ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕ್ರಮಣ’ ಟ್ಯಾಬ್ಲಾಯ್ಡ್‌ ಆಗಿದೆಯೇ?

ಸುದ್ದಿ 2 ನಿಮಿಷ
Last Updated 17 ಮೇ 2015, 19:30 IST
ಅಕ್ಷರ ಗಾತ್ರ

ಮೈಸೂರು: ಐವತ್ತು ವರ್ಷಗಳಿಂದ ಸಾಹಿತ್ಯ ಪತ್ರಿಕೆ ‘ಸಂಕ್ರಮಣ’ ಪ್ರಕಟವಾಗಲು ಚಂದ್ರಶೇಖರ ಪಾಟೀಲನ ಜಿಗುಟತನವೇ ಕಾರಣ. ಹರಿತ ವ್ಯಂಗ್ಯ, ಕುಟುಕುವ ಮಾತು ಇರುವ ಚಂಪಾ ಕಾಲಂಗಾಗಿ ಓದುವವರು ಇದ್ದಾರೆ. ಜತೆಗೆ, ಒಳ್ಳೆಯ ಲೇಖನಗಳೂ ಪ್ರಕಟವಾಗುತ್ತವೆ ಎಂದು ವಿಮರ್ಶಕ ಗಿರಡ್ಡಿ ಗೋವಿಂದರಾಜ ಹೇಳಿದರು.

ಇಲ್ಲಿಯ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ದೇಸಿವಾದ’ ಕುರಿತು ಗಿರಡ್ಡಿಯವರು ಮಾತನಾಡಿದರು. ನಂತರ ಕಡುವಿನಕೋಟೆ ರಾಮಚಂದ್ರ ಅವರು ‘ಸಂಕ್ರಮಣ ಪತ್ರಿಕೆ ಟ್ಯಾಬ್ಲಾಯ್ಡ್‌ ಆಗಿದೆಯೇ?’ ಎಂದು ಕೇಳಿದ ಪ್ರಶ್ನೆಗೆ ಗಿರಡ್ಡಿಯವರು ಉತ್ತರಿಸಿದರು.

ನವ್ಯ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡಬೇಕು ಎನ್ನುವ ಕಾರಣಕ್ಕೆ ಚಂಪಾ, ನಾನು ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರಿ ‘ಸಂಕ್ರಮಣ’ ಶುರು ಮಾಡಿದೆವು. ಅದರ ಮೊದಲ ಸಂಚಿಕೆಯಲ್ಲಿ ಟಿ.ಜಿ. ರಾಘವ ಅವರ ‘ಶ್ರಾದ್ಧ’ ಕಥೆ ಪ್ರಕಟವಾಯಿತು. ಆ ಬಗೆಯ ಕಥೆಯನ್ನು ಇತರ ಪತ್ರಿಕೆಗಳು ಪ್ರಕಟಿಸಿರಲಿಲ್ಲ.

ಹೀಗಾಗಿ, ಪ್ರಯೋಗಶೀಲತೆಗೆ ಅವಕಾಶವಿತ್ತು. 10–12 ವರ್ಷವಾದ ಮೇಲೆ ಆಗ ಬರೆಯುತ್ತಿದ್ದ ಲೇಖಕರು ಮಧ್ಯ ವಯಸ್ಸಿಗೆ ಬಂದಿದ್ದರು, ಪ್ರಸಿದ್ಧರಾಗಿದ್ದರು. ಪತ್ರಿಕೆ ಮುಂದುವರಿಸುವುದು ಬೇಡವೆಂದು ಪತ್ರ ಬರೆದೆ. ಆಮೇಲೆ ಚಂಪಾ ಒಬ್ಬನೇ ನಡೆಸಿದ. ವಿರೋಧಿಗಳನ್ನು ಟೀಕಿಸಲು, ಹಣಿಯಲು ಪತ್ರಿಕೆ ಬಳಸಿಕೊಂಡ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT