣ ಅಗತ್ಯ

ಯಕ್ಷಾಯನ ಕಾರ್ಯಕ್ರಮ: ರಾಜ್ಯ ಕಲೆ ಘೋಷಿಸಲು ಡಾ.ಮೋಹನ ಆಳ್ವ ಆಗ್ರಹ
Last Updated 3 ಜುಲೈ 2015, 6:06 IST
ಅಕ್ಷರ ಗಾತ್ರ

ಮೂಡುಬಿದಿರೆ: ಯಕ್ಷಗಾನವನ್ನು ಸರಿಯಾದ ರೀತಿಯಲ್ಲಿ ದಾಖಲೀಕರಿಸಿದರೆ ಮುಂದಿನ ಪೀಳಿಗೆಗೆ ಯಾವುದೇ ಅಡಚಣೆಯಿಲ್ಲದೆ ತಲುಪುತ್ತದೆ. ರಾಜ್ಯ ಸರ್ಕಾರ  ಯಕ್ಷಗಾನ ಕಲೆಯನ್ನು ಕರ್ನಾಟಕದ ರಾಜ್ಯ ಕಲೆಯೆಂದು ಘೋಷಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ವತಿಯಿಂದ ಪದ್ಮಾವತಿ ಕಲಾ ಮಂದಿರದಲ್ಲಿ 5 ದಿನ ಗಳ ಕಾಲ ನಡೆಯಲಿರುವ 18 ನೇ ವರ್ಷ ದ ಯಕ್ಷಾಯನ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಈಶ್ವರ ಭಟ್ ಆಶೀರ್ವಚನ ನೀಡಿದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಕೆ.ವಿ ರಮಣ್ ಅವರು ಅರ್ಚಕ ಅಲಂಗಾರು ದಿ.ಸೀತಾರಾಮ ಭಟ್ ಸಂಸ್ಮರಣ ಭಾಷಣ ಮಾಡಿದರು. ಮಂಗಳೂರು ಎಂಆರ್‌ಪಿಎಲ್‌ನ ಡೆಪ್ಯುಟಿ ಮೆನೇಜರ್ ಲಕ್ಷ್ಮೀ ಕುಮಾರನ್, ಮಂಗಳೂರು ವಿಮಾನ ನಿಲ್ದಾಣ  ಮಾಜಿ ನಿರ್ದೇಶಕ ಎಂ.ಆರ್ ವಾಸುದೇವ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಪೃಥ್ವೀರಾಜ್, ಎಂಐಟಿ ಪ್ರಾಧ್ಯಾಪಕ ಉದಯ ಕುಮಾರ್ ಶೆಟ್ಟಿ, ಪಡುಬಿದ್ರೆ ಸ್ಥಾನಿಕ ಬ್ರಾಹ್ಮಣ ಸಭಾದ ನಿರ್ದೇಶಕ ದಿವಾಕರ್ ರಾವ್, ರಾಮಕೃಷ್ಣ ಭಟ್, ಯಕ್ಷಗಾನದ ಪ್ರಾಯೋಜಕರಾದ ರಮೇಶ್ ಭಟ್ ಕದ್ರಿ ಅವರನ್ನು ಗೌರವಿಸಲಾಯಿತು.

ಶ್ರೀ ಯಕ್ಷದೇವ ಮಿತ್ರ ಕಲಾಮಂಡ ಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಶ್ರೀಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಮಹಾವೀರ ಪಾಂಡಿ  ನಿರೂಪಿಸಿ ದರು. ರವಿಪ್ರಸಾದ್ ಶೆಟ್ಟಿ ವಂದಿಸಿದರು.

500 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಯಕ್ಷಗಾನ, ಶಾಸ್ತ್ರೀಯತೆ ಹೋಲಿಕೆಯಿರುವ ಜನಪದೀಯ ಕಲೆ.
– ಡಾ.ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT