ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಚೀನಾದ ದಾಲಿಯೆನ್ ನಗರಕ್ಕೆ ಹೋಗಿ ಬಂದನಂತರ ಮಾಧ್ಯಮದವರೊಡನೆ ಮಾತನಾಡುತ್ತಾ ‘ಚೀನಾ ದೇಶದ ಪ್ರಧಾನಿಯನ್ನು ಭೇಟಿ ಮಾಡಿದೆ. ಆದರೆ ಅವರ ಹೆಸರು ಮಾತ್ರ ಉಚ್ಚಾರ ಮಾಡಲು ಆಗುವುದಿಲ್ಲ. ಅವರಿಗೂ ನನ್ನ ಹೆಸರು ಹೇಳಲು ಆಗಲಿಲ್ಲ’ ಎಂದು ಹೇಳಿದ್ದು ಈ ಲೇಖನಕ್ಕೆ ಪ್ರೇರಣೆ.

ದಶಕಗಳಿಂದ ಇರುವ ಚೀನಾದ ಏಕಭಾಷಾ ನೀತಿಯಿಂದಾಗಿ ಇಂದು ಅವರಿಗೆ ಬೇರೆ ಭಾಷೆಗಳ ಪರಿಣತಿ ಸ್ವಲ್ಪ ಕಷ್ಟವೇ. ಆದರೆ ಅವರ ಭಾಷೆ ನಾವು ಕಲಿಯುವುದು ಕಷ್ಟವೇನಲ್ಲ. ಅಲ್ಲಿಯ ಅಲ್ಪಸಂಖ್ಯಾತರ ಭಾಷೆಗಳಾದ ಉಯ್ಗುರ್, ಮಂಗೋಲಿಯನ್, ಟಿಬೆಟನ್ ಭಾಷೆಗಳಿಗೆ ಪ್ರೋತ್ಸಾಹ ಇಲ್ಲದೆ ಅವು ಅಳಿವಿನಂಚಿಗೆ ಬಂದುಬಿಟ್ಟಿದ್ದವು. ಆದರೆ ಬಹುಭಾಷಾ ನೀತಿಯಿರುವ ನಾವು ದಿನನಿತ್ಯ ಕನಿಷ್ಠ ಮೂರು ಭಾಷೆಗಳನ್ನಾದರೂ ಕೇಳಿಸಿಕೊಳ್ಳುತ್ತೇವೆ; ಮಾತನಾಡುತ್ತೇವೆ.

ಸಿದ್ದರಾಮಯ್ಯ ಅವರು ಚೀನಾದ ಪ್ರಧಾನಿಯ ಹಾಗೂ ಅಧ್ಯಕ್ಷರ ಹೆಸರುಗಳನ್ನೂ ಕೇಳಿಸಿಕೊಂಡು ಕನ್ನಡದಲ್ಲಿ ಬರೆದುಕೊಂಡಿದ್ದರೆ ಈ ತರಹದ ಪೇಚಿಗೆ ಸಿಕ್ಕಿಕೊಳ್ಳುತ್ತಿರಲಿಲ್ಲ.

ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆಯಾದ ಎರಡು ಚೀನಿ ಹೆಸರುಗಳು ಪ್ರಧಾನಿಯ Li Keqiang ಮತ್ತು ಅಧ್ಯಕ್ಷರ Xi Jinping. ಕನ್ನಡದಲ್ಲಿ ಅವು ಲೀ ಕ ಚ್ಯಾಂಗ್. ಹಾಗೂ ಶಿ ಜಿನ್ ಪಿಂಗ್ ಎಂದಾಗುತ್ತವೆ. ಈ ಉಚ್ಚಾರ ಕನ್ನಡಕ್ಕೆ ತೀರಾ ಹತ್ತಿರವಾಗಿವೆ.

ಕನ್ನಡದಲ್ಲಿರು ವಂತೆ ಚೀನಿ ಭಾಷೆಯಲ್ಲೂ ಚ ಛ ಇವೆ. ಹಾಗೆಯೇ ಸ ಶ ಇವೆ. ಇಂಗ್ಲಿಷ್ ವರ್ಣ ಮಾಲೆಯ Q ಮತ್ತು X ನ್ನು ನಾವು ಛ , ಶ ಎಂದು ಓದಿಕೊಳ್ಳಬೇಕು. ಅಕ್ಷರಗಳನ್ನು ಇತರ ಅಕ್ಷರಗಳಿಗೆ ಜೋಡಣೆ ಮಾಡಿದಾಗ ಮಾತ್ರ ಅರ್ಥವುಳ್ಳ ಪದಗಳಾಗುತ್ತವೆ. ಆದರೆ ಚೀನೀ ಭಾಷೆಯಲ್ಲಿ ಒಂದೊಂದು ಶಬ್ದಕ್ಕೂ ಅರ್ಥವಿರುತ್ತದೆ ಮತ್ತು ಅವುಗಳ ಜೋಡಣೆ ಮಾಡಿದಾ ಗಲೂ ಅರ್ಥಗಳಿವೆ. ಚ ಅಥವಾ ಛ ವನ್ನು ಹೇಳುವ ರೀತಿಯಲ್ಲಿ , ಧ್ವನಿಗಳ ಏರಿಳಿತದ ಬದಲಾವಣೆಯಲ್ಲಿ ಒಂದೇ ಶಬ್ದಕ್ಕೆ ಹಲವಾರು ಅರ್ಥಗಳಿರಬಹುದು. ಹಾಗೂ ಇತರ ಶಬ್ದಗಳೊಡನೆ ಜೋಡಿಸಿದಾಗ ಇನ್ನೊಂದು ಅರ್ಥ ಬರುತ್ತದೆ. ಹಾಗಾಗಿ Fei ಎಂದರೆ ಹಾರು ji ಎಂದರೆ ಯಂತ್ರ. ಎರಡನ್ನೂ ಜೋಡಿಸಿದಾಗ ಎರೋ ಪ್ಲೇನ್ ಆಗುತ್ತದೆ. ಹಾಗೆಯೇ da ಎಂದರೆ ಹೊಡಿ zi ಅಂದರೆ ಶಬ್ದ. ಎರಡೂ ಸೇರಿದರೆ ಶಬ್ದವನ್ನು ಹೊಡಿ– ಟೈಪ್ ರೈಟರ್ ಎಂಬ ಅರ್ಥ ಬರುತ್ತದೆ. ಚೀನಿ ಭಾಷೆ ಕಲಿಯುವುದು ತುಂಬಾ ಸ್ವಾರಸ್ಯಕರ, ಬರವಣಿಗೆಯೂ ಹಾಗೆಯೇ.

ನಮ್ಮ ಮಾಧ್ಯಮದವರೂ ಚೀನಿ ಅಧ್ಯಕ್ಷರ ಹೆಸರನ್ನು ಕ್ಸಿ ಜಿನ್ ಪೆಂಗ್ ಎಂದು ಬರೆಯುತ್ತಾರೆ. ಹಾಗೆಯೇ Xian ( ಶಿ ಆನ್) ನಗರವನ್ನು ಕ್ಸಿಯಾನ್ ಎಂದು ಬರೆಯುತ್ತಾರೆ. ಆದರೆ ಬೈಜಿಂಗ್ ಎನ್ನುವುದನ್ನು ಏಕೆ ಬೀಜಿಂಗ್ ಅನ್ನುತ್ತಾರೋ ಗೊತ್ತಾಗುವುದಿಲ್ಲ. ಅಂತದೇ ಸ್ಪೆಲ್ಲಿಂಗ್ ಇರುವ ಲೆಬನಾನ್ ದೇಶದ ರಾಜಧಾನಿಯನ್ನು ಬೈರೂತ್ ಅನ್ನುತ್ತಾರೆ. ಆದರೆ ಬೈಜಿಂಗ್ ಹೇಗೆ ಬೀಜಿಂಗ್ ಆಗುತ್ತದೆ?
ಚೀನಿ ಭಾಷೆಯ ಇನ್ನೊಂದು ವಿಶೇಷ ಅಂದರೆ ಸ್ಥಳನಾಮಗಳು. ಅವುಗಳ ಮೂಲ ಹುಡುಕುವುದು ಬುದ್ಧಿಗೆ ಒಳ್ಳೆಯ ಕಸರತ್ತು ಕೊಡುವಂತಹವು. ಉದಾಹರಣೆಗೆ ಬೈ ಜಿಂಗ್ ಅಂದರೆ ಉತ್ತರದ ನಗರ, ಹೂ ನಾನ್ ಅಂದರೆ ಸರೋವರದ ದಕ್ಷಿಣ, ಹೂ ಬೈ ಅಂದರೆ ಸರೋವರದ ಉತ್ತರ. ಶಾಂಗ್ ಹಾಯ್ ಸಮುದ್ರದ ಮೇಲಿನ ನಗರ ಅಂದುಕೊಳ್ಳಬೇಕು. ನಾನ್ ಜಿಂಗ್ ದಕ್ಷಿಣಕ್ಕಿರುವ ನಗರ. ಶಿಯಾನ್ ಅಂದರೆ ಪಶ್ಚಿಮದ ಶಾಂತಿಯುತ ನಗರ. ನದಿ, ಬೆಟ್ಟಗಳ ಉತ್ತರ, ದಕ್ಷಿಣ, ಪೂರ್ವ ಪಶ್ಚಿಮದಲ್ಲಿರುವವೆಲ್ಲ ನಗರಗಳ ಸ್ಥಳಗಳ ಹೆಸರುಗಳಾಗಿವೆ. ಆದರೆ ಪೂರ್ವದ ನಗರ ಚೀನಾದಲ್ಲಿ ಇಲ್ಲ. ಚೀನಿಯರು ಟೋಕಿಯೊ ನಗರವನ್ನು ಪೂರ್ವದ ನಗರ ಎನ್ನುತ್ತಾರೆ.

ಚೀನಿಯರು ನಮ್ಮ ಹೆಸರುಗಳನ್ನು ಉಚ್ಚಾರ ಮಾಡುವುದು ಕಷ್ಟ. ತಮ್ಮ ಅನುಕೂಲಕ್ಕಾಗಿ, ನಮ್ಮ ಹೆಸರುಗಳನ್ನು ಹೇಳಿಸಿಕೊಂಡು ಭಾಷಾಂತರ ಮಾಡಿಬಿಡುತ್ತಾರೆ. ಅದಾಗದಿದ್ದರೆ ಅದಕ್ಕೆ ಹತ್ತಿರವಿರುವ ಚೀನಿ ಹೆಸರುಗಳನ್ನು ಕೊಟ್ಟುಬಿಡುತ್ತಾರೆ. ಹಾಗಾಗಿ ನ್ಯೂ ಡೆಲ್ಲಿ ಅವರಿಗೆ ಶಿನ್ ದ ಲಿ ಆಗಿಬಿಡುತ್ತದೆ. ನ್ಯೂ ಅನ್ನುವುದು ಚೀನಿಯಲ್ಲಿ ಬರೆಯಬಹುದು. ಆದರೆ ಅದು ಉಚ್ಚಾರಕ್ಕೆ ಅನುಗುಣವಾಗಿ ಹೆಂಗಸು ಅಥವಾ ಹಸು ಎನ್ನುವ ಅರ್ಥಕೊಡಲೂಬಹುದು. ಶಿನ್ ಅಂದರೆ ಹೊಸತು. ಹಾಗಾಗಿ ನ್ಯೂ ಡೆಲ್ಲಿ ಶಿನ್ ದಲಿ! ಇಂದಿರಾ ಗಾಂಧಿಯವರನ್ನು ಗಾಂಧಿ ನ್ಯೂ ಶ್ ಅನ್ನುತ್ತಾರೆ ಅಂದರೆ ಲೇಡಿ ಗಾಂಧಿ ಅನ್ನುವ ಅರ್ಥ. ರವೀಂದ್ರನಾಥ ಟ್ಯಾಗೋರರನ್ನು ಅವರು ಹೇಳುವ ರೀತಿ ಇಂಗ್ಲಿಷ್ ಭಾಷೆಯ ಇಂಗ್ಲಿಷ್ ನ ಟೈಗರ್ ಹಾಗೆ ಕೇಳಿಸುತ್ತದೆ. ಡಾ. ಕೊಟ್ನೀಸ್ ಅವರಿಗೆ ಕೆ ದೇ ಹ್ವಾ ಎನ್ನುವ ಚೀನಿ ಹೆಸರೇ ಕೊಟ್ಟುಬಿಟ್ಟಿದ್ದಾರೆ.

ಚೀನಿ ಭಾಷೆಯಲ್ಲಿ ನಮ್ಮಲ್ಲಿರುವಂತೆ ವರ್ಣಮಾಲೆ ಇಲ್ಲ. ಬದಲಾಗಿ ಅವರ ಬರಹವನ್ನು ಕೇರೆಕ್ಟೆರ್ ಅನ್ನುತ್ತಾರೆ. ಇಂತಹ ನಲವತ್ತು ಸಾವಿರ ಕೇರೆಕ್ಟೆರ್ ಇವೆ ಅನ್ನುವುದು ಉತ್ಪ್ರೇಕ್ಷೆ ಯಾದರೂ ಹಲವಾರು ಸಾವಿರಗಳಂತೂ ಇವೆ. ಸುಮಾರು ಮೂರು, ನಾಲ್ಕು ಸಾವಿರ ಕಲಿತರೆ ಇನ್ನೊಂದು ಎರಡು ಸಾವಿರವನ್ನು ಗುರುತಿಸಬಹುದು. ಅವನ್ನು ಗುರುತಿಸುವುದಕ್ಕೆ ಸುಲಭ ಮಾರ್ಗಗಳಿವೆ. ಉದಾಹರಣೆಗೆ ಎಲ್ಲೆಲ್ಲಿ ನೀರು ಅರ್ಥ ಬರುತ್ತದೋ ಅಲ್ಲೆಲ್ಲ ನೀರಿನ ಸಂಕೇತ ವಾದ ಮೂರು ತೊಟ್ಟುಗಳು ಇರುತ್ತವೆ. ಹೆಂಗಸು ಅರ್ಥಬರುವ ಶಬ್ದ ಆದರೆ ಹೆಂಗಸಿನ ಸಂಕೇತವಿರುತ್ತದೆ. ನಿಘಂಟಿನ ಸಹಾಯದಿಂದ, ಸತತ ಅಭ್ಯಾಸದಿಂದ ಚೀನಿ ಭಾಷೆಯನ್ನು ಕಲಿತು ಕೊಳ್ಳಬಹುದು. ಹಳ್ಳಿಗಳಲ್ಲಿರುವ ಚೀನಿಯರು, ಓದುವ, ಬರೆಯುವ ಅಭ್ಯಾಸ ಇಟ್ಟುಕೊಳ್ಳದೆ ಇರುವ ರೈತಾಪಿ ಜನರು ಕಾಲಕ್ರಮೇಣ ಅನಕ್ಷ ರಸ್ಥರಾಗಿಬಿಡುವ ಸಾಧ್ಯತೆಯೂ ಇದೆ. ಚೀನಾ ದಲ್ಲಿ ಬರೇ ಐನೂರು ಕೇರೆಕ್ಟೆರ್ ಗೊತ್ತಿರುವವ ರನ್ನು ಅನಕ್ಷರಸ್ಥರೆಂದೇ ಪರಿಗಣಿಸಲಾಗುತ್ತದೆ. !

ಚೀನಿ ಭಾಷೆಯನ್ನು ಕಲಿಯಲು ಪಾಶ್ಚಾತ್ಯರು ಹುಟ್ಟುಹಾಕಿದ ಒಂದು ಕ್ರಮವನ್ನು ವೇಡ್ ಜೈಲ್ಸ್ ಸಿಸ್ಟಮ್ ಎನ್ನುತ್ತಾರೆ. ಈ ವಿಧಾನ ಚೀನಿ ಭಾಷೆಯನ್ನು ವಿದೇಶಿಗರಿಗೆ ಕಲಿಸಲು ಸುಲಭವಾದರೂ ಅವರ ಉಚ್ಚಾರಣೆಗೆ ಹತ್ತಿರವಿರಲಿಲ್ಲ. ಚೀನಿ ಕಮ್ಯುನಿಸ್ಟರು 1949ರಲ್ಲಿ ಅಧಿಕಾರಕ್ಕೆ ಬಂದ ನಂತರ ಹುಟ್ಟುಹಾಕಿದ ಕ್ರಮವಾದ ಪಿನ್ ಯಿನ್ - ಸ್ವರ ಉಚ್ಚಾರ ವಿಧಾನ ಇಂದು ಚಾಲ್ತಿಯಲ್ಲಿದೆ. ಹಾಗಾಗಿ ನಾವು ಇತಿಹಾಸದಲ್ಲಿ ಓದಿರುವ ಚೀನಾದ ಬೌದ್ಧ ಪ್ರವಾಸಿ ಹೂ ಯಾನ್ ತ್ಸಾಂಗ್ ಈಗ ಸ್ವಾನ್ ಜಾಂಗ್ ಆಗುತ್ತಾನೆ. ಮಾವೋ ತ್ಸೆ ತುಂಗ್ ಇಂದು ಮಾವೋ ಜೆ ಡಾಂಗ್ ಆಗುತ್ತಾರೆ. ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಚೀನಾದ ಪ್ರಾಂತ್ಯ ಸಿಂಕಿyangಯಾಂಗ್ ಇಂದು ಶಿನ್ ಜಿಯಾಂಗ್ ಆಗಿದೆ.

ನಮ್ಮ ಎರಡು ದೇಶಗಳ ನಡುವೆ 1962 ರಲ್ಲಿ ನಡೆದ ಯುದ್ಧದಿಂದ ನಮ್ಮ ಮನಸ್ಸಿಗೆ ಆದ ಆಘಾತದಿಂದ ಇಂದಿಗೂ ಚೇತರಿಸಿಕೊಂಡಿಲ್ಲ. ಚೀನಿಯರು ನಂಬಿಕೆ ದ್ರೋಹ ಎಸಗಿದ್ದಾರೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಆದರೆ ಅವರ ರೀತಿ ರಿವಾಜು ನಾವು ಅರ್ಥ ಮಾಡಿಕೊಂಡಹಾಗಿಲ್ಲ. ನಾವು ಅವರಿಗೆ ‘ನಾವು ನೀವು ಭಾಯಿ, ಭಾಯಿ’ಅಂದರೆ ಅವರು ‘ಹೌದು’ ಅಂದೇ ಅನ್ನುತ್ತಾರೆ. ‘ಅಲ್ಲ’ ಎಂದು ಅವರ ಮನಸ್ಸಿನಲ್ಲಿದ್ದರೂ ಅವರು ಯಾವತ್ತೂ ಮುಖಕ್ಕೆ ರಾಚಿದಂತೆ ಮಾತನಾಡುವುದಿಲ್ಲ. ಅದಕ್ಕೇ ಬಲ್ಲವರು ಹೇಳುವುದು ನಮ್ಮ ಸ್ನೇಹಿತರಿಗಿಂತ ನಾವು ನಮ್ಮ ವೈರಿ ಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು ಎಂದು.

ಚೀನಾ ತನ್ನ ದೀರ್ಘ ಇತಿಹಾಸದಲ್ಲಿ ದೇಶದ ಒಗ್ಗಟ್ಟು ಸಾಧಿಸಲು ಸರ್ವ ಪ್ರಯತ್ನ ಮಾಡಿಕೊಂಡು ಬಂದಿದ್ದು, ಕ್ರಿ.ಪೂ. ಶತಮಾನಗಳಿಂದಲೇ ಅವರು ದೇಶದ ಇತಿಹಾಸದ ಅಧಿಕೃತ ದಾಖಲೆಗಳನ್ನೂ ಇಟ್ಟುಕೊಂಡವರು. ಆದರೆ ನಮ್ಮ ಇತಿಹಾಸ ನಡೆದುಕೊಂಡು ಬಂದಿರುವ ದಾರಿಯೇ ಬೇರೆ. ಗಡಿ ಪ್ರದೇಶದ ಭೂ ಭಾಗದ ಮಾಹಿತಿಗಳು, ದಾಖಲೆಗಳನ್ನೂ, ನಕ್ಷೆಗಳನ್ನೂ ಇಟ್ಟುಕೊಂಡಿದ್ದು ನಮ್ಮನ್ನು ದಂಗು ಬಡಿಸು ತ್ತಾರೆ. ನಾವು ನಮ್ಮ ಗಡಿ ಭಾಗದ ದಾಖಲೆ ಗಳನ್ನು ಒದಗಿಸುವುದು ಸ್ವಲ್ಪ ಕಷ್ಟವೇ. ಶಾಂತಿಯುತವಾಗಿ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದೇ ನಮಗೆ ಇರುವ ಏಕೈಕ ಮಾರ್ಗ.

ನಮ್ಮ ಸಾಮಾನ್ಯ ಜನರಲ್ಲಿ ಚೀನಾದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಕೇರಳದ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಸಂಶೋಧನೆ ಮಾಡಲು ಬಂದಿದ್ದ ನನ್ನ ಚೀನಿ ಗೆಳತಿಯನ್ನು ಸಹಪಾಠಿ ಯೊಬ್ಬಳು ‘ನೀವು ಯಾವ ದೇಶದವರು’ ಎಂದು ಕೇಳಿದರಂತೆ, ಅದಕ್ಕೆ ಇವಳು ಚೀನಾ ಅಂದ ಕೂಡಲೇ ‘ಓ ಟೋಕಿಯೊ’ ಎಂದಳಂತೆ. ಚೀನಾದ ಸಾಮಾನ್ಯ ಜನರಿಗೂ ಭಾರತದ ಬಗ್ಗೆ ಒಂದಿಷ್ಟು ಸರಿಯಾದ ಮಾಹಿತಿ ಇದೆ. ಅದೇಕೋ ನಮಗೆ ಪಾಶ್ಚಿಮಾತ್ಯ ದೇಶಗಳೆಂದರೆ ಇನ್ನೂ ಮೋಹ ಬಿಟ್ಟಿಲ್ಲವೋ ಏನೋ. ಏಷ್ಯಾ ಖಂಡ ದವರ ಬಗ್ಗೆ ನಮ್ಮ ತಿಳಿವಳಿಕೆ ಸಾಲದು, ಅದು ಪೂರ್ವಗ್ರಹಗಳಿಂದ ಕೂಡಿದ್ದು ಎನ್ನಬಹುದು.

ಭಾರತದ ಎಲ್ಲ ರಾಜ್ಯಗಳಲ್ಲೂ ಏರಿಯ ಸ್ಟಡೀಸ್ ಡಿಪಾರ್ಟಮೆಂಟ್ ಎನ್ನುವ ಅಧ್ಯಯನ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಇವೆ. ಆದರೆ ಕರ್ನಾಟಕದಲ್ಲಿ ಇವು ಇಲ್ಲ. ಇದ್ದಿದ್ದರೆ ನಮ್ಮ ನೆರೆಹೊರೆ ದೇಶಗಳ ಅಧ್ಯಯನ ಸಾಧ್ಯವಾಗು ತ್ತಿತ್ತೇನೋ. ಚೀನಾ ದೇಶಕ್ಕೆ ಸಂಬಂಧಿಸಿದಂತೆ ಇರುವ ಅಧ್ಯಯನ ಸಂಸ್ಥೆಗಳೆಲ್ಲ ದೆಹಲಿ ಮತ್ತು ಕೋಲ್ಕತ್ತಾಗಳಲ್ಲಿದ್ದು ದಕ್ಷಿಣ ಭಾರತೀಯರು ಚೀನಾದೊಡನೆ ಯಾವ ಸಂಬಂಧವೂ ಇಲ್ಲದಂತೆ ಆಗಿದೆ. ಆದರೆ ಇಂದು ಅವೆಲ್ಲ ಬದಲಾವಣೆ ಆಗುತ್ತಿದೆ. ಎಂಬತ್ತರ ದಶಕದಿಂದಲೂ ರೇಡಿಯೊ ಬೈಜಿಂಗ್ ತಮಿಳಿನಲ್ಲಿ ವಾರ್ತೆಗಳನ್ನು ಪ್ರಸಾರ ಮಾಡುತ್ತಲೇ ಬಂದಿದೆ. ಹಿಂದಿ ಯಲ್ಲಂತೂ ವಾರ್ತೆ ಇದ್ದೇ ಇದೆ.

ಇತ್ತೀಚೆಗೆ ಚೀನಾ ಹಾಗೂ ಭಾರತದ ಮಧ್ಯೆ ವಿರಸ ಕಡಿಮೆಯಾಗಿ ಸಾಮಾನ್ಯ ಜನರೂ ಚೀನಾಕ್ಕೆ ಹೋಗಿ ಬರುವಂತಾಗಿದೆ. ಇತ್ತೀಚೆಗೆ ಬರೇ ತಮಿಳುನಾಡಿನಿಂದ ಎರಡು ಸಾವಿರ ವೈದ್ಯ ಕೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಚೀನಾಕ್ಕೆ ಹೋಗಿದ್ದಾರೆ. ಅಂದ ಮೇಲೆ ಚೀನಿ ಭಾಷೆ ಕಲಿಯಲು ಯಾವ ಅಡಚಣೆಯೂ ಇರಬಾರ ದಷ್ಟೇ. ಈಗಾಗಲೇ ಚೀನಿ ಸರ್ಕಾರ ಭಾರತೀಯ ವಿದ್ಯಾರ್ಥಿಗಳಿಗೆ ಚೀನಿ ಭಾಷೆ ಕಲಿಯಲು ವಿದ್ಯಾರ್ಥಿವೇತನ ಗಳನ್ನೂ ಕೊಡುತ್ತಿದೆ.

ಇಂದು ಚೀನಾ ವಿಶ್ವದ ನಾಲ್ಕನೇ ದೊಡ್ಡ ದೇಶ. ದೇಶದ ಎಲ್ಲಾ ಗಡಿಭಾಗಗಳಲ್ಲಿ ಬುಡ ಕಟ್ಟಿನ ಜನರು ಇದ್ದು ಅದೇ ಬುಡಕಟ್ಟು ಜನರು ಇತರ ದೇಶಗಳಲ್ಲಿಯೂ ಇದ್ದಾರೆ. ಚೀನಾ ಅವರನ್ನು ಸಂಶಯದಿಂದ ನೋಡಿದ್ದ ಕಾಲವೂ ಒಂದಿತ್ತು. ನಮ್ಮಲ್ಲಿರುವಷ್ಟು ನೂರಾರು ಬುಡ ಕಟ್ಟು ಜನಾಂಗಗಳು ಇರದಿದ್ದರೂ ಅವರಲ್ಲಿಯೂ ಐವತ್ತಾರು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ ದವರೂ ಇದ್ದಾರೆ. ಅವರೆಲ್ಲರನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಆದ್ದರಿಂದ ನಾವೂ ಚೀನಾದ ಬಗ್ಗೆ ಇರುವ ಧೋರಣೆಗಳನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾಗಿದೆ. ಚೀನಾಕ್ಕೂ ‘ಸಮಸ್ಯೆ’ ಎನಿಸಿರುವ ನೆರೆಕರೆ ದೇಶಗಳಿವೆ. ಚೀನಾ, ಜಪಾನ್ ಹಾಗೂ ಕೊರಿಯಾ ದೇಶಗಳ ಮಧ್ಯೆಯೂ ಭಿನ್ನಾಭಿಪ್ರಾಯಗಳಿವೆ. ಆಗಿಂದಾಗ್ಗೆ ಆ ದೇಶಗಳಲ್ಲಿನ ವಿದೇಶಾಂಗ ಮಂತ್ರಿಗಳಲ್ಲದೆ , ಚರಿತ್ರಕಾರರೂ, ವಿದ್ವಾಂಸರೂ ಒಂದಾಗಿ ಬಿಕ್ಕಟ್ಟುಗಳನ್ನು ಪರಿಹರಿಸಲು ಮಾರ್ಗಗಳನ್ನು ಹುಡುಕುತ್ತಾರೆ. ಇಂತಹ ಸರ್ಕಾರೇತರ ಪ್ರಕ್ರಿಯೆ ಗಳು ಇಂದು ನಮಗೂ ಅವಶ್ಯಕವಾಗಿವೆ.

ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.