ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಹಂತ–2; ಕಣ ಚಿತ್ರಣಕ್ಕೆ ಬಂತು ಆಕಾರ

ಉಮೇದುವಾರಿ ಹಿಂಪಡೆಯಲು ಏ. 22 ಕೊನೆಯ ದಿನ
Published 20 ಏಪ್ರಿಲ್ 2024, 0:18 IST
Last Updated 20 ಏಪ್ರಿಲ್ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ಮಲೆನಾಡಿನ ಶಿವಮೊಗ್ಗ, ಕರಾವಳಿಯ ಉತ್ತರ ಕನ್ನಡ, ಮಧ್ಯ ಕರ್ನಾಟಕದ ದಾವಣಗೆರೆ ಸೇರಿದಂತೆ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರ ಗಳಲ್ಲಿನ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ತೆರೆ ಬಿದ್ದಿದೆ. ನಾಮಪತ್ರ ವಾಪಸ್‌ಗೆ ಅವಕಾಶವಿದ್ದು, ಆರಂಭಿಕ ಹಂತದ ಸವಾಲಿನ ಚಿತ್ರಣ ರೂಪು ಪಡೆದಂತಾಗಿದೆ.

ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಏ.19ರಂದು 137 ಅಭ್ಯರ್ಥಿಗಳು ಸೇರಿದಂತೆ ಇಲ್ಲಿಯವರೆಗೆ 337 ಅಭ್ಯರ್ಥಿಗಳು 503 ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ (ಏ.20) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯುವ ಅವಧಿ ಏ. 22ಕ್ಕೆ ಮುಕ್ತಾಯವಾಗಲಿದೆ. ಮೇ 7ರಂದು ಮತದಾನ ನಡೆಯಲಿದೆ.

ಏ. 12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಆರಂಭದಲ್ಲಿ ಭರಾಟೆ ಇರಲಿಲ್ಲ. ಕೊನೆಯ ಮೂರು ದಿನಗಳಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಭಾರಿ ಜನ ಸೇರಿಸಿದ ಅಭ್ಯರ್ಥಿಗಳು, ತಮ್ಮ ಬಲವನ್ನೂ ಪ್ರದರ್ಶಿಸಿದರು.  

ಬಿಜೆಪಿ–ಜೆಡಿಎಸ್‌ ಮಧ್ಯೆ ಮೈತ್ರಿಯಾಗಿದ್ದರೂ, ಜೆಡಿಎಸ್‌ ಎರಡನೇ ಹಂತದಲ್ಲಿ ಮತದಾನ ನಡೆಯುವ ಯಾವ ಕ್ಷೇತ್ರದಲ್ಲೂ  ಸ್ಪರ್ಧಿಸಿಲ್ಲ. ಹಾಗಾಗಿ, ಎಲ್ಲ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್–ಬಿಜೆಪಿ ಅಭ್ಯರ್ಥಿಗಳು ಸೆಣಸಲಿದ್ದಾರೆ. ಶಿವಮೊಗ್ಗದಲ್ಲಿ ಕೆ.ಎಸ್‌. ಈಶ್ವರಪ್ಪ (ಬಿಜೆಪಿ), ರಾಯಚೂರಿನಲ್ಲಿ ಬಿ.ವಿ. ನಾಯಕ (ಬಿಜೆಪಿ) ದಾವಣಗೆರೆಯಲ್ಲಿ ವಿನಯ್‌ಕುಮಾರ್ (ಕಾಂಗ್ರೆಸ್‌) ಬಂಡಾಯ ಅಭ್ಯರ್ಥಿಗಳಾಗಿ, ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ನಾಮಪತ್ರ ವಾಪಸ್‌ಗೆ ಸೋಮವಾರದ ವರೆಗೆ ಸಮಯವಿದೆ. ಬಂಡಾಯ ಅಭ್ಯರ್ಥಿಗಳನ್ನು ಮನವೊಲಿಸುವ ಕೆಲಸಕ್ಕೆ ಆಯಾ ಪಕ್ಷದ ನಾಯಕರು ಮುಂದಾಗಿದ್ದಾರೆ. ಒಂದು ವೇಳೆ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಿಂದೆ ಸರಿದಿರೆ, ಕಣ ಚಿತ್ರಣ ಬದಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT