ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸುಲ್‌: ವಾರದಲ್ಲಿ 232 ಜನರ ಹತ್ಯೆ

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜಿನೀವಾ(ಎಎಫ್‌ಪಿ): ಇರಾಕ್‌ನ ಮೋಸುಲ್‌ ನಗರದ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಐಎಸ್‌ ಉಗ್ರರ ನರಮೇಧ ಕಡಿಮೆಯಾಗುತ್ತಿಲ್ಲ. ಈ ಒಂದು ವಾರದಲ್ಲಿ 232 ಜನರನ್ನು ಐಎಸ್‌ ಉಗ್ರರು ಸಾಯಿಸಿದ್ದಾರೆ.

‘ಉಗ್ರರು ಕಳೆದ ಬುಧವಾರ 232 ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಇವರಲ್ಲಿ 190 ಮಂದಿ ಇರಾಕ್‌ ಭದ್ರತಾ ಪಡೆಯ ಮಾಜಿ ಅಧಿಕಾರಿಗಳು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ   ತಿಳಿಸಿದೆ. ‘ಇತ್ತೀಚಿನ ದಿನಗಳಲ್ಲಿ ಹತ್ಯೆಯಾದ ಜನರ ಸಂಖ್ಯೆ ಹೆಚ್ಚಿದೆ’ ಎಂದು ವಕ್ತಾರೆ ರವೀನಾ ಶಾಮ್‌ದಸಾನಿ ಹೇಳಿದ್ದಾರೆ.

‘ಐಎಸ್‌ ಉಗ್ರರು ನಾಗರಿಕರ ಶಿರಚ್ಛೇದ ಮಾಡುತ್ತಿದ್ದಾರೆ. ಉಗ್ರರ ಹೋರಾಟದ ಕೊನೆಯ ನೆಲವಾಗಿ ಉಳಿದಿರುವ ಇರಾಕ್‌ನ ಉತ್ತರ ನಗರ ಮೋಸುಲ್‌ನಿಂದ ಜನರನ್ನು ಒತ್ತಾಯಪೂರ್ವಕವಾಗಿ ಸ್ಥಳಾಂತರ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇರಾಕ್‌ ಪಡೆ ವಶಕ್ಕೆ  40 ಗ್ರಾಮಗಳು
ಬಾಗ್ದಾದ್ (ಎಪಿ): ಮೋಸುಲ್ ಸಮೀಪ ಐಎಸ್‌ ಉಗ್ರರ ವಶದಲ್ಲಿದ್ದ 40 ಗ್ರಾಮಗಳನ್ನು ಇರಾಕ್‌ ಪಡೆಗಳು ವಾಪಸ್‌ ಪಡೆದಿವೆ ಎಂದು ಅಮೆರಿಕ ವಾಯುಪಡೆಯ ಬ್ರಿಗೇಡಿಯರ್‌ ಜನರಲ್ ಮ್ಯಾಥ್ಯೂ ಸಿ. ಐಸ್ಲೆರ್‌ ಹೇಳಿದ್ದಾರೆ. ಯೋಧರು ಮೋಸುಲ್‌ನ ಪೂರ್ವ ಮತ್ತು ಪಶ್ಚಿಮದ  ಕೆಲವು ಗ್ರಾಮಗಳನ್ನು ವಶಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT