ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ರೂಗೆ ಏರ್‌ಇಂಡಿಯಾ ಟಿಕೆಟ್‌!

Last Updated 27 ಆಗಸ್ಟ್ 2014, 10:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ  ಏರ್‌ ಇಂಡಿಯಾ ಸೀಮಿತ ಅವಧಿಗೆ ದೇಶೀಯ ಮಾರ್ಗದ ಟಿಕೆಟ್‌ ದರವನ್ನು ತೆರಿಗೆ ಹೊರತುಪಡಿಸಿ 100ರೂಗೆ ತಗ್ಗಿಸಿದೆ. ‘ಏರ್‌ ಇಂಡಿಯಾ ದಿನಾಚರಣೆ’ ಅಂಗವಾಗಿ ಪ್ರಯಾ­ಣಿಕರಿಗೆ ಈ ಆಕರ್ಷಕ ಕೊಡುಗೆ ಲಭಿಸಲಿದೆ.

2007ರ ಆಗಸ್ಟ್‌ 27ರಂದು ಏರ್‌ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ವಿಲೀನಗೊಂಡು  ‘ಏರ್‌ ಇಂಡಿಯಾ’ ಜನ್ಮ ತಳೆದಿತ್ತು. ಇದರ ಸ್ಮರಣೆಗಾಗಿ ಬುಧವಾರ ಈ ಕೊಡುಗೆ ಪ್ರಕಟಿಸಲಾಗಿದೆ.

ಪ್ರಯಾಣಿಕರು ಏರ್‌ ಇಂಡಿಯಾ ವೆಬ್‌ಸೈಟ್‌ ಮೂಲಕ ಆಗಸ್ಟ್‌ 27ರಿಂದ 31ರ ಒಳಗಾಗಿ ಟಿಕೆಟ್‌ ಕಾಯ್ದಿರಿ­ಸಬೇಕು. ಈ ಟಿಕೆಟ್‌ ಬಳಸಿ ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 30ರ ಒಳಗೆ ಪ್ರಯಾಣಿಸಬಹುದು ಎಂದು ಕಂಪೆನಿ ಹೇಳಿದೆ.

ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಲು ಒಮ್ಮಲೆ ಮುಗಿಬಿದ್ದಿದ್ದರಿಂದ ಈ ಕೊಡುಗೆ ಹೊರಬಿದ್ದ ಕೆಲವು ಗಂಟೆಗಳಲ್ಲೇ ಏರ್‌ ಇಂಡಿಯಾ ವೆಬ್‌ ಸೈಟ್‌ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT