ಹಿರಿಯರಿಗೆ ಬದುಕುವ ಹಕ್ಕಿಲ್ಲವೆ?
ಒಂದು ತಿಂಗಳಿನಿಂದ ನಮ್ಮ ಮನೆಗೆ ನೀರು ಬಾರದೆ ಕಡೆಗೆ ಖಾಸಗಿ ಪ್ಲಂಬರ್ ಒಬ್ಬರನ್ನು ಹಿಡಿದು ಹಳೆಯ ಪೈಪ್ಗಳನ್ನು ಬದಲಾಯಿಸಿದ ಮೇಲೆ ಸ್ವಲ್ಪ ನೀರು ಬರುತ್ತದೆ. ಸುಮಾರು ₨ 2,000 ಖರ್ಚು ಮಾಡಬೇಕಾಯಿತು. ಮಳೆ ಬರತೊಡಗಿದ್ದರಿಂದ ಅಗೆದ ಗುಂಡಿಯ ಮೇಲೆ ಮಣ್ಣಿನ ದಿಬ್ಬವನ್ನು ಮಾಡಿ ಮಾರನೆಯ ದಿನ ಕೆಲಸ ಮುಗಿಸುವಂತೆ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಇದು ನಮ್ಮ ಕಾಂಪೌಂಡ್ನಿಂದ ಎರಡೂವರೆ ಅಡಿ ದೂರವಿದೆ. ನೀರಿನ ಪೈಪು ಹಾದು ಹೋಗಿರುವುದು ಅಲ್ಲೇ. ಇದು ಸಾರ್ವಜನಿಕ ರಸ್ತೆಗೆ ಲಗತ್ತಾಗಿಲ್ಲ.Last Updated 14 ಸೆಪ್ಟೆಂಬರ್ 2014, 19:30 IST