ಬೆಂಗಳೂರು: ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಸೇವೆ ನೀಡುವ ಉದ್ದೇಶದಿಂದ ‘ಮೇರು ಕ್ಯಾಬ್ಸ್’ ಸಂಸ್ಥೆಯು ನಗರದಲ್ಲಿ ಗುರುವಾರ ‘ಜೀನಿ ಕ್ಯಾಬ್’ ಸೇವೆಗೆ ಚಾಲನೆ ನೀಡಿದೆ.

ವಿ-ಲಿಂಕ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ನೀರಜ್ ಗುಪ್ತಾ ಮಾತನಾಡಿ, ‘ಕ್ಯಾಬ್ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಪ್ರಯಾಣಿಕರು ಪ್ರತಿ ಕಿ.ಮೀ.ಗೆ ₨12.50 ಪಾವತಿಸಬೇಕು. ದಿನದ 24 ಗಂಟೆ ಹಾಗೂ ವಾರದ ಏಳೂ ದಿನಗಳ ಕಾಲ ಕಸ್ಟಮರ್ ಕೇರ್ ಸೌಲಭ್ಯ ಲಭ್ಯವಾಗಲಿದೆ. ಕ್ಯಾಬ್ನಲ್ಲಿ ನಾಲ್ಕು ಮಂದಿ ಆರಾಮವಾಗಿ ಪ್ರಯಾಣಿಸಬಹುದು’ ಎಂದರು.

ಮೇರು ಕ್ಯಾಬ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಪಾಹ್ವಾ ಮಾತನಾಡಿ, ಕ್ಯಾಬ್ ಸೌಲಭ್ಯ ಪಡೆಯಲು ಪ್ರಯಾಣಿಕರು 3399 3399 ಸಂಖ್ಯೆಗೆ ಕರೆ ಮಾಡಬಹುದು. ಜೀನಿ ಕ್ಯಾಬ್ ಪ್ರಯಾಣ ದರ ಆಟೊ ದರಕ್ಕಿಂತಲೂ ಕಡಿಮೆ’ ಎಂದರು.
ನಟಿ ಪ್ರಣೀತಾ ಸುಭಾಷ್ ನೂತನ ಕ್ಯಾಬ್ ಸೌಲಭ್ಯಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.