ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಸೂಪ್‌ಗಳು

Last Updated 25 ಜುಲೈ 2018, 19:30 IST
ಅಕ್ಷರ ಗಾತ್ರ

ಮೆಂತ್ಯೆಸೊಪ್ಪಿನ ಸೂಪ್‌

ಬೇಕಾಗುವ ವಸ್ತುಗಳು: 2 ಚಮಚ ಎಣ್ಣೆ, 1 ಈರುಳ್ಳಿ, 4 ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ, 1 ಸಣ್ಣ ಕಟ್ಟು ಮೆಂತಸೊಪ್ಪು, ¼ ಚಮಚ ಕಾಳುಮೆಣಸು ಪುಡಿ, 2 ಚಮಚ ಮೆಣಸು.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಈರುಳ್ಳಿ, ಬೆಳ್ಳುಳ್ಳಿ ಚೂರು, ಶುಂಠಿ ಚೂರು ಹಾಕಿ ಹುರಿಯಿರಿ. ನಂತರ ಚೆನ್ನಾಗಿ ತೊಳೆದು, ಬೇಯಿಸಿದ ಮೆಂತ್ಯೆಸೊಪ್ಪು, ಹುರಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಚೂರು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ. ಬೇಕಾದಷ್ಟು ನೀರು, ಉಪ್ಪು, ಕಾಳುಮೆಣಸು ಪುಡಿ ಸೇರಿಸಿ ಕುದಿಸಿ. ನಂತರ ಕೆಳಗಿಳಿಸಿ, ನಿಂಬೆರಸ ಸೇರಿಸಿ ಬೌಲ್‌ಗೆ ಹಾಕಿ ಕುಡಿಯಿರಿ. ಮಳೆಗಾಲದಲ್ಲಿ ಕಾಡುವ ಅಸ್ತಮಾ, ಉಬ್ಬಸಕ್ಕೆ ಈ ಸೂಪ್ ಬಹಳ ಒಳ್ಳೆಯದು.

ಬೆಟ್ಟದ ನೆಲ್ಲಿಕಾಯಿ ಸೂಪ್‌

ಬೇಕಾಗುವ ವಸ್ತುಗಳು: 2 ಚಮಚ ತುಪ್ಪ, ½ ಚಮಚ ಸಾಸಿವೆ, ½ ಚಮಚ ಜೀರಿಗೆ ಚಿಟಿಕಿ ಇಂಗು, 1 ಎಸಳು ಕರಿಬೇವಿನೆಲೆ, 4-5 ತುರಿದ ನೆಲ್ಲಿಕಾಯಿ, 2 ಚಮಚ ತೆಂಗಿನತುರಿ, 1 ಚಮಚ ಬೆಲ್ಲ, ಸಣ್ಣ ತುಂಡು ಶುಂಠಿ, 2 ಎಸಳು ಬೆಳ್ಳುಳ್ಳಿ, ¼ ಇಂಚು ಉದ್ದದ ಚಕ್ಕೆ, 1-2 ಲವಂಗ, 1 ಒಣಮೆಣಸು, ¼ ಚಮಚ ಅರಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ. ಸ್ವಲ್ಪ ಹುರಿದು ತುರಿದ ನೆಲ್ಲಿಕಾಯಿ ಹಾಕಿ. ನಂತರ ನೀರು, ತೆಂಗಿನತುರಿ, ಬೆಲ್ಲ ಶುಂಠಿ, ಬೆಳ್ಳುಳ್ಳಿ ಚೂರು ಹಾಕಿ. ನಂತರ ಲವಂಗ, ಒಣಮೆಣಸು, ಅರಿಸಿನ ಹಾಕಿ. ಮಿಶ್ರಣ ಕುದಿದು ನೆಲ್ಲಿಕಾಯಿ ಬೆಂದ ಮೇಲೆ ಒಲೆಯಿಂದ ಕೆಳಗಿಳಿಸಿ. ನಂತರ ಬೌಲ್‌ಗೆ ಹಾಕಿ ಕುಡಿಯಿರಿ.

***

ಸ್ವೀಟ್ ಕಾರ್ನ್ ಸೂಪ್‌

ಬೇಕಾಗುವ ವಸ್ತುಗಳು: 1 ಕಪ್ ಸಿಹಿ ಜೋಳ, 2 ಚಮಚ ಎಣ್ಣೆ, 3-4 ಎಸಳು ಬೆಳ್ಳುಳ್ಳಿ, ¼ ಇಂಚು ಉದ್ದದ ಶುಂಠಿ, 1 ಹಸಿಮೆಣಸು, 1 ಚಮಚ ಕಾರ್ನ್ ಫ್ಲೋರ್, ಕಾಳುಮೆಣಸು ಪುಡಿ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸಿಹಿ ಜೋಳ, ಸ್ವಲ್ಪ ನೀರು, ಉಪ್ಪು ಹಾಕಿ ಬೇಯಿಸಿ. ನಂತರ ತರಿ ತರಿಯಾಗಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಚೂರು, ಹಸಿಮೆಣಸು, ರುಬ್ಬಿದ ಕಾರ್ನ್ ಹಾಕಿ ಹುರಿಯಿರಿ. ನಂತರ ಸಿಹಿ ಜೋಳ ಬೇಯಿಸಿದ ನೀರು, ಸ್ವಲ್ಪ ಉಪ್ಪು ನೀರಲ್ಲಿ ಕಲಸಿದ ಕಾರ್ನ್ ಫ್ಲೋರ್ ಹಾಕಿ ಕುದಿಸಿ.

ಬಳಿಕ ಬೇಯಿಸಿ ರುಬ್ಬಿದ ಸಿಹಿ ಜೋಳ, ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ಕರಿಮೆಣಸು ಪುಡಿ ಹಾಕಿ ಬೆರೆಸಿ. ಕೊನೆಯಲ್ಲಿ ಕೆಳಗಿಳಿಸಿ. ಬೌಲ್‌ಗೆ ಹಾಕಿ ಕುಡಿಯಿರಿ.

***

ಕ್ಯಾರೆಟ್ – ಈರುಳ್ಳಿ ಸೂಪ್‌

ಬೇಕಾಗುವ ವಸ್ತುಗಳು: 2 ಕ್ಯಾರೆಟ್, 1 ಟೊಮೆಟೊ, 2 ಈರುಳ್ಳಿ, 1 ಚಮಚ ತುಪ್ಪ, ¼ ಚಮಚ ಅರಿಸಿನ ಪುಡಿ, ¼ ಚಮಚ ಕಾಳುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕ್ಯಾರೆಟ್, ಟೊಮೆಟೊ, ಈರುಳ್ಳಿ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ 2 ಕಪ್ ನೀರು ಹಾಕಿ ಅರಸಿನ ಪುಡಿ, ಕಾಳುಮೆಣಸು ಪುಡಿ, ಉಪ್ಪು ಹಾಕಿ ಕುದಿಸಿ. ನಂತರ ಗ್ಲಾಸಿಗೆ ಹಾಕಿ
ಕುಡಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT