ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್‌ಲೋಕ್‌ನ ದಿಲ್‌ದಾರ್‌ ಸಂತ...

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ:  ಸುಮಾರು ೧೨ ಎಕರೆ ಜಾಗ­ದಲ್ಲಿ ಹರಡಿಕೊಂಡಿರುವ ರಾಮ್‌­ಪಾಲ್‌್  ಆಶ್ರಮ ಈಗ ಬಿಕೋ ಎನ್ನು­ತ್ತಿದೆ. ಆದರೆ ಇಲ್ಲಿನ ಚಿತ್ರಣವು ಬೇರೆ­ಯದೇ ಕಥೆ ಹೇಳುತ್ತದೆ.  ತಮ್ಮನ್ನು ಸಂತ ಎಂದು ಬಿಂಬಿಸಿ­ಕೊಂಡಿ­ರುವ ರಾಮ್‌­ಪಾಲ್‌ ಈ  ಆಶ್ರಮದಲ್ಲಿ ಎಷ್ಟು ಐಷಾರಾಮದಿಂದ ಬದುಕುತ್ತಿ­ದ್ದರು ಎನ್ನುವುದಕ್ಕೆ ಹೆಜ್ಜೆ ಹೆಜ್ಜೆಗೂ ಪುರಾವೆ ಸಿಗುತ್ತದೆ.

ಐದು ಅಂತಸ್ತಿನ ಕಟ್ಟಡದ ಈ ಆಶ್ರಮ ಅಭೇದ್ಯ ಕೋಟೆಯಂತಿದೆ. ಶೋಧ ಕಾರ್ಯಕ್ಕೆಂದು ಒಳಗೆ ಹೋಗು­ವುದಕ್ಕೆ ಪೊಲೀಸರು ಹರಸಾಹಸ ಪಡ­ಬೇ­ಕಾಯಿತು. ಆಶ್ರಮದ ಸುತ್ತಲೂ ೩೦ ಅಡಿ ಎತ್ತರದ ದೈತ್ಯ ಗಾತ್ರದ ಗೋಡೆ ನಿರ್ಮಿಸಲಾಗಿದೆ.
ಗ್ರಂಥಾಲಯ, ಎಲ್‌ಇಡಿ ಪರದೆ­ಯುಳ್ಳ  ಸಭಾಂಗಣ, ಈಜುಕೊಳ, ವಿಶಾಲ ಸ್ನಾನಗೃಹ, ಸಿಸಿಟಿವಿ ಕ್ಯಾಮೆರಾ  ಸೇರಿದಂತೆ  ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ. 

ಮರ್ಸಿಡಿಸ್‌ ಹಾಗೂ ಬಿಎಂ­ಡಬ್ಲು ಕಾರಿನಲ್ಲಿ ರಾಮ್‌­ಪಾಲ್‌ ಓಡಾಡುತ್ತಿದ್ದರು. ಆಶ್ರಮದ ಸ್ನಾನಗೃಹ­ಗಳಲ್ಲಿ ಅಶ್ಲೀಲ ಸಾಹಿತ್ಯ, ಕಾಂಡೋಮ್‌­ಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ. ಕೆಲವು ಸ್ನಾನ­­ಗೃಹಗಳಲ್ಲಿ ಕೂಡ ಸಿಸಿಟಿವಿ ಅಳವ­ಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಆಶ್ರಮದಲ್ಲಿ ಪತ್ತೆಯಾ­ಗಿವೆ. ತಮ್ಮ ಬೆಂಬಲಿಗರನ್ನು ಆಶೀರ್ವ­ದಿಸಲು ರಾಮ್‌ಪಾಲ್‌್ ಆಶ್ರಮದ ಪಡಸಾಲೆಗೆ ಬರುವ ಸಮಯದಲ್ಲಿ ಕಣ್ಣುಕೋರೈ­ಸುವ ವಿದ್ಯುದ್ದೀಪಗಳು ಬೆಳ­ಗುತ್ತಿದ್ದವು. ಆಶ್ರಮದಲ್ಲಿ ವೈದ್ಯ­ಕೀಯ ಕೇಂದ್ರ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

ತಮ್ಮ  ಅನುಯಾಯಿಗಳು ಮದ್ಯ, ಧೂಮಪಾನ, ಮಾಂಸ, ಮೊಟ್ಟೆ, ಜೂಜು ಎಲ್ಲವನ್ನು ಬಿಡಬೇಕು ಎಂದು ರಾಮ್‌ಪಾಲ್‌ ತಾಕೀತು ಮಾಡು­ತ್ತಿದ್ದರು. ಆಶ್ರಮದಲ್ಲಿ ಹಾಡು, ನರ್ತನಕ್ಕೆ ಅವಕಾಶ ಇರಲಿಲ್ಲ. ಬೇರೆ ದೇವರ ಆರಾಧನೆಗೆ ನಿರ್ಬಂಧ ಹೇರ­ಲಾಗಿತ್ತು.  
ಸೂಫಿ ಸಂತ  ಕಬೀರ್‌ ಅವ­ರನ್ನು  ‘ಅಧಿದೈವ’ ಎಂದು ಹೇಳುವ ರಾಮ್‌­ಪಾಲ್‌್, ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಮಹೇಶ್ವರ) ಪರಿಕಲ್ಪನೆಯನ್ನು ಖಂಡಿ­ಸು­­ತ್ತಾರೆ ಎನ್ನುತ್ತಾರೆ ಬೆಂಬಲಿಗರು

ಶೋಧ: ರಾಮ್‌ಪಾಲ್‌
ಅವರನ್ನು ಬಂಧಿಸಿದ ಬೆನ್ನಲ್ಲಿಯೇ ಪೊಲೀಸರು ಅವರ ಸತ್‌ಲೋಕ್‌್ ಆಶ್ರಮದಲ್ಲಿ ಗುರುವಾರ ಶೋಧ ನಡೆಸಿದರು.
‘ನೀವು ಹೊರಗೆ ಹೋಗಬೇಡಿ. ನಿಮಗೆ ತೊಂದರೆಯಾಗುತ್ತದೆ. ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ’ ಎಂದು ರಾಮ್‌ಪಾಲ್‌್ ಹಾಗೂ ಅವರ ಕಮಾಂಡೊಗಳು ಬೆಂಬಲಿಗರನ್ನು ಹೆದರಿ­ಸುತ್ತಿದ್ದರು ಎನ್ನುವುದನ್ನು ಆಶ್ರಮದಿಂದ ಹೊರಕ್ಕೆ ಬಂದ ಕೆಲವರು    ಬಹಿರಂಗಪಡಿಸಿದ್ದಾರೆ.

ಆರೋಪ ಅಲ್ಲಗಳೆದ ರಾಮ್‌ಪಾಲ್‌: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿ­ಕೊಳ್ಳಲು ತಾವು ಆಶ್ರಮದೊಳಗೆ ಬೆಂಬಲಿಗರನ್ನು ಗುರಾ­ಣಿ­ಯಾಗಿ ಬಳಸಿಕೊಂಡ ಆರೋಪವನ್ನು ರಾಮ್‌ಪಾಲ್‌್ ಅಲ್ಲಗಳೆದಿದ್ದಾರೆ. 

ವಿಶೇಷ ತನಿಖಾ ತಂಡ:  ರಾಮ್‌­ಪಾಲ್‌ ವಿರುದ್ಧದ ಹೊಸ ಪ್ರಕರಣಗ­ಳನ್ನು ತನಿಖೆಗೆ ಒಳಪಡಿಸಲು ಹಿಸ್ಸಾರ್‌ ಎಸ್‌ಪಿ ಸತ್ಯೇಂದ್ರಕುಮಾರ್‌ ನೇತೃತ್ವ­ದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುತ್ತಿದೆ.

ಕ್ಷೀರ ಸ್ನಾನದ ಪಾಯಸ
ಸ್ಥಳೀಯರು ಹೇಳುವ ಪ್ರಕಾರ ರಾಮ್‌­ಪಾಲ್‌್ ನಿತ್ಯವೂ ಹಾಲಿನಿಂದ ಸ್ನಾನಮಾಡುತ್ತಿದ್ದರು. ಈ ಹಾಲನ್ನು ಪಾಯಸ ಮಾಡಿ ಭಕ್ತರಿಗೆ ಪ್ರಸಾದ­ವಾಗಿ ಕೊಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT