ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕವಚನದಲ್ಲಿ ದೂಷಣೆ ಸಲ್ಲ: ಡಿಕೆಶಿ, ಎಚ್‌ಡಿಕೆಗೆ ಜಿ.ಟಿ. ದೇವೇಗೌಡ ಸಲಹೆ

Published 18 ನವೆಂಬರ್ 2023, 20:17 IST
Last Updated 18 ನವೆಂಬರ್ 2023, 20:17 IST
ಅಕ್ಷರ ಗಾತ್ರ

ಮಂಗಳೂರು: ‘ಯಾರೂ ವೈಯಕ್ತಿಕವಾಗಿ ಆರೋಪ ಮಾಡುವುದು, ಏಕವಚನ ಬಳಸಿ ದೂಷಣೆ ಮಾಡುವುದು ಸರಿಯಲ್ಲ. ಈ ರೀತಿ ಮಾತನಾಡುವವರನ್ನು ಜನರು ಗೌರವಿಸುವುದಿಲ್ಲ; ಬದಲಾಗಿ ಅವರ ಘನತೆ ಕಡಿಮೆಯಾಗುತ್ತದೆ’ ಎಂದು ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿದರು.

ಶನಿವಾರ ಇಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಅವರೇ ನೀವು ಉಪಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದೀರಿ, ನೀವಾಗಲಿ, ಮುಖ್ಯಮಂತ್ರಿಯಾಗಲಿ, ಏಕವಚನದ ಪದ ಬಳಸಬೇಡಿ. ವೈಯಕ್ತಿಕವಾಗಿ ಮಾತನಾಡಬೇಡಿ. ಅಸಮಾಧಾನ ಇದ್ದರೆ ಪಕ್ಷದ (ಜೆಡಿಎಸ್) ಬಗ್ಗೆ ಮಾತನಾಡಿ. ಈ ಮಾತನ್ನು ಕುಮಾರಸ್ವಾಮಿ ಅವರಿಗೂ ನಾನು ಹೇಳಿದ್ದೇನೆ. ಸರ್ಕಾರ ಎಡವಿದಲ್ಲಿ, ಆ ಬಗ್ಗೆ ಮಾತಾಡೋಣ’ ಎಂದರು.

‘ನಾವು ಕೆಟ್ಟ ಪದ ಬಳಸಿದರೆ, ಯುವಜನರಿಗೆ ನಾವೇ ಆ ಬಗ್ಗೆ ಮಾರ್ಗದರ್ಶನ ಮಾಡಿದ ಹಾಗೆ ಆಗುತ್ತದೆ. ಹಿರಿಯರು ಯುವಜನರಿಗೆ ಮಾದರಿಯಾಗಬೇಕು. ಟೀಕೆ–ಟಿಪ್ಪಣಿಗಳು ಅರ್ಥಪೂರ್ಣವಾಗಿರಬೇಕು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT