ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡದಲ್ಲೇ ಎರೆಗೊಬ್ಬರ

ಎಣಿಕೆ ಗಳಿಕೆ–28
Last Updated 14 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೇಕಾಗುವ ಸಾಮಗ್ರಿಗಳು

* ಕಬ್ಬಿಣದ ಶೆಲ್ಫ್‌ 
* 10 ಮಣ್ಣಿನ ಕುಂಡ 
* 2 ಪ್ಲಾಸ್ಟಿಕ್ ತಟ್ಟೆ 
* 2 ಪ್ಲಾಸ್ಟಿಕ್ ಲೋಟ
* ಒಂದು ಅಡಿ ಚೌಕಾಕಾರದ 10 ಕಾರ್ಡ್‌ಬೋರ್ಡ್ ಶೀಟ್‌
 
**
*ಕುಂಡದಲ್ಲಿ ಮೊದಲು ಮುಕ್ಕಾಲು ಭಾಗ ಸೆಗಣಿ ತುಂಬಬೇಕು. ಅದರ ಮೇಲುಗಡೆ ಕಡ್ಡಿತೆಗೆದ ತೆಂಗಿನ ಗರಿಯ ಸಣ್ಣ ಸಣ್ಣ ತುಂಡು, ಅಡಿಕೆ ಹಾಳೆ ಗರಿಯ ತುಂಡು, ಗೊಬ್ಬರ, ಸೊಪ್ಪಿನ ಎಲೆಗಳು (ಗ್ಲಿರಿಸಿಡಿಯ), ಒಣಗಿರುವ ಪುಡಿಹುಲ್ಲು, ಇತರೆ ಒಣಗಿದ ಎಲೆಗಳನ್ನು ಹಾಕಿ.
 
**
* ಅದರ ಮೇಲೆ ಸುಮಾರು 30–40 ಎರೆಹುಳು ಹಾಕಬೇಕು. ಎರೆಹುಳುಗಳಿಗೆ ತೇವಾಂಶ ಅವಶ್ಯಕತೆ ಇರುವುದರಿಂದ 6–7 ದಿನಕ್ಕೊಮ್ಮೆ ಸ್ವಲ್ಪ ಪ್ರಮಾಣದ ನೀರು ಚಿಮುಕಿಸಬೇಕು. ಕಾರ್ಡ್‌ಬೋರ್ಡ್ ಶೀಟ್‌ಗಳ ನಡುವೆ ರಂಧ್ರ ಮಾಡಿ ಕುಂಡದ ಮೇಲುಗಡೆ ಇಡಬೇಕು
 
**
* ಶೀಟ್‌ ಇಡುವುದರಿಂದ ಒಳಗಡೆ ಗಾಳಿಯಾಡಲು ಅವಕಾಶ ಸಿಗುತ್ತದೆ ಜೊತೆಗೆ ಒಳಗೆ ಇರುವ ಎರೆಹುಳಗಳಿಗೆ ಬೇಕಾಗುವ ಹದ ಉಷ್ಣಾಂಶ ದೊರಕುತ್ತದೆ. ಹಲ್ಲಿ, ಇಲಿ, ಹಾವು ಇತರೆ ಎರೆಹುಳಗಳನ್ನು ತಿನ್ನುವ ಸಣ್ಣ ಪ್ರಾಣಿಗಳಿಗೆ ಒಳಗೆ ಹೋಗಲು ಅವಕಾಶವೂ ಇರುವುದಿಲ್ಲ
 
**
* ಶೆಲ್ಫ್‌ನ ಕಾಲುಗಳನ್ನು ಪ್ಲಾಸ್ಟಿಕ್ ಕಪ್‌ಗಳಲ್ಲಿ ಇಡಬೇಕು. ಈ ಕಪ್‌ಗಳನ್ನು ಬೌಲ್‌ಗಳಲ್ಲಿ ಇಟ್ಟು ಕಪ್‌ನ ಹೊರಭಾಗದಲ್ಲಿ ನೀರು ತುಂಬಿಸಬೇಕು. ಇದರಿಂದ ಇರುವೆ ಮತ್ತು ಹುಳಹುಪ್ಪಟಗಳು ಕುಂಡದ ಒಳಗೆ ಹೋಗಿ ಎರೆಹುಳಗಳನ್ನು ತಿನ್ನಲು ಆಗುವುದಿಲ್ಲ.
–ಗ್ರಾಫಿಕ್ಸ್: ಶ್ರೀಕಂಠ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT