ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ- ರಾಷ್ಟ್ರೀಯ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಸ್ಲಿಮಾ ವೀಸಾ ಅವಧಿ ವಿಸ್ತರಣೆ
ನವದೆಹಲಿ: ದೇಶಭ್ರಷ್ಟರಾಗಿರುವ ಬಾಂಗ್ಲಾದೇಶದ ವಿವಾ­ದಾ­ತ್ಮಕ ಲೇಖಕಿ ತಸ್ಲಿಮಾ ನಸ್ರೀನ್‌ ಅವರ ವೀಸಾ ಅವಧಿ­ಯನ್ನು ಸರ್ಕಾರ ವಿಸ್ತರಿಸಿದೆ.

ಹೊಸ ವೀಸಾ ಅವಧಿ ಮುಂದಿನ ಆಗಸ್ಟ್‌ನಲ್ಲಿ ಮುಗಿಯ­ಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾ-­ರಿಗಳು ತಿಳಿಸಿದ್ದಾರೆ. ಕಳೆದ ತಿಂಗಳಷ್ಟೆ  ಗೃಹ ಸಚಿವಾಲಯವು ಅವರಿಗೆ 2 ತಿಂಗಳವರೆಗೆ ತಾತ್ಕಾಲಿಕ ವೀಸಾ ನೀಡಿತ್ತು

ಅವಧಿ ವಿಸ್ತರಣೆ ಕುರಿತಂತೆ ಲೇಖಕಿ ತಸ್ಲಿಮಾ ಆ. 2ರಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದರು.

ಮುಂಗಡ ಕಾಯ್ದಿರಿಸುವಿಕೆ ಸ್ಥಗಿತ
ಹೈದರಾಬಾದ್‌: ತಿರುಪತಿಯಲ್ಲಿ ವಾರ್ಷಿಕ ಬ್ರಹ್ಮರಥೋತ್ಸವ ಈ ತಿಂಗಳ  26ರಿಂದ ಅಕ್ಟೋಬರ್‌ 4 ರವರೆಗೆ ನಡೆಯಲಿದ್ದು, ಈ ಪ್ರಯುಕ್ತ ಸೆಪ್ಟೆಂಬರ್‌ 25ರಿಂದ ವಸತಿ ಸೌಕರ್ಯಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಿತ್‌ ಷಾ ವಾಗ್ದಾಳಿ
ತಿರುವನಂತಪುರ (ಪಿಟಿಐ): ಕೇರಳದಲ್ಲಿ ಪಕ್ಷದ ನೆಲೆ ಭದ್ರಗೊ­ಳಿ­ಸಲು ಆ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಲು ‘ಕೋಮು ಓಲೈಕೆ’ ವಿಷಯವನ್ನು ಅಸ್ತ್ರವನ್ನಾಗಿಸಿಕೊಂಡರು.

ಮತ ಬ್ಯಾಂಕ್‌ ರಾಜಕಾರಣ ಮಾಡುವ ಮೂಲಕ ರಾಜ್ಯದಲ್ಲಿ ಆಡ­ಳಿತ ನಡೆಸಿದ ಕಾಂಗ್ರೆಸ್‌, ಯುಡಿಎಫ್‌ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರಗಳು ರಾಜ್ಯದ ಅಭಿವೃದ್ಧಿಯನ್ನು ಕಡೆ­ಗಣಿಸಿವೆ ಎಂದು ಸೋಮ­ವಾರ ಇಲ್ಲಿ ಆಯೋಜಿಸ­ಲಾಗಿದ್ದ ಪಕ್ಷದ ತಳಮಟ್ಟದ ಕಾರ್ಯ­ಕರ್ತರ ವಿಶೇಷ ಸಮಾವೇಶ­ದಲ್ಲಿ ದೂರಿದರು.

‘ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ­ದಂತೆ ವಿಚಾರಣೆ ಎದುರಿಸುತ್ತಿರುವ ಪಿಡಿಪಿ ನಾಯಕ ಅಬ್ದುಲ್‌ ನಾಸೀರ್‌ ಮದನಿ ಬಿಡುಗಡೆಗೆ ರಾಜ್ಯದ ಸಮ್ಮಿಶ್ರ ಸರ್ಕಾರ ಅತ್ಯಾಸಕ್ತಿ ತೋರುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT