ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯತ್ತ ಪೇಟೆ ಬಂಡವಾಳ ಮೌಲ್ಯ

Last Updated 4 ಜನವರಿ 2015, 19:30 IST
ಅಕ್ಷರ ಗಾತ್ರ

ಷೇರುಪೇಟೆಯು 2015ರ ಆರಂಭವನ್ನು ಸಕಾರಾತ್ಮಕ ಮುನ್ನಡೆಯಿಂದ ಅನಿರೀಕ್ಷಿತ ಮಟ್ಟದ ಏರಿಕೆ ಪ್ರದರ್ಶಿಸಿ ವಿಜೃಂಭಿಸಿದೆ. ವಾರದ ಅಂತಿಮ ದಿನದಂದು 380 ಅಂಶಗಳ ಬೃಹತ್‌ ಮುನ್ನಡೆಯು ಹಿಂದಿನ ವಾರದ ನೀರಸ ವಾತಾವರಣವನ್ನು ತೊಡೆದುಹಾಕಿದೆ.

ಈ ವಾರ ಎಲ್ಲಾ ದಿನಗಳಲ್ಲೂ ಸಂವೇದಿ ಸೂಚ್ಯಂಕವು ಸಕಾರಾತ್ಮಕವಾದ ಏರಿಕೆಯನ್ನು ಪ್ರದರ್ಶಿಸಿದೆ. ಆದರೆ 24 ರಂದು ಮೂಲಾಧಾರಿತ ಪೇಟೆಯ ಚುಕ್ತಾ ದಿನದಂದು ಪೇಟೆಗಳು ರೂ8  ಲಕ್ಷ ಕೋಟಿಗೂ ಹೆಚ್ಚಿನ ವಹಿವಾಟು ದಾಖಲಿಸಿದ್ದು ಈ ವಾರದಲ್ಲಿ ವರ್ಷದ ಆರಂಭ ದಿನ ಕೇವಲ ರೂ89 ಸಾವಿರ ಕೋಟಿ ವಹಿವಾಟು ನಡೆಸಿರುವುದು ಪೇಟೆಗಳಲ್ಲಾಗುತ್ತಿರುವ ಬದಲಾ­ವಣೆಯ ವೇಗಕ್ಕೆ ಕನ್ನಡಿ ಹಿಡಿದಿದೆ.

ಗುರುವಾರದವರೆಗೂ ನೀರಸ ವಾತಾವರಣ­ದಲ್ಲಿದ್ದ ಪೇಟೆಯಲ್ಲಿ ಶುಕ್ರವಾರದಂದು ಹೆಚ್ಚಿನ ಕಂಪೆನಿಗಳು ಅತಿಹೆಚ್ಚಿನ ಚಟುವಟಿಕೆಯಿಂದ ವಿಜೃಂಭಿಸಿವೆ. ಅಂದು ಬ್ಯಾಂಕೆಕ್‌್ಸ ಸೂಚ್ಯಂಕ 21,891 ಅಂಶಗಳನ್ನು ದಿನದ ಮಧ್ಯಂತರದಲ್ಲಿ ತಲುಪಿ ಸರ್ವಕಾಲೀನ ಗರಿಷ್ಠದ ದಾಖಲೆ ನಿರ್ಮಿಸಿತು. ಬ್ಯಾಂಕಿಂಗ್‌ ಕಂಪೆನಿಗಳಾದ ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲದೆ ಹೆಚ್‌ಡಿಎಫ್‌ಸಿಗಳು ಸಂವೇದಿ ಸೂಚ್ಯಂಕದ ಏರಿಕೆಗೆ ಮಹತ್ತರ ಕೊಡುಗೆ ನೀಡಿವೆ.

ಕೇಂದ್ರ ಸರ್ಕಾರ ಕಲ್ಲಿದ್ದಲು ನಿಕ್ಷೇಪ ಹರಾಜಿನ ನಿಯಮಗಳನ್ನು ಪ್ರಕಟಿಸಲಿರುವ ಅಂಶವು ಪ್ರಭಾವಿ­ಯಾಗಿತ್ತು. ಕ್ಯಾನ್‌ಫಿನ್‌ ಹೋಮ್‌್ಸ ಕಂಪೆನಿ 12 ರಂದು ಹಕ್ಕಿನ ಷೇರು ವಿತರಣೆಯ ನಿಯಮಗಳನ್ನು ಪ್ರಕಟಿಸಲಿರುವ ಕಾರಣ ಸುಮಾರು ರೂ65 ರಷ್ಟು ಏರಿಕೆ ಕಂಡಿತು. ಕ್ಲಾರಿಯಂಟ್‌ ಕೆಮಿಕಲ್‌್ಸ (ಇಂಡಿಯಾ) ಕಂಪೆನಿ ತನ್ನ 87 ಎಕರೆ ಪ್ರದೇಶವನ್ನು ಲೋದಾ ಡೆವೆಲಪರ್‌್ಸ ಪ್ರೈ ಕಂಪೆನಿಗೆ ಮಾರಾಟ ಮಾಡಿದ್ದರ ಮೌಲ್ಯವಾದ  ರೂ1,102.50 ಕೋಟಿ ಹಣವನ್ನು ಸಂಪೂರ್ಣವಾಗಿ ಪಡೆದಿದೆ ಎಂಬ ಸುದ್ದಿಯು ಷೇರಿನ ಬೆಲೆ ರೂ851ರ ಸಮೀಪದಿಂದ ರೂ998 ರವರೆಗೂ ಜಿಗಿಯುವಂತೆ ಮಾಡಿತು.

ರೂ 966 ರಲ್ಲಿ ವಾರಾಂತ್ಯ ಕಂಡಿತು.
ಒಟ್ಟಾರೆ 646 ಅಂಶಗಳ ಏರಿಕೆ ಪಡೆದ ಸಂವೇದಿ ಸೂಚ್ಯಂಕವು 27,937 ಅಂಶಗಳ­ವರೆಗೂ ಮಧ್ಯಂತರದಲ್ಲಿ ತಲುಪಿ ಮುಂದಿನ ದಿನಗಳಲ್ಲಿ ಮುನ್ನಡೆಯುವ ಸೂಚನೆ ನೀಡಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ832 ಕೋಟಿ­ಯಷ್ಟು ನಿವ್ವಳ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳೂ ಸಹ ರೂ580 ಕೋಟಿ ಹೂಡಿಕೆಯಿಂದ ಪೇಟೆಯನ್ನು ಬೆಂಬಲಿಸಿವೆ. ಪೇಟೆಯ ಬಂಡವಾಳ ಮೌಲ್ಯ ರೂ96.75 ಲಕ್ಷ ಕೋಟಿಯಿಂದ ರೂ99.59 ಲಕ್ಷ ಕೋಟಿಗೆ ಏರಿಕೆ ಕಂಡು, ಸರ್ವಕಾಲೀನ ದಾಖಲೆ ರೂ 100.73 ಲಕ್ಷ ಕೋಟಿ ಸಮೀಪ ತಲುಪಿದೆ.

ಗಜಗಾತ್ರದ ವಹಿವಾಟು
* ಗೋಲ್‌್ಡಮನ್‌ ಸಾಕ್‌್ಸ ಅಸ್ಸೆಟ್‌್ಸ ಮ್ಯಾನೇಜ್‌­ಮೆಂಟ್‌ 30 ರಂದು 1.54 ಲಕ್ಷ ಅತುಲ್‌ ಆಟೋ, ಗೋಲ್‌್ಡಮನ್‌ ಸಾಕ್‌್ಸ ಇಂಡಿಯಾ ಫಂಡ್‌ 30    ರಂದು 2.50 ಲಕ್ಷ ಅತುಲ್‌ ಆಟೋ ಷೇರನ್ನು ಖರೀದಿಸಿದೆ.
* ಐಡಿಬಿಐ ಬ್ಯಾಂಕ್‌ 31 ರಂದು 74,163 ಹಾಗೂ 1 ರಂದು 91,977 ಷೇರು ಸಂಖ್ಯಾ ಇನ್ಫೊ ಷೇರನ್ನು ಮಾರಾಟ ಮಾಡಿದೆ.
* ಹೆಚ್‌ಡಿಎಫ್‌ಸಿ ಮ್ಯುಚುಯಲ್‌ ಫಂಡ್‌ 1 ರಂದು 9.58 ಲಕ್ಷ ಕಲ್ಪತರು ಪವರ್‌ ಷೇರನ್ನು ಖರೀದಿಸಿದೆ.
* ಐಸಿಐಸಿಐ ಮ್ಯುಚುಯಲ್‌ ಫಂಡ್‌ 2 ರಂದು 91.50 ಲಕ್ಷ ಸೌತ್‌ ಇಂಡಿಯನ್‌ ಬ್ಯಾಂಕ್‌ ಷೇರನ್ನು ಬ್ಯಾಲನ್ಸಡ್‌ ಫಂಡ್‌ಗಾಗಿ, 1.09 ಕೋಟಿ ಷೇರನ್ನು  ಟ್ಯಾಕ್‌್ಸ ಫಂಡ್‌ಗಾಗಿ ಖರೀದಿಸಿದೆ.
* ಮಲ್ಟಿಪಲ್‌್ಸ ಪ್ರೈವೇಟ್‌ ಈಕ್ವಿಟಿ ಫಂಡ್‌ ಒಟ್ಟು 4.95 ಕೋಟಿ ಸೌತ್‌ ಇಂಡಿಯನ್‌ ಬ್ಯಾಂಕ್‌ ಷೇರನ್ನು 2 ರಂದು ಮಾರಾಟ ಮಾಡಿದೆ.

ಅಮಾನತು
ಕಾಂಪ್ಯಾಕ್ಟ್ ಡಿಸ್ಕ್, ಜಾಲಿ ಪ್ಲಾಸ್ಟಿಕ್‌ ಇಂಡಸ್ಟ್ರೀಸ್‌, ಸೇರಿ ಒಟ್ಟು 22 ಕಂಪೆನಿಗಳನ್ನು ಜ.7 ರಿಂದ ಅಮಾನತುಗೊಳಿಸಲಾಗಿದೆ.

ವಾರದ ವಿಶೇಷ
ಪ್ರಮುಖ ಕಂಪೆನಿಗಳ ರೇಟಿಂಗ್ಸ್‌ ಆಧರಿಸಿ ಹೂಡಿರಿ...

ಪೇಟೆಯಲ್ಲಿ ಷೇರಿನ ದರಗಳು ಏರಿಳಿತ ಕಾಣಲು ಬಾಹ್ಯ ಕಾರಣಗಳು ಹೆಚ್ಚಾಗಿವೆ.  ಸಾಂಪ್ರದಾಯಕ ಹೂಡಿಕೆ ಪದ್ಧತಿಯ ನೀತಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈಗಿನ ವಾತಾವರಣದಲ್ಲಿ ಸಣ್ಣ ಹೂಡಿಕೆದಾರರು ‘ವ್ಯಾಲ್ಯೂ ವಿತ್‌ ಪ್ರಾಫಿಟ್‌ ಬುಕ್‌’ ಅಳವಡಿಸಿಕೊಂಡರೆ ಮಾತ್ರ ಬಡವಾಳವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯ.

ಸಾಮಾನ್ಯವಾಗಿ ಪೇಟೆಯ ಏರಿಳಿತಕ್ಕೆ ಮುಖ್ಯ ಕಾರಣ ಬೇಡಿಕೆ – ಪೂರೈಕೆಗಳೇ ಆದರೂ ಇವುಗಳು ಸಹಜವಾಗಿರದೆ ಕೃತಕವಾಗಿ ಇತರೆ ಅಂಶಗಳ ಪ್ರಭಾವದಿಂದ ವಾತಾವರಣವನ್ನು ಬದಲಿಸುತ್ತವೆ. ಹಿಂದಿನ ತಿಂಗಳು ಹ್ಯಾವೆಲ್ಸ್ ಕಂಪೆನಿ ಷೇರಿನ ಬೆಲೆ ರೂ345ರ ಸಮೀಪದಿಂದ ರೂ250ರ ಸಮೀಪಕ್ಕೆ  ಕುಸಿಯಿತು.

ಹಿಂದಿನ ವಾರ ಅಬಾನ್‌ ಆಫ್‌ಷೋರ್‌ ಕಂಪೆನಿ ಷೇರಿನ ದರದಲ್ಲಿ ಮಿಂಚಿನ ಚೇತರಿಕೆ ಕಂಡು ಒಂದೇ ವಾರದಲ್ಲಿ ರೂ418ರಿಂದ ರೂ529ರ ವರೆಗೂ ಏರಿಕೆ ಕಂಡಿರುವ ರೀತಿ ವಿಶ್ಲೇಷಣಾತೀತವಾಗಿದೆ.

ಹ್ಯಾವೆಲ್ಸ್ ಷೇರಿನ ಬೆಲೆ ಏರಿಕೆಯಲ್ಲಿದ್ದಾಗ ನಕಾರಾತ್ಮಕ ಅಂಶವು, ಅಬಾಸ್‌ ಆಫ್‌ಷೋರ್‌ ಕಂಪೆನಿ ಷೇರಿನ ಬೆಲೆ ಇಳಿಕೆಯಲ್ಲಿದ್ದಾಗ ಬಂದ ಉನ್ನತ ರೇಟಿಂಗ್‌ ಅಂಶವು ಸಕಾರಾತ್ಮಕ ಪ್ರಭಾವ ಬೀರಿರುವುದು ಮೊದಲನೆಯದು. ಪ್ರಾಫಿಟ್‌ ಬುಕ್‌ ಎರಡನೆಯದು. ವ್ಯಾಲ್ಯು ಪಿಕ್‌ಗೆ ಉತ್ತಮ ಉದಾಹರಣೆಯಾಗಿದೆ.

ಕಂಪೆನಿಗಳು ಉತ್ತಮ ಏರಿಕೆಯನ್ನು ಕಂಡಿದ್ದಾಗ ರೇಟಿಂಗ್‌ ಕಂಪೆನಿಗಳು ‘ಡೌನ್‌ ಗ್ರೇಡ್‌’ ಮಾಡುವುದು, ಇಳಿಕೆಯಲ್ಲಿದ್ದಾಗ ಅಪ್‌ಗ್ರೇಡ್‌ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ­ವಾಗಿದೆ. ಇದನ್ನು ಕೇವಲ ರೇಟಿಂಗ್‌ ಕಂಪೆನಿಗಳೇ ಅಲ್ಲದೆ ವಿದೇಶೀ ವಿತ್ತೀಯ ಸಂಸ್ಥೆಗಳೂ ಸಹ ಮಾಡುತ್ತವೆ. ಈ ಕಾರಣದಿಂದಾಗಿ ಹೆಚ್ಚಿನ ಏರಿಳಿತಗಳು ಪ್ರದರ್ಶಿತವಾಗತ್ತವೆ.

ಈ ಸಂದರ್ಭದಲ್ಲಿ ಗಮನದಲ್ಲಿರಬೇಕಾದ ಅಂಶವೆಂದರೆ ರೇಟಿಂಗ್‌ ಹೆಚ್ಚಾಗಿ ಅಗ್ರಮಾನ್ಯ ಕಂಪೆನಿ­ಗಳಿಗೆ ನೀಡುವುದರಿಂದ, ಅವು ಇಳಿಕೆಯಲ್ಲಿದ್ದಾಗ ಉತ್ತಮ ಹೂಡಿಕೆ ಅವಕಾಶ ಕಲ್ಪಿಸುತ್ತವೆ. ಏರಿಕೆಯಲ್ಲಿದ್ದಾಗ ಲಾಭದ ನಗದೀಕರಣಕ್ಕೆ ಆಧ್ಯತೆ ನೀಡಿದಲ್ಲಿ ಅವಕಾಶದ ಪ್ರಯೋಜನ ಪಡೆದಂತಾಗುತ್ತದೆ. ಸುದ್ದಿ ಸಮಾಚಾರಗಳ ಪ್ರಭಾವದಿಂದ ಉಂಟಾಗುವ ಏರಿಳಿತಗಳನ್ನು ಉಪಯೋಗಿಸಿ ಕೊಳ್ಳುವಿಕೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ, ಈಗಿನ ಪೇಟೆ ಲಾಭದಾಯಕ.
m 98863&13380

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT