ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವಾಂಶ ಕೊರತೆ: ಒಣಗಿದ ಜೋಳ

ಸಾಲ ಮಾಡಿ ಬಿತ್ತನೆ: ಮಳೆರಾಯನ ಅವಕೃಪೆಯಿಂದ ರೈತನಿಗೆ ತಪ್ಪದ ಸಂಕಷ್ಟ
Last Updated 10 ಜನವರಿ 2017, 7:01 IST
ಅಕ್ಷರ ಗಾತ್ರ
ಹೊರ್ತಿ: ಸತತ ಹಾಗೂ ಪ್ರತಿವರ್ಷ ಬರದ ಬರೆಗೆ ಕಂಗಾಲಾದ ರೈತರಲ್ಲಿ  ಈ ಸಲವೂ ಬೆಳೆ ಕೈಕೊಡುವ ಆತಂಕ ಮೂಡಿದೆ.  
 
ಸಾಲ ಮಾಡಿಯಾದರೂ ಸರಿ ಬಿತ್ತನೆ ಮಾಡಿದ್ದಾರೆ. ಆದರೆ,  ಈಗ ತೇವಾಂಶದ ಕೊರತೆಯಿಂದಾಗಿ ಹಿಂಗಾರಿನಲ್ಲಿ ಬಿತ್ತಿದ ಜೋಳ ಒಣಗುತ್ತಿದ್ದು, ರೈತರಲ್ಲಿ ಆತಂಕ  ಮನೆ ಮಾಡಿದೆ.
 
ಹಿಂಗಾರು ಮಳೆ ಸಮರ್ಪಕವಾಗಿ ಈ ವರ್ಷ ಬಿತ್ತಿದ ಜೋಳದ ಫಸಲು ಮೊಣಕಾಲು ವರೆಗೆ ಬಂದು ತೆನೆ ತೆಗೆಯುವ ಮುನ್ನ ಹೂ ಒಣಗಿ ಹೋಗಿದೆ ಎನ್ನುತ್ತಾರೆ ಕನಕನಾಳ ಗ್ರಾಮದ ಪ್ರಗತಿಪರ ರೈತ ಸುರೇಶ ಬೆನಕನಳ್ಳಿ. 
 
‘ಹಿಂಗಾರು ಮಳೆ ಸಮರ್ಪಕ ಆಗದೇ ತೇವಾಂಶ ಕೊರತೆ, ಬೋರವೆಲ್‌ಗಳಲ್ಲಿ ನೀರಿನ ಕೊರತೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಅಲ್ಲದೇ, ಸಾಲ ಸೂಲ ಮಾಡಿ ಬಿತ್ತಿದ ಕಡಲೆ, ಗೋವಿನಜೋಳ, ಗೋದಿ,  ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯೂ ರೈತರನ್ನೂ ಕಾಡುತ್ತಿದೆ’ ಎಂದು ಹೇಳಿದರು. 
 
ಒತ್ತಾಯ:   ಕೂಡಲೇ  ಈ ಭಾಗಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಶೀಘ್ರವೇ ಭೇಟಿ ನೀಡಿ, ಬೇಳೆ ಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಬೇಕು, ಹಾನಿಗೋಳ ಗಾದ ರೈತರಿಗೆ  ಪರಿಹಾರ ನೀಡಬೇಕು ಎಂದು ಪ್ರಗತಿಪರ ರೈತರಾದ  ಸುರೇಶ  ಬೆನಕನಳ್ಳಿ, ಭೀಮಸೆಪ್ಪ ಮಾನೆ, ಮಲಕಾರಿ ನರಳೆ ಗಂಗಣ್ಣ  ಬಿರಾದಾರ, ಹಾಗೂ ಅರ್ಜುನ ಮೋರೆ ಇನ್ನಿತರರು ಒತ್ತಾಯಿಸಿದ್ದಾರೆ.
 
‘ಸತತ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ  ರೈತನ ಜಮೀನಿಗೆ ಸಾಕಾಗುವಷ್ಟು ನೀರು,  ವಿದ್ಯುತ್ ಪೂರೈಸದಿದ್ದರೇ ರೈತರ ಬದುಕು ದುಸ್ತರವಾಗುತ್ತದೆ. ಈ ಕೂಡಲೇ ಸರ್ಕಾರ ರೈತರಿಗೆ ಸಮರ್ಪಕವಾಗಿ ನೀರು ಹಾಗೂ ವಿದ್ಯುತ್ ನೀಡಿದರೆ ಬರಡು ಭೂಮಿಯಲ್ಲಿ ಬಂಗಾರ ಬೆಳೆ ಬೆಳೆದು ತೋರಿಸುತ್ತೇವೆ ಎನ್ನುತ್ತಾರೆ ಕನಕನಾಳ ಪ್ರಗತಿಪರ ರೈತ ಸುರೇಶ ಎಸ್.ಬೆನಕನಳ್ಳಿ. 
 
**
ನಿರಂತರ ಹಾಗೂ ಗುಣಮಟ್ಟದ ವಿದ್ಯುತ್, ನೀರಿನ ಸೌಲಭ್ಯ ಒದಗಿಸಿದರೆ ಈ ಬರಡು ಭೂಮಿಯಲ್ಲಿಯೂ ಬಂಗಾರದಂತಹ ಬೆಳೆ ಬೆಳೆಯುತ್ತೇವೆ
-ಸುರೇಶ ಎಸ್.ಬೆನಕನಳ್ಳಿ
ರೈತ, ಕನಕನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT