ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮೌಲ್ಯ ರೂ 96.85 ಲಕ್ಷ ಕೋಟಿ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಷೇರು­ಪೇಟೆಯ ಹೂಡಿಕೆದಾರರಿಗೆ ಹತ್ತಾರು ಶುಭ­ಗಳನ್ನು ಹೊತ್ತು ತಂದಿದೆ ಎನ್ನಬಹುದು. ಮೊಟ್ಟ­ಮೊದಲಿಗೆ ಪೇಟೆಯ ಅಂತರರಾಷ್ಟ್ರೀಯ ಹೆಗ್ಗುರು­ತಾಗಿರುವ ಸಂವೇದಿ ಸೂಚ್ಯಂಕವು 519 ಅಂಶಗಳ ಬೃಹತ್ ಏರಿಕೆ ಪಡೆದು 27,865.83 ರಲ್ಲಿ ಕೊನೆಗೊಂಡು ಸಂಭ್ರಮಿಸಿದೆ.

ದಿನದ ಮಧ್ಯಾಂತರದ ಚಟುವಟಿಕೆ­ಯಲ್ಲಿ ಸರ್ವಾಕಾಲೀನ ಗರಿಷ್ಠ  ಮಟ್ಟ 27,894.32ನ್ನು  ತಲುಪಿ, ತನ್ನ ಗಜ ನಡಿಗೆ ಮುಂದುವರೆಸುವ ಸೂಚನೆ ನೀಡಿದೆ.  ಕಂಪೆನಿ­ಗಳ 2ನೇ ತ್ರೈಮಾಸಿಕ ಫಲಿತಾಂಶಗಳು ಸಕಾರಾತ್ಮಕವಾಗಿ­ರುವುದು, ಹಣದುಬ್ಬರದ ಒತ್ತಡ ಕ್ಷೀಣಿಸುತ್ತಿದ್ದು ಬ್ಯಾಂಕ್‌ ಬಡ್ಡಿದರ ಕಡಿತದ ನಿರೀಕ್ಷೆಯು ಹೆಚ್ಚುತ್ತಿರು­ವುದು ಈ ಬೃಹತ್ ಏರಿಕೆಗೆ ಕಾರಣ. ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ, ಚಿನಿವಾರ­ಪೇಟೆಯಲ್ಲಿ ಚಿನ್ನ, ಬೆಳ್ಳಿಗಳ ಬೆಲೆಗಳು ಕುಸಿಯುತ್ತಿದ್ದು, ಸ್ಥಳೀಯವಾಗಿ ಪೆಟ್ರೋಲ್‌, ಡೀಸಲ್‌ಗಳ ಬೆಲೆಯು ಇಳಿಕೆಯಾಗಿ­ರುವುದು ವಾತಾವ­ರ­ಣವನ್ನು ಸಂಭ್ರಮಿತ­ಗೊಳಿಸಿದೆ.

ಪೂರಕವಾಗಿ ಜಪಾನ್‌ ತನ್ನ ಉತ್ತೇಜಕಗಳನ್ನು ವಿಸ್ತರಿಸಿದ ಕಾರಣ ಆ ದೇಶದೊಂದಿಗೆ ವ್ಯವಹಾರಿಕ ಸಂಬಂಧ­ಗಳನ್ನು ಹೊಂದಿರುವ ಕಂಪೆನಿಗಳಾದ ಮಾರುತಿ ಸುಜುಕಿ, ಹೊಂಡಾ ಸಿಯಲ್‌ ನಂತಹವು ಹೆಚ್ಚು ಬೇಡಿಕೆಯಿಂದ ಚಿಮ್ಮಿದವು. ಸಾರ್ವಜನಿಕ ವಲಯದ ರೂರಲ್‌ ಎಲೆಕ್ಟ್ರಿ­ಫಿಕೇಶನ್‌ ಕಾರ್ಪೊ­ರೇಷನ್‌ ಈ ತಿಂಗಳ 10 ರಂದು ಫಲಿತಾಂಶ ಪ್ರಕಟಿ­ಸ­ಲಿರುವ ಕಾರಣ ವಾರಾಂತ್ಯ­ದಲ್ಲಿ ಚಟುವಟಿಕೆ ಭರಿತ­ವಾಗಿತ್ತು.


ಫಲಿತಾಂಶ ಪ್ರಕಟಣೆ ಮುನ್ನಾ ದಿನವಾದ ಶುಕ್ರವಾರ ಅಬ್ಬಾನ್‌ ಆಫ್‌ ಷೋರ್‌ ಕಂಪೆನಿ ರೂ32­ರಷ್ಟು ಬೃಹತ್‌ ಏರಿಕೆ ಕಂಡಿದೆ. ನ.4 ರಂದು ಫಲಿತಾಂಶ ಪ್ರಕಟಿಸಲಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಪೇಟೆಯ ಜೀವನಾಡಿಯಾಗಿದ್ದು, ಈವಾರ ರೂ3,738 ಕೋಟಿ ಹೂಡಿಕೆ ಮಾಡಿ ಪೇಟೆಯನ್ನು ಹುರಿ­ದುಂಭಿಸಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ967 ಕೋಟಿ­ಯಷ್ಟು ಷೇರು ಮಾರಾಟ ಮಾಡಿವೆ. ಮಧ್ಯಮ ಶ್ರೇಣಿ, ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳೂ ಏರಿಕೆ ಕಂಡಿವೆ.

ಪೇಟೆಯ ಬಂಡವಾಳ ಮೌಲ್ಯ ಹಿಂದಿನ ವಾರದ ರೂ93.31 ಲಕ್ಷ ಕೋಟಿಯಿಂದ ರೂ 96.85 ಲಕ್ಷ ಕೋಟಿಗೆ ಏರಿಕೆ ಕಂಡಿದ್ದು ಇದು ಸರ್ವಕಾಲೀನ ಗರಿಷ್ಠವಾಗಿದೆ.

ಬೋನಸ್‌ ಷೇರು
*ಇನ್‌ಸೆಕ್ಟಿಸೈಡ್‌್ಸ (ಇಂಡಿಯಾ) ಲಿ. ಕಂಪೆನಿ­ಯು 1:2ರ ಅನುಪಾತದ ಹಕ್ಕಿನ ಷೇರು ಪ್ರಕಟಿಸಿದೆ.
ಈ ಬೋನಸ್‌ಗಳಿಂದ ಎಚ್ಚರ
*ಟಿ ಗುಂಪಿನಲ್ಲಿ ವಹಿವಾಟಾಗು­ತ್ತಿರುವ ಕುಬೇರ್‌­­­ಕಮಲ್‌ ಇಂಡಸ್ಟ್ರಿ­ಯಲ್‌ ಇನ್ವೆಸ್‌್ಟ­ಮೆಂಟ್‌್ಸ ಲಿ. ಕಂಪೆನಿಯು 3:1ರ ಅನುಪಾತದ ಬೋನಸ್‌ ಪ್ರಕಟಿಸಿದೆ. ಈ ಕಂಪೆನಿಯಲ್ಲಿನ ಪ್ರವರ್ತಕರ ಭಾಗಿತ್ವವು ಜೂನ್‌ ತಿಂಗಳ ಅಂತ್ಯ­ದಲ್ಲಿ ಶೇ58.05 ರಷ್ಟಿದ್ದು ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಅದು ಶೇ 19.29ಕ್ಕೆ ಕುಸಿದು ಸಾರ್ವಜನಿಕ ಭಾಗಿತ್ವವು ಶೇ80.71ಕ್ಕೆ ಏರಿಕೆ­ಯಾಗಿರುವುದು ಎಚ್ಚರಿಕೆ ಗಂಟೆಯಾ­ಗಿದೆ.
*ಟಿ ಗುಂಪಿನ ಗ್ಲೋಬಲ್‌ ಇನ್‌ಫ್ರಾಟೆಕ್‌ ಅಂಡ್‌ ಫೈನಾನ್‌್ಸ ಲಿ. ಕಂಪೆನಿಯು 1:10ರ ಅನು­ಪಾತದ ಬೋನಸ್‌ ಷೇರು ಪ್ರಕಟಿಸಿದೆ.  ಕಂಪೆನಿಯಲ್ಲಿ ಸಾರ್ವಜನಿಕರ ಭಾಗಿತ್ವ
ಶೇ 98.58 ರಷ್ಟಿದೆ.
ಮುಖಬೆಲೆ ಸೀಳಿಕೆ
*ಕೆನರಾ ಬ್ಯಾಂಕ್‌ ಷೇರಿನ ಮುಖಬೆಲೆ­ ರೂ 10 ರಿಂದ ರೂ2ಕ್ಕೆ ಸೀಳಲಿದ್ದು, 6 ರಂದು 2ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ.
*ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಷೇರಿನ ಮುಖಬೆಲೆ ರೂ10 ರಿಂದ ರೂ1ಕ್ಕೆ ಸೀಳಲು ನ. 21 ನಿಗದಿತ ದಿನವಾಗಿದೆ.
*ಬರ್ಜರ್‌ ಪೇಂಟ್‌್ಸ ಲಿ. ಕಂಪೆನಿಯು ಷೇರಿನ ಮುಖಬೆಲೆ ರೂ2 ರಿಂದ ರೂ1ಕ್ಕೆ ಸೀಳಲು 4 ರಂದು ಪರಿಶೀಲಿಸಲಿದೆ.
*ಟಿ ಗುಂಪಿನ ಒಮಾನ್‌ಶು ಎಂಟರ್‌ಪ್ರೈಸಸ್‌ ಕಂಪೆನಿಯು 7 ರಂದು ಷೇರಿನ ಮುಖಬೆಲೆ ಸೀಳಲು ಪರಿಶೀಲಿಸಲಿದೆ.
*ಝೈಡನ್‌ ಜೆನೆಟಿಕ್‌ ಕಂಪೆನಿಯು ಷೇರಿನ ಮುಖಬೆಲೆ ರೂ10 ರಿಂದ ರೂ 2ಕ್ಕೆ ಸೀಳಲಿದೆ. ಈ ಕಂಪೆನಿಯ ಷೇರಿನ ಬೆಲೆಯು ರೂ16ರ ಸಮೀಪವಿದೆ. ಪ್ರವರ್ತಕರ ಭಾಗಿತ್ವವು ಕೇವಲ ಶೇ 2.27 ರಷ್ಟಿದ್ದು ಸಾರ್ವಜನಿಕರ ಭಾಗಿತ್ವ ಶೇ94.59 ರಷ್ಟಿರುವುದು ಎಚ್ಚರಿಕೆಯ ಅಗತ್ಯತೆ ಒತ್ತಿ ಹೇಳುತ್ತದೆ.

ವಾರದ ವಿಶೇಷ
ಯಶಸ್ಸಿಗೆ ಒಂದು ವೃತ್ತಿ ಒಂದು ವಲಯ

ಈಗಿನ ದಿನಗಳಲ್ಲಿ ಎಲ್ಲಾ ಚಟುವಟಿಕೆಯು ಹಣದ ಸುತ್ತ ಹೆಣೆದುಕೊಂಡಿದ್ದು, ಹಣ ಸಂಪಾದನೆಯೇ ಮುಖ್ಯ ಗುರಿಯಾಗಿದೆ. ಇಲ್ಲಿ ಅನುಸರಿಸಬೇಕಾದ ಮಾರ್ಗವು ನಗಣ್ಯವಾಗಿ ಕೇವಲ ಗುರಿ ಸಾಧನೆ ಮಾತ್ರ ಧ್ಯೇಯವಾಗುವುದು ಅಪಾಯಕಾರಿಯಾಗಿದೆ. ಇದು ವ್ಯವಹಾರಿಕ ಒತ್ತುವರಿಗೆ ಅವಕಾಶ ಮಾಡಿಕೊಟ್ಟಿದೆ.

ತಾಂತ್ರಿಕ ವಲಯದ ಆರಂಭದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಅನೇಕ ಬ್ರೋಕಿಂಗ್‌ ಸಂಸ್ಥೆಗಳು ಹೂಡಿಕೆದಾರರಲ್ಲಿ ಆಸೆ ಮೂಡಿಸಿ ಲಾಭದಾಯಕವಲ್ಲದಿದ್ದರೂ ವಹಿವಾಟು ನಡೆಸುವ ಪ್ರಚೋದನೆ ನೀಡಿ ಹಾನಿಗೊಳಪಡಿಸಿರುವುದನ್ನು ಕಂಡಿದ್ದೇವೆ. ಇಂತಹ ಸ್ಪರ್ಧೆಗೆ ಬಲಿಯಾದುದು ಅಮಾಯಕ ಸಣ್ಣ ಹೂಡಿಕೆದಾರರಲ್ಲದೆ, ಸಣ್ಣ ಸಾಂಪ್ರದಾಯಿಕ ಬ್ರೋಕಿಂಗ್‌ ಸಂಸ್ಥೆಗಳು.

ಪೇಟೆಯ ನಿಯಂತ್ರಕ ‘ಸೆಬಿ’ ಪ್ರಕಾರ, ಕ್ಯಾಶ್‌ ವಿಭಾಗದಲ್ಲಿನ ಬ್ರೋಕರ್‌ ಸಂಖ್ಯೆಯು 2012–13 ರಲ್ಲಿ ಇದ್ದ 10,128 ಈ ವರ್ಷದಲ್ಲಿ 9076ಕ್ಕೆ ಇಳಿದಿದೆ. ಕಾರ್ಪೊರೇಟ್‌ ಬ್ರೋಕಿಂಗ್‌ ಸಂಸ್ಥೆಗಳು 2012–13 ರಲ್ಲಿ 5,113 ಇದ್ದು ಈಗ 4,781ಕ್ಕೆ ಇಳಿದಿದೆ. ಹೆಚ್ಚಿನ ಅಘಾತಕಾರಿ ಅಂಶ­ವೆಂದರೆ 2012–13ರಲ್ಲಿ ಸೆಬಿ ನೋಂದಾಯಿತ ಸಬ್‌ ಬ್ರೋಕರ್‌ಗಳ ಸಂಖ್ಯೆಯು 70,242 ಇದ್ದು ಈಗ ಕೇವಲ 46,112ಕ್ಕೆ ಇಳಿದಿದೆ. ಅಂದರೆ ಹೆಚ್ಚಿನವರಿಗೆ ಈ ವ್ಯಕ್ತಿಯು ನಿರಾಶಾ­ದಾಯ-ಕ­ವೆಂದು ನಿರ್ಗಮಿಸುವಂತೆ ಮಾಡಿದೆ. ಆಂತರಿಕವಾಗಿ ಸೇವೆ ಒದಗಿಸಿ ಸೇವಾ ಶುಲ್ಕ ಪಡೆಯುವ ಷೇರ್‌ ಬ್ರೋಕಿಂಗ್‌ ವೃತ್ತಿ ಪವಿತ್ರವಾದುದು. ತ್ವರಿತ ಹಣ ಮಾಡಬಹುದೆಂಬ ಭ್ರಮೆ­ಯಿಂದ ಕೆಲವರು ಈ ವೃತ್ತಿಗೆ ಬಂದು ಕಲುಷಿತಗೊಳಿಸಿದ್ದಾರೆ. ಪೇಟೆಯ ಆಂತರಿಕ ಅಂಶಗಳಿಗೆ ಆದ್ಯತೆ ನೀಡದೆ ವಹಿವಾಟು ಗಾತ್ರಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಇದಕ್ಕೆ ಪೂರಕವಾಗಿದೆ.

ಈಗಿನ ಪರಿಸ್ಥಿತಿ ಗಮನಿಸಿದಲ್ಲಿ ಸಣ್ಣ ಹೂಡಿಕೆದಾರರಲ್ಲಿ ಜಾಗೃತಿ ಮೂಡಿ ಮುಂದಿನ ದಿನಗಳಲ್ಲಿ ವ್ಯಕ್ತಿಗತ ಅಗತ್ಯಗಳಿಗೆ ಸ್ಪಂದಿಸುವ ಸಾಂಪ್ರದಾಯಿಕ ಸಣ್ಣ ಬ್ರೋಕಿಂಗ್‌ ಸಂಸ್ಥೆಗಳಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ ಎನ್ನಬಹುದು. ಒಂದು ವೃತ್ತಿ ಒಂದು ವಲಯ ಪಾಲಿಸಿದಲ್ಲಿ ಯಶಸ್ಸು ಶತಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT