ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸು ಕರು ಹಾಕಿದ ಸಮಯದಲ್ಲೂ ಪ್ರೋತ್ಸಾಹಧನ ನೀಡಿ

Published 22 ಡಿಸೆಂಬರ್ 2023, 15:01 IST
Last Updated 22 ಡಿಸೆಂಬರ್ 2023, 15:01 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಲೀಟರ್ ಹಾಲಿಗೆ ₹5 ಪ್ರೋತ್ಸಾಹಧನ ನೀಡುವ ಸರ್ಕಾರ, ಹಾಲಿನಲ್ಲಿ ಕೊಬ್ಬಿನಾಂಶ 3.5 ಮತ್ತು ಎಸ್‌ಎನ್‌ಎಫ್ 8.5 ಇಲ್ಲದ ಹಾಲಿಗೆ ಪ್ರೋತ್ಸಾಹಧನ ನೀಡದೆ ಇರುವುದು ಹೈನುಗಾರರಿಗೆ ಆರ್ಥಿಕ ಹೊರೆಯಾಗುತ್ತಿದೆ.

ರಾಸು ಕರು ಹಾಕಿದ ನಂತರ ಹಾಲಿನಲ್ಲಿ ಒಂದು ತಿಂಗಳವರೆಗೂ 3.5 ಕೊಬ್ಬಿನಾಂಶ 8.5 ಎಸ್‌ಎನ್‌ಎಫ್ ಬರುವುದಿಲ್ಲ. ಈ ಅವಧಿಯಲ್ಲಿ ಉತ್ಪಾದಕರು ಡೇರಿಗೆ ಸರಬರಾಜು ಮಾಡುವ ಹಾಲಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಆಗಿರುವ ಕಾರಣ ನೀಡಿ, ಪ್ರೋತ್ಸಾಹಧನ ಕಡಿತಗೊಳಿಸಿದರೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಾಲಿನ ದರ ಕಡಿಮೆ ಮಾಡಲಾಗಿದ್ದು, ಒಂದು ತಿಂಗಳ ಕಾಲ ಪ್ರೋತ್ಸಾಹ ಧನ ನೀಡದಿದ್ದರೆ ರಾಸುಗಳ ನಿರ್ವಹಣೆಗೆ ಪರದಾಡುವಂತಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ರಾಸು ಕರು ಹಾಕಿದ ಬಳಿಕ ರಾಸುಗಳ ಗರ್ಭ ಆರೋಗ್ಯಕರವಾಗಿರುವುದಿಲ್ಲ ಎನ್ನುವ ಕಾರಣಕ್ಕೆ 15 ದಿನಗಳವರೆಗೂ ಅವುಗಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುವುದಿಲ್ಲ. ಹೀಗಾಗಿ ಸಹಜವಾಗಿ ಹಾಲಿನ ಕೊಬ್ಬಿನಾಂಶ 3.5ಕ್ಕಿಂತ ಕಡಿಮೆ ಇರುತ್ತದೆ.

ಕೊಬ್ಬಿನಾಂಶವಿಲ್ಲದ ಹಾಲು ತೆಗೆದುಕೊಳ್ಳದಂತೆ ಒಕ್ಕೂಟಗಳಿಂದಲೂ ಡೇರಿ ಕಾರ್ಯದರ್ಶಿಗಳಿಗೆ ನಿರ್ದೇಶನವಿರುವ ಕಾರಣ, ಅವರು ಹಾಲು ತೆಗೆದುಕೊಳ್ಳುವುದಿಲ್ಲ. ಡಿಗ್ರಿ ಮತ್ತು ಕೊಬ್ಬಿನಾಂಶವನ್ನು ಸರಿದೂಗಿಸಿಕೊಂಡು ಹಾಲು ತೆಗೆದುಕೊಂಡರೂ ನಿರೀಕ್ಷೆಗೆ ತಕ್ಕಷ್ಟು ಬೆಲೆ ಕೊಡಲ್ಲ. ಈ ಸಮಯದಲ್ಲಿ ರೈತರಿಗೆ ಪ್ರೋತ್ಸಾಹಧನವೂ ಬಾರದೇ ಸೂಕ್ತ ಬೆಲೆಯೂ ಸಿಗದೇ ಅವರು ಸಂಕಷ್ಟ ಎದುರಿಸುವಂತಾಗಿದೆ.

ಸರ್ಕಾರ, ತನ್ನ ಆದೇಶ ಬದಲಾವಣೆ ಮಾಡಿ, ಸಹಾಯಧನ ತಡೆಹಿಡಿಯದೇ ಪ್ರೋತ್ಸಾಹಧನ ನೀಡಬೇಕು ಎಂದು ಹಾಲು ಉತ್ಪಾದಕ ಮುನೇಗೌಡ ಸರ್ಕಾರಕ್ಕೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT