ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಹದಗೆಟ್ಟ ಸಂಚಾರ ವ್ಯವಸ್ಥೆ

ನೆರಳಿನಲ್ಲಿ ಹೆಲ್ಮೆಟ್‌ಗೆ ಕಾದು ಕುಳಿತ ಸಂಚಾರಿ ಪೊಲೀಸರು: ಸಾರ್ವಜನಿಕರ ಅಸಮಾಧಾನ
Last Updated 20 ಮಾರ್ಚ್ 2017, 6:34 IST
ಅಕ್ಷರ ಗಾತ್ರ

ಧಾರವಾಡ: ನಿಧಾನಗತಿಯ ಬಸ್ ರ್‌್್ಯಾಪಿಡ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟ್‌ಂ (ಬಿಆರ್‌ಟಿಎಸ್) ಕಾಮಗಾರಿಯಿಂದ ನಗ ರದ ಸಂಚಾರ ವ್ಯವಸ್ಥೆ ತೀವ್ರ ಹದಗೆಟ್ಟಿದೆ.

ಬಿಆರ್‌ಟಿಎಸ್‌ ಕಾಮಗಾರಿಗಾಗಿ ಪಿ.ಬಿ. ರಸ್ತೆಯ ಸಿಗ್ನಲ್‌ ಕೇಬಲ್ ಕಡಿತಗೊಳಿಸಿರುವುದು ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲವಾಗಿರುವುದಕ್ಕೆ ಮುಖ್ಯ ಕಾರಣ.

ಸದ್ಯ ನಗರದಲ್ಲಿ 10 ಜನ ಹೋಂ ಗಾರ್ಡ್ಸ್‌, 22 ಕಾನ್‌ಸ್ಟೆಬಲ್‌, ಎಂಟು ಎಎಸ್‌ಐ ಸಿಬ್ಬಂ ದಿಯನ್ನು ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿದೆ. ಆದರೆ ಕೆಲವೆಡೆ ಮಾತ್ರ ಬೆರಣಿಕೆಯಷ್ಟು ಸಿಬ್ಬಂದಿ ಸಂಚಾರ ನಿಯಂತ್ರಣದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇದರಿಂದ ವಾಹನ ಸವಾರರು, ಪಾದ ಚಾರಿಗಳು, ಬಸ್‌ ಪ್ರಯಾಣಿಕರು ನಗರ ದೊಳಗೆ ಬರಲು ಮತ್ತು ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ.

ಸಮಸ್ಯೆ ಕುರಿತು ಮಾತನಾಡಿದ ಹೆಸರು ಹೇಳಲಿಚ್ಛಸದ ಹೋಂ ಗಾರ್ಡ್‌ ಒಬ್ಬರು, ‘ಪ್ರಮುಖ ಜಂಕ್ಷನ್‌ನಲ್ಲಿ ನಿಂತು ಸಂಚಾರ ನಿಯಂತ್ರಿಸಬೇಕಿರುವ ಪೊಲೀ ಸರು ಕೇವಲ ಹೆಲ್ಮೆಟ್‌ ರಹಿತ ಸಂಚಾರಕ್ಕೆ ಒತ್ತು ನೀಡುತ್ತಿದ್ದಾರೆ.

ನಾವು ಮಾತ್ರ ಧೂಳು, ಬಿಸಿಲು, ಹೊಗೆಯಲ್ಲಿ ಸಂಚಾರ ನಿಯಂತ್ರಿಸಬೇಕಾಗಿದೆ’ ಎಂದು ಅಳಲು ತೋಡಿಕೊಂಡರು. ಇದಕ್ಕೆ ದನಿಗೂ ಡಿಸಿದ ಪಾದಚಾರಿ ಅಶೋಕ ಕದಂ ‘ಬಹುತೇಕ ಸಂಚಾರಿ ಪೊಲೀಸರು ಹೆಲ್ಮೆಟ್‌ ಹಾಕಿಕೊಳ್ಳದವರನ್ನು ಮಾತ್ರ ಹಿಡಿಯಲು ಮುಂದಾಗುತ್ತಿದ್ದಾರೆ. ಉಳಿದ ಸಮಸ್ಯೆಗಳು ಅವರ ಕಣ್ಣಿಗೆ ಕಾಣುತ್ತಿಲ್ಲ’ ಎಂದರು.

ಪ್ರಮುಖವಾಗಿ ಗಾಂಧಿನಗರ, ಜೆಎಸ್‌ಎಸ್‌, ಟೋಲ್‌ನಾಕಾ, ಎನ್‌ಎನ್‌ ಟಿಎಫ್‌, ಕೋರ್ಟ್‌ ಸರ್ಕಲ್‌, ಜ್ಯುಬಿಲಿ ವೃತ್ತದಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಆದರೆ ಇಲ್ಲಿಯೂ ಪೊಲೀ ಸರು ಕಾಣುವುದಿಲ್ಲ.  ‘ಮಹಿಳೆ ಯರು, ವೃದ್ಧರು, ಶಾಲಾ ಮಕ್ಕಳು ಭಯದಲ್ಲೇ ರಸ್ತೆ ದಾಟಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಲಾರಿ, ಬಸ್‌ಗಳ ಚಕ್ರದಡಿ ಸಿಲುಕಬಹುದು. ಆದರೆ ಸಂಬಂಧಿಸಿ ದವರು ಮಾತ್ರ ಇತ್ತ ಗಮನಹರಿ ಸುವುದಿಲ್ಲ’ ಎಂದು ಹೇಳಿದರು ಖಾಸಗಿ ಕಂಪೆನಿ ಉದ್ಯೋಗಿ ಆಶಾ.

‘ಮೊದಲಾದರೆ ರಸ್ತೆ ಬದಿ ಗಿಡಗಳ ನೆರಳಿರುತ್ತಿತ್ತು. ಬಿಆರ್‌ಟಿಎಸ್‌ ಯೋಜನೆ ಗಾಗಿ ರಸ್ತೆ ಪಕ್ಕದ ಎಲ್ಲ ಮರ, ತಂಗು ದಾಣ ನೆಲಸಮ ಮಾಡಿದರು. ಈಗ ಇಂಥ ಬಿಸಿಲಿನ ನಡುವೆ ಬಸ್‌ಗೆ ಕಾಯ ಬೇಕು. ಪೊಲೀಸರು ಇಲ್ಲದಿರುವುದರಿಂದ ಆತಂಕದಲ್ಲೇ ಬಸ್ ಹಿಡಿಯಬೇಕು’ ಎಂದು ನೋವು ತೋಡಿಕೊಂಡರು ವೃದ್ಧೆ ಕರೆವ್ವ ಶೆಟ್ಟರ.

‘ಟ್ರಾಫಿಕ್ ಸಮಸ್ಯೆಯಿಂದ ಬೆಳಿಗ್ಗೆ ಮತ್ತು ಸಂಜೆ ಪ್ರತಿಯೊಂದು ಜಂಕ್ಷನ್‌ಗಳಲ್ಲಿ ವಾಹನಗಳು ಏಕಾಏಕಿ ಬರುತ್ತವೆ. ಅವುಗಳ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಸಂಚಾರಿ ಪೊಲೀಸರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಹೋದ ಸಂದರ್ಭದಲ್ಲಿ ಜಂಕ್ಷನ್‌ ಬಳಿ ಪೊಲೀಸ್‌ ಪೇದೆಗಳು ಬಂದು ಸಂಚಾರ ನಿಯಂತ್ರಿಸುತ್ತಾರೆ. ನಂತರ ಮತ್ತದೆ ಸಮಸ್ಯೆ ಮುಂದುವರಿ ಯುತ್ತದೆ’ ಎಂದು ಹೇಳುತ್ತಾರೆ ಧಾರ ವಾಡದ ಸಂಚಾರಿ ಪೊಲೀಸ್‌ ಅಧಿಕಾರಿ ಶ್ರೀಕಾಂತ ತೊಟಗಿ.

ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿ ಕೂಡ ಕೆಲವೆಡೆ ನಿಯೋಜನೆ ಇಲ್ಲದಿರುವುದರಿಂದ ಸಂಚಾರವು ಕಿರಿಕಿರಿಯಾಗುತ್ತಿದೆ. ಕೆಲವೊಮ್ಮೆ ಅಡ್ಡಾದಿಡ್ಡಿ ವಾಹನಗಳ ಚಲಾವಣೆಯಿಂದ ಗಂಟೆಗಟ್ಟಲೆ ಟ್ರಾಫಿಕ್‌ಜಾಮ್ ಆದ ಪ್ರಸಂಗಗಳೂ ಇವೆ. ಸಂಚಾರ ದಟ್ಟಣೆಯಿಂದ ಯಾವ ಮಾರ್ಗದಲ್ಲಿ ಹೇಗೆ ತೆರಳಬೇಕು ಎಂಬುದರ ಕುರಿತೇ ಕೆಲಬಾರಿ ಪೊಲೀಸರಿಗೆ ಗೊಂದಲ ಉಂಟಾಗಿರುತ್ತದೆ. ಇದನ್ನು ನಿಯಂತ್ರಿಸಬೇಕು ಎನ್ನುವುದು ಜನರ ಒತ್ತಾಸೆ.

*
ಧಾರವಾಡ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಗೊತ್ತಿಲ್ಲ. ಅಲ್ಲಿ ಸಿಗ್ನಲ್‌ ಇಲ್ಲದಿದ್ದರಿಂದ ಪೊಲೀಸರು ಮತ್ತು ಹೋಂ ಗಾರ್ಡ್ಸ್‌ ಒಟ್ಟಾಗಿ ಸಂಚಾ ರಕ್ಕೆ ಅವಕಾಶ ಕಲ್ಪಿಸಲು ಸೂಚಿಸುತ್ತೇನೆ.
-ಎಸ್‌.ಬಿ.ಖವಾಸ,
ಉಪ ಆಯುಕ್ತ, ಸಂಚಾರ ಪೊಲೀಸ್‌ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT