ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | 66,275 ಮತ ಜಾಸ್ತಿ; ಯಾರದಾಗಲಿದೆ ಆಸ್ತಿ?

ಕೈ– ಕಮಲ ಪಾಳಯದಲ್ಲಿ ಜೋರಾಗಿದೆ ಸೋಲು ಗೆಲುವಿನ ಲೆಕ್ಕಾಚಾರ
Published 28 ಏಪ್ರಿಲ್ 2024, 4:48 IST
Last Updated 28 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಸಲದ ಚುನಾವಣೆಯಲ್ಲಿ ಮತದಾನದ ಪ್ರಮಾಣ (ಅಂಚೆ ಮತಗಳು ಹಾಗೂ ಮನೆಯಿಂದ ಮತಗಳ ಹೊರತಾಗಿ) ಹೆಚ್ಚೂ ಕಡಿಮೆ ಕಳೆದ ಸಲಕ್ಕಿಂತ ಶೇ 0.44ರಷ್ಟು ಕಡಿಮೆ ಮತದಾನ ಆಗಿದೆ. ಆದರೆ, ಈ ಸಲ  83,401 ಮತದಾರರು ‌ಹೆಚ್ಚು ಇದ್ದುದರಿಂದ ಕಳೆದ ಸಲಕ್ಕಿಂತ ಒಟ್ಟು 66,275 ಮತಗಳು ಹೆಚ್ಚು ಚಲಾವಣೆ ಆಗಿವೆ.

ಈ ಸಲದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನಿಕಟ ಪೈಪೋಟಿ ಇರುವುದರಿಂದ ಈ ಹೆಚ್ಚುವರಿ ಮತಗಳೇ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

2019ರ ಲೋಕಸಭಾ ಮತದಾನಕ್ಕಿಂತ 37,138 ಹೆಚ್ಚು ಮಹಿಳೆಯರು ಹಾಗೂ 29,137 ಮಂದಿ ಪುರುಷ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಈ ಸಲ ಮತ ಚಲಾಯಿಸಿದ್ದಾರೆ.

ನಾಲ್ಕು ಕ್ಷೇತ್ರಗಳಲ್ಲಿ ಈ ಸಲ ಮತದಾನದ ಪ್ರಮಾಣ 2019ಕ್ಕಿಂತಲೂ ಕಡಿಮೆ ಆಗಿದ್ದರೆ, ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಈ ಸಲ ಮತದಾನದ ಪ್ರಮಾಣ ಸುಳ್ಯ ಕ್ಷೇತ್ರದಲ್ಲಿ ಶೇ 1.15 (2019ರಲ್ಲಿ ಶೇ 84.16), ಪುತ್ತೂರಿನಲ್ಲಿ ಶೇ 1.18 (2019ರಲ್ಲಿ ಶೇ 82.28) , ಮಂಗಳೂರು ಉತ್ತರದಲ್ಲಿ ಶೇ 1.56 (2019ರಲ್ಲಿ ಶೇ 75.31) ಹಾಗೂ ಮಂಗಳೂರು ದಕ್ಷಿಣದಲ್ಲಿ ಶೇ 3.4ರಷ್ಟು (2019ರಲ್ಲಿ 70.21) ಕಡಿಮೆ ಆಗಿದೆ. ಮಂಗಳೂರು ಕ್ಷೇತ್ರದಲ್ಲಿ ಶೇ 8.15 (2019ರಲ್ಲಿ ಶೇ 70.21), ಬೆಳ್ತಂಗಡಿ ಕ್ಷೇತ್ರದಲ್ಲಿ ಶೇ 1.06  (2091ರಲ್ಲಿ 80.24), ಮೂಡುಬಿದಿರೆ ಕ್ಷೇತ್ರದಲ್ಲಿ  ಶೇ 0.55 ರಷ್ಟು (2019ರಲ್ಲಿ ಶೇ 75.96), ಬಂಟ್ವಾಳ ಕ್ಷೇತ್ರದಲ್ಲಿ ಶೇ 1.06 ದಷ್ಟು (2019ರಲ್ಲಿ 80.24))  ಹೆಚ್ಚಳವಾಗಿದೆ (ಅಂಚೆ ಮತಗಳು ಈ ಲೆಕ್ಕಾಚಾರದಲ್ಲಿ ಸೇರಿಲ್ಲ).

ವಿಧಾನಸಭಾ ಕ್ಷೇತ್ರವಾರು ಚಲಾವಣೆಯಾದ ಮತಗಳನ್ನು ಗಮನಿಸಿದರೆ, ಈ ಸಲ ಅತಿ ಹೆಚ್ಚು ಮತದಾರರು ಇದ್ದುದು ಮಂಗಳೂರು ಉತ್ತರ ಕ್ಷೇತ್ರದಲ್ಲಿ (2,32,817). ಆದರೆ, ಅತಿ ಹೆಚ್ಚು ಮತಗಳು ಚಲಾವಣೆಯಾಗಿರುವುದು ಬೆಳ್ತಂಗಡಿ ಕ್ಷೇತ್ರದಲ್ಲಿ(1,89,289). ಅತಿ ಕಡಿಮೆ ಮತದಾರರು ಇದ್ದುದು ಮಂಗಳೂರು (2,10,093) ಕ್ಷೇತ್ರದಲ್ಲಿ. ಆದರೆ, ಅತಿ ಕಡಿಮೆ ಮತ ಚಲಾವಣೆಯಾಗಿರುವುದು ಮೂಡುಬಿದಿರೆ ಕ್ಷೇತ್ರದಲ್ಲಿ (1,60,767). 

 ಕಳೆದ ಚುನಾವಣೆಗೆ ಹೋಲಿಸಿದರೆ, ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾಯಿತ ಮತಗಳು ಗರಿಷ್ಠ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಮಂಗಳೂರು ಕ್ಷೇತ್ರದಲ್ಲಿ. ಇಲ್ಲಿ ಕಳೆದ ಸಲಕ್ಕಿಂತ 15,822 ಮತಗಳು ಹೆಚ್ಚು ಚಲಾವಣೆಯಾಗಿವೆ. ಮತಗಳ ಹೆಚ್ಚಳದ ಸಂಖ್ಯೆ ಕಡಿಮೆ ಇರುವುದು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ. ಇಲ್ಲಿ ಕಳೆದ ಸಲಕ್ಕಿಂತ ಕೇವಲ 1,038 ಮತಗಳಷ್ಟೇ ಹೆಚ್ಚಾಗಿವೆ. ಸುಳ್ಯದಲ್ಲಿ 4,562, ಬೆಳ್ತಂಗಡಿ ಕ್ಷೇತ್ರದಲ್ಲಿ 11,012 ಮತಗಳು, ಬಂಟ್ವಾಳ ಕ್ಷೇತ್ರದಲ್ಲಿ 9,084 ಮತಗಳು, ಪುತ್ತೂರು ಕ್ಷೇತ್ರದಲ್ಲಿ 7,529 ಮತಗಳು, ಮೂಡುಬಿದಿರೆ ಕ್ಷೇತ್ರದಲ್ಲಿ 7,545 ಮತಗಳು, ಮಂಗಳೂರು ಉತ್ತರದಲ್ಲಿ 9,108 ಮತಗಳು ಹೆಚ್ಚಾಗಿವೆ. 

ಕ್ಷೇತ್ರದಲ್ಲಿ ಚಲಾವಣೆಯಾಗಿರುವ 14.09 ಲಕ್ಷ ಮತಗಳು ಮತಯಂತ್ರದಲ್ಲಿ ಭದ್ರವಾಗಿದ್ದು, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿವೆ.  ಮತದಾರರು ಯಾರ ’ಕೈ‘ ಹಿಡಿದಿದ್ದಾರೆ ಎಂಬುವುದನ್ನು ಖಚಿತವಾಗಿ ತಿಳಿದುಕೊಳ್ಳಲು  ಜೂನ್‌ 4ರಂದು ನಡೆಯಲಿರುವ ಮತ ಎಣಿಕೆವರೆಗೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT