ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ | ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ

Published 28 ಏಪ್ರಿಲ್ 2024, 15:42 IST
Last Updated 28 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ನಿಡಗುಂದಿ: ಮತದಾರರ ಧ್ವಜ ದಿನಾಚರಣೆ ಅಂಗವಾಗಿ ಅರ್ಹರಲ್ಲಿ ಜಾಗೃತಿ ಮೂಡಿಸಲು ‘ನಮ್ಮ ನಡೆ, ಮತಗಟ್ಟೆ ಕಡೆ’ ಎಂಬ ಘೋಷ ವಾಕ್ಯದ ಅಡಿ ತಾಲ್ಲೂಕಿನ 11 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 78 ಮತಗಟ್ಟೆ ಕೇಂದ್ರಗಳಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಲಾಯಿತು.

ಮತದಾರರನ್ನು ಸೆಳೆಯುವ ನಾಡ ಗೀತೆ, ದೇಶಪ್ರೇಮ ಗೀತೆ, ಜನಪದ ಗೀತೆಗಳು, ಕಾಲ್ನಡಿಗೆ ಜಾಥಾ ಸೇರಿ ಚುನಾವಣಾ ವಿಷಯವನ್ನೊಳಗೊಂಡ ಕಾರ್ಯಕ್ರಮ ಆಯೋಜಿಸಿ ಪ್ರತಿ ಮತಗಟ್ಟೆಗಳನ್ನು ಮತದಾರರಿಗೆ ಪರಿಚಯಿಸಲಾಯಿತು.

ಬೇನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತದಾರರನ್ನು ಸೆಳೆಯಲು ಸ್ಥಳೀಯ ಜಾನಪದ ಹಾಗೂ ಚುನಾವಣಾ ಜಾಗೃತಿ ಗೀತೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಚಿಮ್ಮಲಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಮುಂಭಾಗದಲ್ಲಿ ‘ವೋಟ್‌ ಫಾರ್ ಎ ಬೆಟರ್ ಇಂಡಿಯಾ’ ಕುರಿತು ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ವಂದಾಲ ಗ್ರಾಮದ 186, 187, 188- ಸರ್ಕಾರಿ ಶಾಲೆ ಮತಗಟ್ಟೆ ಕೇಂದ್ರದಲ್ಲಿ ಪಿಡಿಒ ಎಂ.ಬಿ. ಹಾವರಗಿ ಅವರು ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಹೆಬ್ಬಾಳ ಗ್ರಾಮದ 155- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಪಿಡಿಒ ಬಸವರಾಜ ಕಾಳಗಿ ಅವರು ಧ್ವಜಾರೋಹಣ ನೆರವೇರಿಸಿ ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.

ಬಳಬಟ್ಟಿ ಗ್ರಾಮದಲ್ಲಿ ಮತದಾರರ ಧ್ವಜ ದಿನಾಚರಣೆ ನಿಮಿತ್ತ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾನಪ್ಪ ಹುಗ್ಗಿ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾನ ಜಾಗೃತಿ ಕರಪತ್ರ ವಿತರಣೆ ಮಾಡಿದರು. ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಲಾಯಿತು.

ನಿಡಗುಂದಿ ತಾಲ್ಲೂಕಿನ ‌ಯಲಗೂರದಲ್ಲಿ ಭಾನುವಾರ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ನಿಮಿತ್ತ ಮತದಾರ ಜಾಗೃತಿ ಜಾಥಾ ಜರುಗಿತು
ನಿಡಗುಂದಿ ತಾಲ್ಲೂಕಿನ ‌ಯಲಗೂರದಲ್ಲಿ ಭಾನುವಾರ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ನಿಮಿತ್ತ ಮತದಾರ ಜಾಗೃತಿ ಜಾಥಾ ಜರುಗಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT