ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ತಾಲ್ಲೂಕು ನಕಾಶೆಯಿಂದ ಹೊರಕ್ಕೆ?

Last Updated 7 ಆಗಸ್ಟ್ 2017, 6:48 IST
ಅಕ್ಷರ ಗಾತ್ರ

ಕಂಪ್ಲಿ:  ಹೊಸ ತಾಲ್ಲೂಕಿಗೆ ಸೇರ್ಪಡೆಯಾಗಿ ಹೊಸ ಜೀವನ ಆರಂಭಿಸುವ ಕನಸು ಕಾಣುತ್ತಿದ್ದ ಈ ಹಳ್ಳಿಯ ಜನರು ಆಸೆಗೆ ಜಿಲ್ಲಾಡಳಿತ ಎಳ್ಳು  ನೀರು ಬಿಟ್ಟಿದೆ. ಈಗಿರುವ ತಾಲ್ಲೂಕು ಕೇಂದ್ರದ ಜತೆಗಿನ ಸಂಬಂಧ ಆದಷ್ಟು ಬೇಗ ಕಳಚಿಕೊಂಡು ಇನ್ನೇನು ಹೊಸ ತಾಲ್ಲೂಕಿಗೆ ಸೇರುತ್ತವೆ ಎಂದೆಲ್ಲಾ ಊಹಿಸಿದ್ದ ಈ ಗ್ರಾಮದ ಜನರಿಗೆ ಜಿಲ್ಲಾಡಳಿತದ ನಿರ್ಧಾರ ಭ್ರಮನಿರಸನ ತಂದಿದೆ.

ಇಲ್ಲಿ ಹೇಳಲು ಹೊರಟಿರುವುದು ಹೊಸದರೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಒಡಲಾಳದ ನೋವಿನ ಕಥೆ. ಹೊಸ ದರೋಜಿ ಗ್ರಾ.ಪಂ ವ್ಯಾಪ್ತಿಯ ಕೆಲ ಹಳ್ಳಿಗಳನ್ನು ನೂತನ ಕಂಪ್ಲಿ ತಾಲ್ಲೂಕಿಗೆ ಸೇರಿಸಬೇಕು ಎನ್ನುವ ಜನರ ಒತ್ತಾಸೆಯಂತೆ ಗ್ರಾ.ಪಂ ಮಂಡಿಸಿದ ಠರಾವಿಗೆ ತಾಲ್ಲೂಕು ಹೋರಾಟ ಸಮಿತಿ ಒಪ್ಪಿಗೆ ಸೂಚಿಸಿತ್ತು. ಆದರೆ ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಕಂಪ್ಲಿ ತಾಲ್ಲೂಕಿ ನಿಂದ ಹೊಸ ದರೋಜಿ ಗ್ರಾ.ಪಂ ವ್ಯಾಪ್ತಿಯನ್ನು ಕೈಬಿಡಲಾಗಿದೆ ಎನ್ನುವ ಮಾತು ಜನರನ್ನು ನಿರಾಸೆಗೊಳಿಸಿದೆ. ಅಲ್ಲದೇ ಮತ್ತೆ ಹೋರಾಟಕ್ಕೆ ಅಣಿಯಾಗುವಂತೆ ಮಾಡಿದೆ.

ಸಂಡೂರು ಏಕೆ ಬೇಡ: ಹೊಸ ದರೋಜಿ ಸೇರಿದಂತೆ ಕೆಲ ಹಳ್ಳಿಗಳು ಸಂಡೂರು ತಾಲ್ಲೂಕು ಕೇಂದ್ರದಿಂದ 45ಕಿ.ಮೀ ಅಂತರದಲ್ಲಿವೆ. ಇಲ್ಲಿಗೆ ನೇರ ಬಸ್‌ ಸಂಪರ್ಕ ಇಲ್ಲ. ದರೋಜಿಯಿಂದ 7ಕಿ.ಮೀ ದೂರದ ಕುಡುತಿನಿ ಪಟ್ಟಣಕ್ಕೆ ಹೋಗಬೇಕು.

ಅಲ್ಲಿಂದ 10 ಕಿ.ಮೀ ಕ್ರಮಿಸಿ ತೋರಣಗಲ್ಲು ಸೇರಿ ನಂತರ 22ಕಿ.ಮೀ ದೂರದ ಸಂಡೂರು ತಾಲ್ಲೂಕು ಕೇಂದ್ರಕ್ಕೆ ತಲುಪಬೇಕಾದ ಅನಿವಾರ್ಯತೆ ಇದೆ. ಕೇವಲ 45ಕಿ.ಮೀ ಅಂತರದ ಸಂಡೂರಿಗೆ ಹೋಗಿ ಬರಲು ಇಡೀ ಒಂದು ದಿನ ಕಳೆಯಬೇಕಾ ಗುತ್ತದೆ.  ‘ಬೈಕ್‌ ಹೊಂದಿರುವವರಿಗೆ ಸಮೀಪದ ರಸ್ತೆ ಇದೆಯಾದರೂ ಮಾರ್ಗಮಧ್ಯೆ ರೈಲ್ವೆ ಹಳಿ ಬರುವು ದರಿಂದ ಕಷ್ಟಪಟ್ಟು ಸಾಗಬೇಕಿದೆ’ ಎಂದು ಬೈಕ್‌ ಸವಾರ ಛಾಯಾಗ್ರಾಹಕ ರಾಮು ತಿಳಿಸುತ್ತಾರೆ.

ಕಂಪ್ಲಿ ಏಕೆ ಬೇಕು: ಹೊಸದರೋಜಿ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಕಂಪ್ಲಿ ಪಟ್ಟಣ ಕೇವಲ 18ಕಿ.ಮೀ ಅಂತರ ದಲ್ಲಿದೆ. ಗ್ರಾಮದ ಮೂಲಕ ರಾಜ್ಯ ಹೆದ್ದಾರಿ–29 ಹಾದು ಹೋಗಿರುವುದ ರಿಂದ ಬಳ್ಳಾರಿ–ಕಂಪ್ಲಿ–ಗಂಗಾವತಿ ಮಾರ್ಗದ ಬಸ್‌ಗಳು ನಿತ್ಯ ಸಂಚರಿಸುತ್ತಿರು ತ್ತವೆ. ಜತೆಗೆ ವ್ಯಾಪಾರ, ವ್ಯವಹಾರಕ್ಕಾಗಿ ಕಂಪ್ಲಿಯನ್ನೇ ಅವಲಂಬಿಸಿರುವುದರಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯನ್ನು ನೂತನ  ಕಂಪ್ಲಿ ತಾಲ್ಲೂಕು ಕೇಂದ್ರಕ್ಕೆ ಸೇರಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಕನಸಾಗಿದೆ. ‘ಭವಿಷ್ಯ ದಲ್ಲಿ ಹೊಸದರೋಜಿಗೆ ಹೋಬಳಿ ಸ್ಥಾನಮಾನ ದೊರೆಯುವ ಅವಕಾಶಗಳು ಇವೆ’ ಎನ್ನುವುದು ಅಲ್ಲಿನ ಸ್ಥಳೀಯ ಚುನಾಯಿತಿ ಪ್ರತಿನಿಧಿಗಳ ಅನಿಸಿಕೆ.

‘ಅಭಿವೃದ್ಧಿ ದೃಷ್ಟಿಯಿಂದ ದರೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯನ್ನು ನೂತನ ಕಂಪ್ಲಿ ತಾಲ್ಲೂಕಿಗೆ ಸೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಗ್ರಾ.ಪಂ ಉಪಾಧ್ಯಕ್ಷ ಎಂ.ಎಸ್‌. ಗುರುಮೂರ್ತಿ ತಿಳಿಸಿದರು. ‘ಜಿಲ್ಲಾ ಉಸ್ತುವಾರಿ ಸಚಿವರು ಮೂಲತಃ ಸಂಡೂರಿನವರಾಗಿದ್ದು, ನಮ್ಮ ತಾಲ್ಲೂಕಿನಲ್ಲಿಯೇ ಈ ಹಳ್ಳಿಗಳು ಇರಲಿ ಎಂದು ಸಲಹೆ ನೀಡಿದ್ದಾರೆ’ ಎನ್ನುವ ಮಾತು ಈ ಹಳ್ಳಿ ಭಾಗದಲ್ಲಿ ದಟ್ಟವಾಗಿ ಹರಿದಾಡುತ್ತಿದೆ.

* * 

ಕಂಪ್ಲಿ ನೂತನ ತಾಲ್ಲೂಕಿಗೆ ಹೊಸದರೋಜಿ ಸೇರಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವುದು
ನಾಗರಾಜ ಭೋವಿ
ದಲಿತ ಫ್ಯಾಂಥರ್‍ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷರು, ಹೊಸ ದರೋಜಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT