ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ಪುರಸಭೆ: ₹ 27.50 ಲಕ್ಷ ಉಳಿತಾಯ ಬಜೆಟ್

Published 8 ಮಾರ್ಚ್ 2024, 6:49 IST
Last Updated 8 ಮಾರ್ಚ್ 2024, 6:49 IST
ಅಕ್ಷರ ಗಾತ್ರ

ಮಾಗಡಿ: ಇಲ್ಲಿನ ಪುರಸಭೆಯಲ್ಲಿ ಬುಧವಾರ 2024- 25ನೇ ಸಾಲಿಗೆ ₹ 27.50 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಆಡಳಿತ ಅಧಿಕಾರಿ ಬಿಸ್ನೊಹಿ ಗೈರುಹಾಜರಿಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಶಿವರುದ್ರಯ್ಯ, ಮತ್ತು ಸದಸ್ಯರ ಸಮ್ಮುಖದಲ್ಲಿ ಬಜೆಟ್ ಮಂಡಿಸಲಾಯಿತು.

ಕೆಲ ವಿಷಯಗಳನ್ನು ಕುರಿತು ಆಡಳಿತ ಮತ್ತು ವಿರೋಧ ಪಕ್ಷದವರು ಆಕ್ಷೇಪದ ಜೊತೆಗೆ ಪರ–ವಿರೋಧದ ಚರ್ಚೆ ನಡೆಸಿದರು. ಕಡೆಗೆ ಸರ್ವ ಸದಸ್ಯರು ಬಜೆಟ್‌ಗೆ ಅನುಮೋದನೆ ನೀಡಿದರು.

ಆಯವ್ಯಯದ ಆರಂಭ ಶಿಲ್ಕು ₹ 95.72 ಲಕ್ಷ ಇದ್ದು, ₹ 13.40 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ. ಒಟ್ಟು ಜಮಾ ₹ 1.96 ಕೋಟಿ, ಒಟ್ಟು ವೆಚ್ಚ ₹ 13.26 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಅನುದಾನದ ಅಡಿಯಲ್ಲಿ ₹ 1.30 ಕೋಟಿ ಬರಬಹುದೆಂದು ನಿರೀಕ್ಷಿಸಲಾಗಿದೆ.

ಕುಡಿಯುವ ನೀರು ಮತ್ತು ಬೀದಿ ದೀಪ ಸಮಸ್ಯೆ ಪರಿಹಾರಕ್ಕೆ ಮೊದಲು ಆದ್ಯತೆ ನೀಡುವ ಜೊತೆಗೆ, ಪಟ್ಟಣದ ಮೂಲಸೌಕರ್ಯ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗು ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ.

ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಅಥವಾ ಕಾಮಗಾರಿಕೆಗೆ ಎಸ್ ಎಫ್ ಸಿ ವಿಶೇಷ ಅನುದಾನದ ಅಡಿ ₹ 5 ಕೋಟಿ ಹಣ ನಿರೀಕ್ಷಿಸಲಾಗಿದೆ.

ಆಸ್ತಿಯಿಂದ ₹1.94 ಕೋಟಿ: ಪ್ರಮುಖ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ ₹ 1.94 ಕೋಟಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. 

ಯಾವುದಕ್ಕೆ ಎಷ್ಟು ?
₹ 6.63 ಕೋಟಿ: ಪಟ್ಟಣದ ಮೂಲಭೂತ ಸೌಕರ್ಯ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು ಗೆ ಮತ್ತು ಕಾಮಗಾರಿಕೆಗಳಿಗೆ.
₹ 1.80 ಕೋಟಿ ಕುಡಿಯುವ ನೀರು ಮತ್ತು ಬೀದಿ ದೀಪಗಳ ವಿದ್ಯುತ್ ವೆಚ್ಚ ನಿರ್ವಹಣೆಗಾಗಿ.
₹ 1.05 ಕೋಟಿ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗಾಗಿ
₹ 95 ಲಕ್ಷ ಕುಡಿಯುವ ನೀರು ಸರಬರಾಜು ನಿರ್ವಹಣೆ ಮಾಡಲು.
₹ 66 ಲಕ್ಷ ಬೀದಿ ದೀಪಗಳ ಅಭಿವೃದ್ಧಿಗಾಗಿ.
₹ 30 ಲಕ್ಷ ಪರಿಶಿಷ್ಟ ಜಾತಿ ಪಂಗಡ ಸಮಾಜದ ಅಭಿವೃದ್ಧಿ ಗಾಗಿ
₹ 12 ಹಿಂದುಳಿದ ವರ್ಗ ಅಲ್ಪಸಂಖ್ಯಾತ ಸಮಾಜದ ಅಭಿವೃದ್ಧಿಗಾಗಿ
₹ 5 ಲಕ್ಷ ಅಂಗವಿಕಲ ವರ್ಗದ ಸಮಾಜದ ಅಭಿವೃದ್ಧಿಗಾಗಿ
₹ 5 ಲಕ್ಷ ಯುವಜನ ಕ್ರೀಡಾ ಪ್ರೋತ್ಸಾಹಕಾಗಿ
₹ 5 ಲಕ್ಷ ಮಾಧ್ಯಮ ಪ್ರತಿನಿಧಿಗಳಿಗೆ ಪತ್ರಕರ್ತರಿಗೆ ವೈದ್ಯಕೀಯ ಸಹಾಯಧನ


ಪುರಸಭೆಯ ಅನುದಾನ ಅಂದಾಜು

  • ರಾಜ್ಯ ಹಣಕಾಸು ಆಯೋಗದ ವಿದ್ಯುತ್ ಅನುದಾನ ₹ 1.80 ಕೋಟಿ

  • ರಾಜ್ಯ ಹಣಕಾಸು ಆಯೋಗದ ವೇತನ ಅನುದಾನ ₹ 1.30 ಕೋಟಿ

  • ರಾಜ್ಯ ಹಣಕಾಸು ಆಯೋಗದ ಆಸ್ತಿ ಸೂಚನೆ ಮತ್ತು ಪರಿಶಿಷ್ಟ ಜಾತಿ ಪಂಗಡ ಅನುದಾನ₹ 60 ಲಕ್ಷ

  • ಎಸ್ಎಫ್‌ಸಿ ಕುಡಿಯುವ ನೀರಿನ ಅನುದಾನ ₹ 5 ಲಕ್ಷ

  • ಎಸ್ಎಫ್‌ಸಿ ವಿಶೇಷ ಅನುದಾನ ₹ 5 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT