ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ: ಮಾದರಿ ಆಂದೋಲನ

ಅಕ್ಷರ ಗಾತ್ರ

ದಾವಣಗೆರೆಯನ್ನು ಸ್ವಚ್ಛ ನಗರ ಮಾಡಲು ಇಲ್ಲಿನ ಕೆಲ ನಾಗರಿಕರು ಮೇಲ್ಪಂಕ್ತಿ ಹಾಕಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ರಾಮಕೃಷ್ಣಾ­ಶ್ರಮದ ಗುರುಗೋವಿಂದಪ್ಪ ಅವರು ಸ್ವಯಂ­ಪ್ರೇರಣೆಯಿಂದ ದಾರಿಯಲ್ಲಿ ಕಸ ತೆಗೆದು ಇತ­ರರನ್ನೂ ಆ ಕೆಲಸಕ್ಕೆ ಪ್ರೇರೇಪಿಸಿದ್ದಾರೆ.

ಅನ್‌ಮೋಲ್ ಶಾಲೆಯ ಸಿ.ಜಿ. ದಿನೇಶ್ ಎಂಬು ವವರು ತರಳಬಾಳು ಬಡಾವಣೆಯಲ್ಲಿ ಕಸದ ಗಾಡಿಗಳ ಸಮರ್ಪಕ ನಿರ್ವಹಣೆಗೆ ಸಹಕರಿಸುವ ಮೂಲಕ,  ಅಂಗಡಿ ಮಾಲೀಕ ಚರಲಿಂಗಯ್ಯ ತಮ್ಮ ಮನೆ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ವಾ­ಗಿಡುವುದರ ಮೂಲಕ ‘ಸ್ವಚ್ಛತಾ ದಾವಣಗೆರೆ’ ಆಂದೋಲನ ಪ್ರಾರಂಭಿಸಿದ್ದಾರೆ.

ಇಂತಹವರ ಸಂಖ್ಯೆ ಸಾವಿರ, ಲಕ್ಷವಾಗ ಬೇಕು. ಜೊತೆಗೆ, ಪಾಲಿಕೆಯ ಆರೋಗ್ಯ ಘಟಕ ಸಹ ನೈರ್ಮಲ್ಯಕ್ಕೆ ಪೂರಕವಾಗಿ ಕಟ್ಟು ನಿಟ್ಟಿನ ಶಿಸ್ತುಕ್ರಮ ಕೈಗೊಂಡರೆ, ಖಂಡಿತಾ ಕೆಲವೇ ದಿನಗಳಲ್ಲಿ ನಮ್ಮದು ಸ್ವಚ್ಛ ನಗರವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT