ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ವ್ಯಾಪಾರಿಗೆ ₹54 ಲಕ್ಷ ವಂಚನೆ

Published 28 ಏಪ್ರಿಲ್ 2024, 16:13 IST
Last Updated 28 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಪಿಎಂಸಿ ಆವರಣದಲ್ಲಿ ಒಣ ಮೆಣಸಿನಕಾಯಿ ಮಾರಾಟಗಾರರಿಂದ ₹86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ, ₹32.81 ನೀಡಿ, ಉಳಿದ ಹಣ (₹54 ಲಕ್ಷ) ನೀಡದೆ ವಂಚಿಸಿರುವ ಮೂವರ ವಿರುದ್ಧ ಇಲ್ಲಿನ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಮೂಲದ ಅಸಮಕ್ಕುಲಾಲ, ಅಕಿಂತಾ ಮತ್ತು ಧಾವಲ್ ವಿರುದ್ಧ, ಶಂಭುಲಿಂಗೇಶ್ವರ ಟ್ರೇಡರ್ಸ್‌ ಮಾಲೀಕ ಶಂಭುಲಿಂಗಪ್ಪ ಅಂಗಡಿ ದೂರು ನೀಡಿದ್ದಾರೆ. ಫೆಬ್ರವರಿ 24ರಂದು ₹86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ, ಜೂನ್ 30ರವರೆಗೆ ₹32 ಲಕ್ಷ ಮರಳಿಸಿದ್ದರು. ಬಾಕಿ ಹಣ ಕೇಳಿದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳವು: ಇಲ್ಲಿನ ವಿಜಯನಗರದ ಮಂಜುನಾಥ ಉಣಕಲ್ಲ ಅವರ ಮನೆ ಬಾಗಿಲಿನ ಬೀಗ ಮುರಿದು ₹2.58 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕು ಇರಿದು ಹಲ್ಲೆ: ಇಲ್ಲಿನ ಉಣಕಲ್‌ನ ಸಿದ್ದಪ್ಪ ಅವರೊಂದಿಗೆ ಸ್ಥಳೀಯ ನಿವಾಸಿ ಮೌನೇಶ ಏಕಾಏಕಿ ತಂಟೆ ತೆಗೆದು, ಚಾಕು ಇರಿದು ಹಲ್ಲೆ ನಡೆಸಿರುವ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT