ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟು ಬಿಡಿ
ತಂದೆ–ತಾಯಿಗಳು ತಮ್ಮ ಆಸೆ–ಬೇಡಿಕೆಗಳಿಗೆ ಅನುಗುಣವಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಕೇವಲ ಓದುವುದಷ್ಟೇ ಮಕ್ಕಳ ಜೀವನವಲ್ಲ, ಅದಕ್ಕೂ ಮೀರಿದ್ದು ಏನೋ ಇದೆ ಎಂದು ಪೋಷಕರು ಯೋಚಿಸುತ್ತಿಲ್ಲ. ಬಾಲ್ಯವನ್ನು ಮಕ್ಕಳ ಇಚ್ಚೆಯಂತೆ ಕಳೆಯಲು ಬಿಡಿ. ಮಕ್ಕಳು ಆರಂಭದಲ್ಲಿ ತಪ್ಪು ಮಾಡಿದರೂ ಮುಂದಿನ ಹೆಜ್ಜೆ ಇಡುವಾಗ ಅದು ಪಾಠ ಕಲಿಸುತ್ತದೆ; ಪುನರಾವರ್ತನೆ ಆಗದಂತೆ ಎಚ್ಚರಿಸುತ್ತದೆ. ಮಕ್ಕಳು ಓದಿ ಕಲಿಯುವುದಕ್ಕಿಂತಲೂ ಹೆಚ್ಚಿನ ಜೀವನ ಪಾಠವನ್ನು ತಂದೆ ತಾಯಿಯರನ್ನು ನೋಡಿ ಕಲಿಯುತ್ತಾರೆ.Last Updated 15 ಡಿಸೆಂಬರ್ 2017, 19:30 IST