ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂಸ್ಕೃತಿಕ ಸೊಬಗಿನ ರಾಯಭಾರಿ ಯಕ್ಷಗಾನ’

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರುಗಾರರಿಗೆ ಪೌರ ಸನ್ಮಾನ
Last Updated 3 ನವೆಂಬರ್ 2015, 6:14 IST
ಅಕ್ಷರ ಗಾತ್ರ

ಕುಂದಾಪುರ: ಆಧುನಿಕತೆಯ ಬದಲಾವ ಣೆಯನ್ನು ಕಾಣುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ನಮ್ಮ ಸಾಂಸ್ಕೃತಿಕ ಸೊಬಗಿನ ರಾಯಭಾರಿಯಂತಿರುವ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಉಳಿದುಕೊಂಡಿ ರುವ ಕಾರಣದಿಂದಾಗಿ ಈ ಭಾಗದ ಯಕ್ಷಗಾನ ಕಲಾವಿದರು ಕಲಾ ಶೋತ್ರುಗಳ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಕುಂದಾಪುರದ ತಹಶೀಲ್ದಾರ್ ಗಾಯತ್ರಿ ನಾಯಕ್ ಹೇಳಿದರು.

ಸೋಮವಾರ ಸಂಜೆ ಇಲ್ಲಿನ ಬೋರ್ಡ್‌ ಹೈಸ್ಕೂಲಿನ ಕಲಾ ಮಂದಿರ ದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರುಗಾರರಿಗೆ ರಾಮಕ್ಷತ್ರಿಯ ಗಣೇಶೋತ್ಸವ ಸುವರ್ಣ ಸಮಿತಿ ಹಾಗೂ ಇತರ ಸಮಾಜ ಸೇವ ಸಂಘಟನೆಗಳು ಜತೆಯಾಗಿ ನೀಡಿದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿ–ಬೆಳೆಸುತ್ತಿರುವ ಯಕ್ಷಗಾನ ಕಲಾವಿದರ ಪರಿಶ್ರಮಕ್ಕೆ ಪದ್ಮ ಭೂಷಣ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳನ್ನು ನೀಡುವ ಮೂಲಕ ಈ ಕಲೆಯ ಹಿರಿಮೆ ಹೆಚ್ಚಿದೆ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವ ಈ ಕಾಲ ಘಟ್ಟದಲ್ಲಿ ಅರ್ಹರಿಗೆ ಪ್ರಶಸ್ತಿ ದೊರೆಯು ತ್ತಿರುವುದರಿಂದಾಗಿ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾರ್ಗೋಳಿ ಗೋವಿಂದ ಶೇರುಗಾರ್, ₹ 6 ವೀಳ್ಯಕ್ಕಾಗಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನ ಇಂದು ಲಕ್ಷಾಂತರ ರೂಪಾಯಿವರೆಗೂ ಬೆಳೆದಿದ್ದರೂ, ಯಕ್ಷಗಾನ ಕಲಾವಿದರ ಜೀವನ ಮಟ್ಟದಲ್ಲಿ ನಿರೀಕ್ಷಿತ ತೃಪ್ತಿ ದೊರೆಕಿಲ್ಲ. ಹಿಂದೆ ಕಲಾವಿದನ ಮೇಲೆ ಅಭಿಮಾನವಿದ್ದಾಗ ಕಲಾಸಕ್ತರು ಬಂಗಾರ ನೀಡಿ, ಹಣ ನೀಡಿ ಗೌರವಿಸು ತ್ತಿದ್ದರು. ಇದೀಗ ಕಾಲ ಬದಲಾಗಿದೆ ಪ್ರಶಸ್ತಿ, ಸನ್ಮಾನಗಳ ಹಿಂದೆ ಪ್ರಭಾವ ಬೇಕು ಎನ್ನುವ ಭಾವನೆಗಳು ಪ್ರಬಲ ವಾಗುತ್ತಿದೆ. 90 ರ ಹರೆಯಕ್ಕೆ ಸಮೀಸು ತ್ತಿರುವ ನನಗೆ ಯಾಕೆ ಈ ಪ್ರಶಸ್ತಿ ಬರು ತ್ತಿಲ್ಲ ಎನ್ನುವ ಖೇದ ಯಾವಾಗಲೂ ಇತ್ತು. ರಾಜ್ಯ ಸರ್ಕಾರ ಈ ಬಾರಿಯ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡು ವುದರೊಂದಿಗೆ ನನ್ನ ಮನದ ನೋವು ಮರೆಯಾಗಿದೆ. ಈ ಪ್ರಶಸ್ತಿ ನನ್ನನ್ನು ಪ್ರೋತ್ಸಾಹಿಸಿದ ಯಕ್ಷಗಾನ ಪ್ರಿಯರಿಗೆ ಸಂದಾಯವಾಗಬೇಕು ಎಂದರು.

ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್, ಉದ್ಯಮಿ ದತ್ತಾನಂದ ಜಿ, ರಾಮಕ್ಷತ್ರೀಯ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಖಾರ್ವಿಸಮಾಜ ಸೇವ ಸಂಘದ ಅಧ್ಯಕ್ಷ ಜಯಾನಂದ ಖಾರ್ವಿ, ಕೆ.ರಾಜೇಶ್‌ ರಾವ್‌ ಪಡುಕೇರಿ, ಜಯರಾಜ್‌ ಪಡುಕೇರಿ, ಕೃಷ್ಣಮೂರ್ತಿ ಯು, ಲಕ್ಷ್ಮೀಶ್‌ ಹವಲ್ದಾರ್‌, ಅರುಣ್‌ ಬಾಣಾ ಇದ್ದರು.

ಶ್ರೀ ರಾಮಕ್ಷತ್ರಿಯ ಗಣೇಶೋತ್ಸವ ಸುವರ್ಣ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು. ಸ್ವಾಗತಿಸಿದರು. ರಾಜೇಶ್ ಕುಂದಾಪುರ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು. ಪತ್ರಕರ್ತ ಯು.ಎಸ್ ಶೆಣೈ ಸನ್ಮಾನ ಪತ್ರ ವಾಚಿಸಿದರು. ರಾಜಶೇಖರ ಹೆಗ್ಡೆ ಹಾಗೂ ಗೋಪಾಲ ಪೂಜಾರಿ ನಿರೂಪಿಸಿದರು, ರಾಮದಾಸ್ ನಾಯಕ್ ವಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT