ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೀಶ್‌ ಗೌಡ ಅರ್ಜಿ ವಿಚಾರಣೆ: ಸುಪ್ರೀಂ ಅಸ್ತು

ಪತ್ರಿಕೆಯಲ್ಲಿ ಮಾನಹಾನಿ ವರದಿ
Last Updated 27 ಏಪ್ರಿಲ್ 2014, 19:34 IST
ಅಕ್ಷರ ಗಾತ್ರ

ನವದೆಹಲಿ:  ಲಂಕೇಶ್‌ ಪತ್ರಿಕೆಯಲ್ಲಿ 1998ರಲ್ಲಿ ತಮ್ಮ ವಿರುದ್ಧ ಮಾನಹಾನಿಯಾಗುವ ರೀತಿಯಲ್ಲಿ ವರದಿ ಬರೆದ ಮೂವರು ಪತ್ರಕರ್ತರ ಮೇಲೆ     ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ನಿವೃತ್ತ ಐಎಎಸ್‌್ ಅಧಿಕಾರಿ ಬಿ.ಎ.ಹರೀಶ್‌್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಒಪ್ಪಿಕೊಂಡಿದೆ.

ಹರೀಶ್‌ ಗೌಡ ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯ­ಮೂರ್ತಿ­ಗಳಾದ ಟಿ.ಎಸ್‌.ಠಾಕೂರ್‌ ಹಾಗೂ ಸಿ.ನಾಗಪ್ಪನ್‌ ಅವರಿದ್ದ ಪೀಠ ನಿರ್ಧರಿಸಿದೆ. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿವರ: ಸಿಇಟಿ ವಿಶೇಷಾಧಿಕಾರಿಯಾಗಿದ್ದ ಹರೀಶ್‌ ಗೌಡ ಅವರ ವಿರುದ್ಧ ಪತ್ರಕರ್ತರಾದ ರವೀಂದ್ರ ರೇಷ್ಮೆ, ಟಿ.ಕೆ. ತ್ಯಾಗರಾಜ್‌ ಹಾಗೂ ಗಂಗಾಧರ್‌್ ಕುಷ್ಟಗಿ ಅವರು ತೇಜೋವಧೆ ಮಾಡುವಂತಹ ವರದಿ ಬರೆದಿದ್ದರು.  
ವಿಚಾರಣಾ ನ್ಯಾಯಾಲಯ ಈ ಮೂವರನ್ನು ತಪ್ಪಿತಸ್ಥರು ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿತ್ತು.  ಆದರೆ,  ಕರ್ನಾಟಕ ಹೈಕೋರ್ಟ್‌್ ಜೈಲು ಶಿಕ್ಷೆ ರದ್ದುಗೊಳಿಸಿ ದಂಡ ವಿಧಿಸಿತ್ತು.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹರೀಶ್‌ ಗೌಡ , ‘ಈ ಪ್ರಕರಣದಲ್ಲಿ  ಜುಲ್ಮಾನೆಗಿಂತ ಸಣ್ಣ ಪ್ರಮಾಣದ ಜೈಲು ವಾಸ ಗುರುತರವಾದದ್ದು ಎನ್ನುವ ತತ್ವವನ್ನು ಹೈಕೋರ್ಟ್‌  ಪರಿಗಣಿಸಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT