ಬ್ರಿಟಿಷರೊಡನೆ ಹೋರಾಡಿ ಸಾವನ್ನಪ್ಪಿದ ಟಿಪ್ಪು ಅವರಂತಹ ನಿದರ್ಶನಗಳು ಕೈ ಬೆರಳೆಣಿಕೆಯಷ್ಟು ಸಿಗಬಹುದು ಎಂದು ಟಿಪ್ಪುವನ್ನು ಹೊಗಳಿ, ಸಂಕಷ್ಟ ಕಾಲದಲ್ಲಿ ಶೃಂಗೇರಿಯ ಪೀಠಕ್ಕೆ ಆರ್ಥಿಕ ನೆರವು ನೀಡಿ ಅಭಯಹಸ್ತ ಚಾಚಿದ್ದರು ಎಂದು ಅವನ ಸರ್ವಧರ್ಮ ಪ್ರೇಮವನ್ನು ಸ್ಮರಿಸಿ ಟಿಪ್ಪು ಹೆಸರಿನ ವಿಶ್ವವಿದ್ಯಾಲಯವನ್ನು ಡಾ. ಅನಂತಮೂರ್ತಿ, ಬರಗೂರು, ಕೆ. ಮರುಳಸಿದ್ದಪ್ಪ ಇವರೇ ಮೊದಲಾದವರು ಬೆಂಬಲಿಸಿದ್ದಾರೆ. (ಪ್ರ.ವಾ. 8.1.13).

ಸಾರ್ವಜನಿಕರು ಈ ಮೂಲಭೂತ ಮಾಹಿತಿ ಗಮನಿಸಿ: ಕಲ್ಲಿಕೋಟೆಯ ಸೇನಾಪತಿಗಳಿಗೆ `ಕಾಫಿರ'ರನ್ನು ಕೊಲ್ಲಲು ಅವನೇ ಸ್ವತಃ ಬರೆದಿರುವ ಪತ್ರಗಳು ಲಂಡನ್ನಿನಲ್ಲಿದ್ದು ಅವುಗಳ ಅನುವಾದ ನೋಡಿದ್ದೇನೆ. ಶ್ರೀರಂಗಪಟ್ಟಣದಲ್ಲಿ ಅವನು ಆಂಜನೇಯ ಗುಡಿ ಕೆಡವಿ ಕಟ್ಟಿಸಿದ ಮಸೀದಿಯ ಶಾಸನದಲ್ಲಿ, ಅವನ ಖಡ್ಗದ ಮೇಲಿರುವ ಶಾಸನದಲ್ಲಿ `ಕಾಫಿರ'ರನ್ನು (ಮುಸಲ್ಮಾನರಲ್ಲದ ಹಿಂದೂ, ಕ್ರಿಶ್ಚಿಯನ್ ಇತ್ಯಾದಿ) ಕೊಲ್ಲಲು ಆದೇಶಿಸಿದ್ದಾನೆ. ಅವನ ಮಗ ಗುಲಾಮ್ ಮೊಹಮ್ಮದ್ ಬರೆದಿರುವ ಹೈದರ್ ಟಿಪ್ಪು ವೃತ್ತಾಂತ ಎಂಬ ಕೃತಿಯಲ್ಲಿ (ಅದರ ಅನುವಾದ 1885 ರಲ್ಲಿ ಪ್ರಕಟವಾಗಿದೆ). ಟಿಪ್ಪು ಕೇರಳದ ಎಪ್ಪತ್ತು ಸಾವಿರ ಕ್ರಿಶ್ಚಿಯನ್ನರನ್ನು, ಗೋಮಾಂಸ ತಿನ್ನಿಸಿ ಒಂದು ಲಕ್ಷ ಹಿಂದೂಗಳನ್ನು ಮತಾಂತರಿಸಿದ ವಿಷಯವಿದೆ.

ಹಾಗೆಯೇ ಟಿಪ್ಪುವಿಗೆ ಜಾತಕದಲ್ಲಿ ಮೂಢನಂಬಿಕೆ ಇದ್ದು ತನ್ನ ಕಷ್ಟಗಳ ನಿವಾರಣೆಗಾಗಿ ಬ್ರಾಹ್ಮಣರಿಂದ ಯಜ್ಞ ಯಾಗಾದಿ ಮಾಡಿಸಿದ್ದಾನೆಂದಿದೆ. ಶೃಂಗೇರಿ, ಮೇಲುಕೋಟೆಗಳಿಗೆ ಅವನು ದತ್ತಿ ಕೊಟ್ಟದ್ದು ತನ್ನ ಅನಿಷ್ಟ ನಿವಾರಣೆಗಾಗಿಯೇ ಹೊರತು ಭಕ್ತಿಯಿಂದಲ್ಲ. ಶೃಂಗೇರಿಗೆ ಅವನು ಬರೆದ ಪತ್ರಗಳಲ್ಲಿ ಅವನ ಶ್ರದ್ಧೆ ವ್ಯಕ್ತವಾಗಿದ್ದರೂ ಅದೆಲ್ಲ ಬಹುಮಟ್ಟಿಗೆ ತೋರಿಕೆ. ಅವನು ಮಾಡಿದ ಅತ್ಯಾಚಾರಗಳು ಮೈಸೂರು ಪ್ರದೇಶದಲ್ಲಿ ಬಹು ಕಡಿಮೆ.

ಏಕೆಂದರೆ ಅವನ ರಾಜಧಾನಿ ಇದ್ದುದು ಶ್ರೀರಂಗಪಟ್ಟಣದಲ್ಲಿ. ಚಾಣಾಕ್ಷನಾದ ಅವನು ನಡೆಸಿದ ಅನಾಚಾರಗಳು ಆದುದು ದೂರದ ಕೊಡಗು, ಮಲಬಾರ್ ಪ್ರದೇಶಗಳಲ್ಲಿ ಆಗ ಪತ್ರಿಕೆಗಳು, ದೂರದರ್ಶನ, ಆಕಾಶವಾಣಿ ಇಲ್ಲದಿದ್ದ ಕಾಲ: ದೂರದಲ್ಲಿ ನಡೆದ ಘಟನೆಗಳು ಶ್ರೀರಂಗಪಟ್ಟಣ ಪ್ರದೇಶದವರಿಗೆ ತಿಳಿಯುತ್ತಿರಲಿಲ್ಲ. ಕೇರಳದ ಇತಿಹಾಸ ಬರೆದಿರುವ ಪದ್ಮರಾಜ ಮೆನನ್ ಹೇಳುತ್ತಾರೆ: ಆ ಕಾಲದ ಹಿಂದೂಗಳಿಗೆ ಇದ್ದ ಆಯ್ಕೆಗಳು ಎರಡು ಕೊರಾನ್ ಅಥವಾ ಖಡ್ಗ ಪ್ರಹಾರ. ಟಿಪ್ಪು ಮಗ ಬರೆದ ಕೃತಿಯಲ್ಲಿ ದಾಖಲಿಸಿರುವಂತೆ ಮೇಲುಕೋಟೆ, ಶ್ರೀರಂಗಪಟ್ಟಣ ಹೊರತುಪಡಿಸಿ ಉಳಿದ ಕಡೆಯ ದೇವಸ್ಥಾನಗಳನ್ನು ನಾಶಪಡಿಸಲು ಟಿಪ್ಪು ಆದೇಶಿಸಿದ.

ಇಂತಹ ಮಾಹಿತಿಯನ್ನು ಸಾಕಷ್ಟು ಬೆಳಸಬಹುದು ನನ್ನ ಬಳಿ ಆ ದಾಖಲೆಗಳೆಲ್ಲ ಇವೆ. ಅವನು ಖಂಡಿತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಅವನೊಬ್ಬ ವೀರ, ಹಠಮಾರಿ; ಅಂತೆಯೇ ಕ್ರೂರಿ, ಮತಾಂಧ. ಅವನ ಹೆಸರಿನ ವಿಶ್ವವಿದ್ಯಾಲಯವನ್ನು ನಾನು ಖಂಡಿತ ವಿರೋಧಿಸುತ್ತೇನೆ. ಆ ವಿಶ್ವವಿದ್ಯಾಲಯಕ್ಕೆ ಶಿಶುನಾಳ ಷರೀಫ್ ಹೆಸರಿಟ್ಟರೆ ನನ್ನ ಒಪ್ಪಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.