ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೂ ರುಚಿಗೂ ಸೂಪ್ ಸೂಪ್‌...

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೀಟ್‌ರೂಟ್ ಸೂಪ್
ಬೇಕಾಗುವ ಸಾಮಾಗ್ರಿಗಳು:
ಬೀಟ್‌ರೂಟ್‌ ಬೇಯಿಸಿದ್ದು – 1/4 ಕಪ್‌, ಕ್ಯಾರೆಟ್ ಬೇಯಿಸಿದ್ದು – 1/4 ಕಪ್‌, ಆಲೂಗಡ್ಡೆ ಸಣ್ಣದು – 1, ಟೊಮೆಟೊ ಚೂರು – 1 ಚಮಚ, ಕರಿಮೆಣಸು ಪುಡಿ – 1/2 ಚಮಚ, ಖಾರದ ಪುಡಿ – 1/4 ಚಮಚ, ಧನಿಯಾಪುಡಿ – 1/2 ಚಮಚ, ಜೋಳದ ಪುಡಿ – 1 ಚಮಚ, ಕೊತ್ತುಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಸಕ್ಕರೆ – 1/2 ಚಮಚ.

ತಯಾರಿಸುವ ವಿಧಾನ: ಬೇಯಿಸಿದ ಬೀಟ್‌ರೂಟ್, ಕ್ಯಾರೆಟ್, ಆಲೂ (ಬೇಯಿಸಿದ್ದು) ಮಿಕ್ಸಿಗೆ ಹಾಕಿ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಮಿಶ್ರಣ, ಟೊಮೆಟೊ ಚೂರು, ಕರಿಮೆಣಸು ಪುಡಿ, ಖಾರದ ಪುಡಿ, ಧನಿಯಾಪುಡಿ, ನೀರಲ್ಲಿ ಕರಗಿಸಿದ ಜೋಳದ ಹಿಟ್ಟನ್ನು ಹಾಕಿ ಕುದಿಸಿ. ನಂತರ ಕೆಳಗಿಳಿಸಿ. ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ರಕ್ತಹೀನತೆಯಿಂದ ಬಳಲುವವರಿಗೆ ಇದರ ಸೇವನೆ ಒಳ್ಳೆಯದು.

*


ಬಸಳೆಸೊಪ್ಪಿನ ಸೂಪ್
ಬೇಕಾಗುವ ಸಾಮಾಗ್ರಿಗಳು:
ಬೆಣ್ಣೆ –1 ಚಮಚ, ತೊಳೆದ ಬಸಳೆಸೊಪ್ಪು – 8ರಿಂದ 9, ಟೊಮೆಟೊ ಚೂರು – 1/4ಕಪ್‌, ಕ್ಯಾರೆಟ್ ಚೂರು – 1/4 ಕಪ್‌, ಸೌತೆ ತುಂಡು – 3/4 ಚಮಚ, ಪುದೀನ –3ರಿಂದ 4 ಎಲೆ, ಕೆಂಪು ಕಲ್ಲುಸಕ್ಕರೆ – 1 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆಯನ್ನು ಹಾಕಿ. ಬಿಸಿಯಾದಾಗ ಜೀರಿಗೆ, ಬಸಳೆಸೊಪ್ಪನ್ನು ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಟೊಮೆಟೊ, ಕ್ಯಾರೆಟ್ ಚೂರು, ಸೌತೆ ತುಂಡು, ಪುದೀನ, ತುಳಸಿ, ಹುರಿದ ಬಸಳೆ ಮಿಶ್ರಣ – ಇವನ್ನು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ಕೆಂಪು ಕಲ್ಲುಸಕ್ಕರೆ, ಉಪ್ಪು ಸೇರಿಸಿ ಪಾತ್ರೆಗೆ ಹಾಕಿ ಕುದಿಸಿ ಕೆಳಗಿಳಿಸಿ. ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರಿಗೆ ಇದು ಒಳ್ಳೆಯದು.

*


ಸೇಬುಸಿಪ್ಪೆಯ ಸೂಪ್
ಬೇಕಾಗುವ ಸಾಮಾಗ್ರಿಗಳು:
ಸೇಬುಹಣ್ಣಿನ ಸಿಪ್ಪೆ – 1/2 ಕಪ್, ಬೆಣ್ಣೆ – 1 ಚಮಚ, ಈರುಳ್ಳಿ ಚೂರು – 1/4 ಕಪ್‌, ಬೆಳ್ಳುಳ್ಳಿಚೂರು – 2 ಚಮಚ, ಶುಂಠಿತುರಿ – 2 ಚಮಚ, ಕ್ಯಾರೇಟ್‌ತುರಿ – 1/4 ಕಪ್, ಕಾಳುಮೆಣಸು ಪುಡಿ – 1/4 ಚಮಚ, ಸಕ್ಕರೆ – 1 ಚಮಚ, ನಿಂಬೆರಸ – 1 ಚಮಚ, ಹಾಲಿನ ಕೆನೆ – 2 ಚಮಚ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಸೇಬುಹಣ್ಣಿನ ದಪ್ಪ ಸಿಪ್ಪೆಯನ್ನು ತೆಗೆದು, ಸಣ್ಣಗೆ ತುಂಡು ಮಾಡಿ ಬೆಣ್ಣೆಯನ್ನು ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿಚೂರು, ಶುಂಠಿತುರಿ, ಕ್ಯಾರೇಟ್‌ತುರಿಗಳನ್ನು ಸೇರಿಸಿ ಪುನಃ ಹುರಿದು, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ನಂತರ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿ. ಅದಕ್ಕೆ ಉಪ್ಪು, ಕಾಳುಮೆಣಸು ಪುಡಿ ಬೆರೆಸಿ. ಆರಿದ ನಂತರ ಸಕ್ಕರೆ ನಿಂಬೆರಸ ಬೆರೆಸಿ. ಬಡಿಸುವಾಗ ತಾಜಾ ಹಾಲಿನ ಕೆನೆ ಸೇರಿಸಿ ಸವಿಯಿರಿ. ಇದನ್ನು ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗುವುದು.

*


ತರಕಾರಿ-ಹರಿವೆಸೊಪ್ಪಿನ ಸೂಪ್
ಬೇಕಾಗುವ ಸಾಮಗ್ರಿಗಳು:
ಹರಿವೆಸೊಪ್ಪು – 1 ಕಪ್‌, ಟೊಮೆಟೊ –1, ಕ್ಯಾರೇಟ್ ತುಂಡು, ಕಲ್ಲಂಗಡಿಹಣ್ಣು – ಸ್ವಲ್ಪ. ಲವಂಗ –1, ಕಾಳುಮೆಣಸು – 3, ಬೆಲ್ಲ – 1 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಹರಿವೆಸೊಪ್ಪನ್ನು ತೊಳೆದು ಸ್ವಲ್ಪ ನೀರು ಹಾಕಿ ಬೇಯಿಸಿ. ಕ್ಯಾರೇಟ್ ತೊಳೆದು ಕತ್ತರಿಸಿ ಬೇಯಿಸಿ. ಟೊಮೆಟೊವನ್ನು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಬೇಯಿಸಿ ಸಿಪ್ಪೆ ತೆಗೆಯಿರಿ. ಬೆಂದ ಸೊಪ್ಪು, ಬೆಂದ ತರಕಾರಿ, ಕಲ್ಲಂಗಡಿ ಹಣ್ಣಿನ ರಸ, ಸ್ವಲ್ಪ ನೀರನ್ನು ಸೇರಿಸಿ ಒಲೆಯ ಮೇಲಿಟ್ಟು ಕರಿಮೆಣಸು ಪುಡಿ, ಬೆಲ್ಲ, ಲವಂಗ, ಉಪ್ಪು – ಇಷ್ಟನ್ನು ಸೇರಿಸಿ ಕುದಿಸಿ. ಈ ಸೂಪನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT