ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪ’

ಬಸವೇಶ್ವರ ಬಸ್ ನಿಲ್ದಾಣ ನಾಮಫಲಕ ಅನಾವರಣ
Last Updated 7 ಮಾರ್ಚ್ 2023, 10:45 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘12ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಅನುಮಂಟಪ ಸ್ಥಾಪಿಸಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ’ ಎಂದು ಮೆಣಸೂರು ಬಸವಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಸ್ತಿಮಠದ ಸಮೀಪವಿರುವ ಬಸ್ ತಂಗುದಾಣಕ್ಕೆ ವಿಶ್ವಗುರು ಬಸವೇಶ್ವರ ಬಸ್ ನಿಲ್ದಾಣ ನಾಮಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಹಡಪದ ಅಪ್ಪಣ, ಮಡಿವಾಳ ಮಾಚಿದೇವ, ಒಕ್ಕಲಿಕ ಮುದ್ದಣ, ಹುಲಿಯ ಸಂಗಯ್ಯ, ರಮಾದೇವಿ ತಾಯಿ, ಸೂಫಿ ಸಂತ ಮರಳಶಂಕರ ದೇವ ಸೇರಿದಂತೆ ಹಲವು ಕಾಯಕ ವರ್ಗದವರನ್ನು ಅನುಭವಮಂಟಪದ ಮೂಲಕ ಬಸವಣ್ಣ ಮುಂಚೂಣಿಗೆ ತಂದರು. ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಅಂಬುಜರಾಯಮ್ಮ ಮತ್ತಿತರ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟು ಮಹಿಳಾ ಸಮಾನತೆಗೆ ಆದ್ಯತೆ ನೀಡಿದರು. ಅನುಭವ ಮಂಟಪದ ಮೂಲಕ ಕನ್ನಡ ಭಾಷೆಯನ್ನು ವಿದೇಶಿಯರಿಗೆ, ತಮಿಳುನಾಡು, ಆಂಧ್ರ ಪ್ರದೇಶದವರಿಗೆ ಕಲಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಪಟ್ಟಣದ ವ್ಯಾಪ್ತಿಯ ಯಾವುದಾದರೂ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ‘ಬಸವಣ್ಣನವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರ ನೆನಪು ಸದಾ ಉಳಿಯುವ ನಿಟ್ಟಿನಲ್ಲಿ ಬಸ್ ತಂಗುದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಿ, ನಿಲ್ದಾಣದ ಒಳಗೆ ಬಸವಣ್ಣನವರ ವಚನಗಳನ್ನು ಬರೆಯಿಸಲಾಗಿದೆ’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಪಟ್ಟಣ ಪಂಚಾಯಿತಿ ಸದಸ್ಯರ ತೀರ್ಮಾನದಂತೆ ಪಟ್ಟಣದ ವ್ಯಾಪ್ತಿಯಲ್ಲಿರುವ ಪ್ರಮುಖ ಸ್ಥಳಗಳಿಗೆ ಮಹನೀಯರ ಹೆಸರು ಇಡಲಾಗುತ್ತಿದೆ’ ಎಂದರು.

ಶೈವರೆಡ್ಡಿ ಸಮಾಜದ ಅಧ್ಯಕ್ಷ ಶಾಂತರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಮುಕುಂದ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕುಮಾರಸ್ವಾಮಿ, ಮುನಾವರ್ ಪಾಷ, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ರಮೇಶ್, ಶೈವರೆಡ್ಡಿ ಸಮುದಾಯದ ಮನೋಹರ, ಪುಟ್ಟಸ್ವಾಮಿ, ಈಶ್ವರ, ಅಣ್ಣಯ್ಯ, ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೀನಾಕ್ಷಿ ಕಾಂತರಾಜ್, ಕಾಂಗ್ರೆಸ್ ಮುಖಂಡರಾದ ಉಪೇಂದ್ರ, ದೇವಂತ್ ಗೌಡ, ಸ್ಥಳೀಯರಾದ ನವೀನ್ ಹೆಗ್ಡೆ, ಪಿಕಪ್ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT