ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಆಟದ ಭರವಸೆ ಪ್ರಣಮ್‌

ಯಮಸಂಧಿ ಗ್ರಾಮದ ಬಾಲಕನ ಪರಾಕ್ರಮ
Last Updated 22 ಡಿಸೆಂಬರ್ 2016, 5:44 IST
ಅಕ್ಷರ ಗಾತ್ರ
ಬೇಲೂರು: ಈ ತಾಲ್ಲೂಕಿನ ಗ್ರಾಮೀಣ ಬಾಲಕನೊಬ್ಬ ರಾಷ್ಟ್ರಮಟ್ಟದ ಹಾಕಿ ಆಟದಲ್ಲಿ ಪ್ರತಿಭೆ ಮೆರೆಯುತ್ತಿದ್ದಾನೆ. ಭರವಸೆಯ ಆಟಗಾರನಾಗಿ ರೂಪು ಗೊಳ್ಳುತ್ತಿದ್ದಾನೆ.
 
ಬೇಲೂರು ತಾಲ್ಲೂಕು ಯಮಸಂಧಿ ಗ್ರಾಮದ ವೈ.ಆರ್‌.ಮಹೇಶ್‌ ಮತ್ತು ಶಿಕ್ಷಕಿ ತೀರ್ಥಾವತಿ ಅವರ ಪುತ್ರನಾಗಿ ರುವ ಪ್ರಣಮ್‌ಗೌಡ ಕುಶಾಲ ನಗರದ ಕೂಡಿಗೆ ಕ್ರೀಡಾ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. 
 
ಪ್ರಾಥಮಿಕ ಶಿಕ್ಷಣವನ್ನು ಬೇಲೂರಿನ ಶಾಂತಲಾ ವಿದ್ಯಾಸಂಸ್ಥೆ ಮತ್ತು ಮಾಧ್ಯ ಮಿಕ ಶಿಕ್ಷಣವನ್ನು ಹಾಸನದ ಬಿಜಿಎಸ್ ಶಾಲೆಯಲ್ಲಿ ಪಡೆದಿದ್ದಾನೆ.
 
ಚಿಕ್ಕ ವಯಸ್ಸಿನಿಂದಲೇ ಹಾಕಿ ಆಟದ ಬಗ್ಗೆ ವ್ಯಾಮೋಹ ಬೆಳೆಸಿ ಕೊಂಡ ಪ್ರಣಮ್‌ 5ನೇ ತರಗತಿಯಿಂದಲೇ ಹಾಕಿ ತರಬೇತಿ ಪಡೆಯಲು ಆರಂಭಿಸಿದ. 7ನೇ ತರಗತಿ ಯಲ್ಲಿ ವ್ಯಾಸಂಗ ಮಾಡುವಾಗ ಜಾರ್ಖಂಡ್‌ ರಾಜ್ಯದ ರಾಂಚಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಹಾಕಿ ಸ್ಪರ್ಧೆಯಲ್ಲಿ 14 ವರ್ಷ ದೊಳಗಿನ ಬಾಲಕರ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ. 8ನೇ ತರಗತಿಯಲ್ಲಿ ಗದಗಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಸ್ಪರ್ಧೆಯಲ್ಲಿ ಇವರ ಶಾಲಾ ತಂಡ ಪ್ರಥಮ ಬಹುಮಾನ ಪಡೆದಿತ್ತು. 9ನೇ ತರಗತಿಯಲ್ಲಿದ್ದಾಗ ಬೆಳಗಾವಿಯ ಚಂದ ರಗಿಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಹಾಗೂ ಈ ವರ್ಷ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಸ್ಪರ್ಧೆಯಲ್ಲೂ ಇವರ ತಂಡ ಪ್ರಥಮ ಬಹು ಮಾನ ಗಳಿಸಿತ್ತು.
 
ಸ್ಕೂಲ್‌ ಗೇಮ್ಸ್‌ ಫೆಡ ರೇಷನ್‌ ಆಫ್‌ ಇಂಡಿಯಾ ಸಂಸ್ಥೆಯು ಮಧ್ಯಪ್ರದೇಶದ ಭೋಪಾಲ್‌ನಲ್ಲಿ  ನಡೆಸಿದ ರಾಷ್ಟ್ರ ಮಟ್ಟದ ಹಾಕಿ ಟೂರ್ನಿ ಯಲ್ಲಿ ಪ್ರಣಮ್‌ ಕರ್ನಾಟಕ ವನ್ನು ಪ್ರತಿನಿಧಿಸಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ರೈಟ್‌ ಆಫ್‌ ಆಟಗಾರನಾಗಿ ಚುರುಕಿನಿಂದ ಆಟ ವಾಡುವ ಮೂಲಕ ಉತ್ತಮ ಹೆಸರು ಪಡೆದಿದ್ದಾನೆ. 
 
ಈತನ ಸಹೋದರ ವೈ.ಎಂ.ಪ್ರಜ್ವಲ್‌ ಗೌಡ ಸಹ ಅಂತರರಾಷ್ಟ್ರೀಯ ವಾಲಿ ಬಾಲ್‌ ಆಟಗಾರನಾಗಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕ ಮತ್ತು ದೇಶ ವನ್ನು ಪ್ರತಿನಿಧಿಸಿರುವುದು ವಿಶೇಷ. ಅಣ್ಣನ ಸ್ಫೂರ್ತಿಯಿಂದಲೇ ಕ್ರೀಡಾ ಕ್ಷೇತ್ರ ದಲ್ಲಿ ಬೆಳಗುತ್ತಿರುವ ಪ್ರಣಮ್‌ ಹಾಕಿ ಆಟ ದಲ್ಲಿ ಭರವಸೆ ಮೂಡಿಸಿದ್ದಾನೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT