ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ: ಆರ್‌. ಅಶೋಕ

Published 22 ಫೆಬ್ರುವರಿ 2024, 16:31 IST
Last Updated 22 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳನ್ನು ಕಡೆಗಣಿಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಧಾನಸಭೆಯಲ್ಲಿ ಗುರುವಾರ ಟೀಕಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ವಕ್ಫ್‌ ಮಂಡಳಿಗೆ ₹ 100 ಕೋಟಿ ಅನುದಾನ ಘೋಷಿಸಿರುವ ಮುಖ್ಯಮಂತ್ರಿ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಕೇವಲ ₹ 10 ಕೋಟಿ ಒದಗಿಸಿದೆ. ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಗೆ ಅನುದಾನ ಹಂಚಿಕೆಯಲ್ಲಿ ಶೇಕಡ 90ರಷ್ಟು ಕಡಿತ ಮಾಡಲಾಗಿದೆ’ ಎಂದು ದೂರಿದರು.

‘ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಅನುದಾನವನ್ನು ಶೇ 200ರಷ್ಟು ಹೆಚ್ಚಿಸಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವಾಲಯಗಳ ಅಭಿವೃದ್ಧಿ ₹ 600 ಕೋಟಿ ವಿಶೇಷ ಅನುದಾನ ಒದಗಿಸಿದ್ದರು. ಕಾಂಗ್ರೆಸ್ ಸರ್ಕಾರ ನಯಾ ಪೈಸೆ ನೀಡಿಲ್ಲ. ಇದು ರಾಮಲಿಂಗಾ ರೆಡ್ಡಿ ಅವರ ಬಜೆಟ್‌ ಅಲ್ಲ, ದಿನೇಶ್‌ ಗುಂಡೂರಾವ್‌ ಬಜೆಟ್ಟೂ ಅಲ್ಲ. ಜಮೀರ್‌ ಬಜೆಟ್‌’ ಎಂದರು.

ಹಟದಿಂದ ನಷ್ಟ: ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದಾರೆ. ಇದು ಒಳ್ಳೆಯ ನಡೆ ಅಲ್ಲ. ತಮಿಳುನಾಡಿನ ಸಂಸ್ಕೃತಿಯನ್ನು ಈ ಸರ್ಕಾರ ಪಾಲಿಸುತ್ತಿದೆ. ಹಟಮಾರಿತನದಿಂದ ರಾಜ್ಯಕ್ಕೆ ನಷ್ಟವಾಗಲಿದೆ ಎಂದು ಹೇಳಿದರು.

‘ಮುಂಗಡದ ಅಂಗಡಿಯಲ್ಲಿ ತಳಿರು ತೋರಣದ ಸದ್ದು, ಅಂಗಡಿಯಲ್ಲಿ ಏನಿಲ್ಲ ಏನಿಲ್ಲ, ಖಾಲಿ ಡಬ್ಬ, ಖಾಲಿ ಡಬ್ಬ’ ಎಂಬ ಕವನ ವಾಚಿಸಿದ ಅಶೋಕ ಚರ್ಚೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT