ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿ

ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಹೇಳಿಕೆ
Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್‌): ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ‘ಸ್ವಚ್ಛ ಭಾರತ’ ಅಭಿ­ಯಾನ­ದಲ್ಲಿ  ಭಾಗ­ವ­ಹಿ­ಸುವುದಾಗಿ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಈ ಕುರಿತು ಆಸ್ಪ್ರೇಲಿಯಾದಿಂದ ಟಿ.ವಿ ವಾಹಿನಿಗೆ ದೂರವಾಣಿಯಲ್ಲಿ ಗುರು­ವಾರ ಪ್ರತಿಕ್ರಿಯಿಸಿದ ಗಂಗೂಲಿ, ‘ಭಾರತ ಅತ್ಯಂತ ದೊಡ್ಡ ದೇಶ. ಜನ­ಸಂಖ್ಯೆ ಹೆಚ್ಚಿ­ರು­­ವುದರಿಂದ ಸಮಸ್ಯೆಗಳು ಅಧಿಕ. ಹಾಗಾಗಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.

ರಾಜಕೀಯ ಪ್ರವೇಶದ ಗಾಳಿಸುದ್ದಿ­ಯನ್ನು ಇದೇ ವೇಳೆ ಅಲ್ಲಗಳೆದ ಅವರು, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಈ ಮಾತನ್ನು ಹಿಂದೆಯೂ ಹೇಳಿದ್ದೇನೆ’ ಎಂದರು.

ಮೋದಿ ಹೆಸರಿಸಿದ ಪ್ರಮುಖರು
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ನೃತ್ಯಗಾರ್ತಿ ಸೋನಾಲ್ ಮನ್‌ಸಿಂಗ್, ನಾಗಲ್ಯಾಂಡ್ ರಾಜ್ಯ­ಪಾಲ ಪಿ.ಬಿ. ಆಚಾರ್ಯ, ಹಾಸ್ಯ­ಗಾರ ಕಪಿಲ್ ಶರ್ಮ, ಈ ನಾಡು ಗ್ರೂಪ್, ಅರುಣ್ ಪುರಿ ಮತ್ತು ಅವರ ಇಂಡಿಯಾ ಟುಡೆ ಗ್ರೂಪ್, ಇಂಡಿಯನ್ ಇನ್‌ಸ್ಟಿ­ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂ­ಟೆಂಟ್ಸ್ ಹಾಗೂ ಮುಂಬೈನ ಖ್ಯಾತ ‘ಡಬ್ಬಾವಾಲಾ’­ಗಳನ್ನು ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಪ್ರಧಾನಿ ಮೋದಿ  ಹೆಸರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT