ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಚಟುವಟಿಕೆಯ ಮಾಹಿತಿ ಒದಗಿಸಿ: ಸಲಹೆ

Last Updated 16 ಜನವರಿ 2017, 5:46 IST
ಅಕ್ಷರ ಗಾತ್ರ

ಸಿದ್ದಾಪುರ: ಸಾರ್ವಜನಿಕರು ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದಲ್ಲಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಸುದರ್ಶನ್ ಹೇಳಿದರು. ಅಮಾಸೆಬೈಲು ಠಾಣೆಯಲ್ಲಿ ಈಚೆಗೆ ನಡೆದ ತೆರೆದ ಮನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು ಅವುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಪ್ರೋತ್ಸಾ ಹ ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸಿದರೆ ಅತಿ ಯಾಗುತ್ತಿರುವ ಅಪರಾಧ ಚಟುವಟಿ ಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಪೊಲೀಸರನ್ನು ಕಂಡು ಭಯಗೊಳ್ಳದೆ ಕಾನೂನು ವಿರೋಧಿ ಕೃತ್ಯಗಳ ಕುರಿತು ಸೂಕ್ತ ಮಾಹಿತಿ ನೀಡಬೇಕು ಎಂದರು.

8 ವರ್ಷದೊಳಗಿನ ಮಕ್ಕಳಿಗೆ ದೌರ್ಜನ್ಯವೆಸಗಿದರೆ ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುತ್ತೇವೆ. ವೈಜ್ಞಾನಿಕವಾಗಿ ಬೆಳೆಯು ತ್ತಿದ್ದಂತೆ ತಂತ್ರಜ್ಞಾನಗಳು ಸುಲಭವಾಗಿ ಕೈಗೆಟಕುವುದರಿಂದ ಹಿಂಸಾತ್ಮಕ ಕೃತ್ಯಗಳು ವಿಪರೀತವಾಗುತ್ತಿವೆ. ಮನೆಯಲ್ಲಿ ಉತ್ತಮ ಸಂಸ್ಕಾರ ಹಾಗೂ ಗುಣಾತ್ಮಕ ಶಿಕ್ಷಣ ದೊರೆತರೆ ಅವುಗಳ ನಿಯಂತ್ರಣ ಸಾಧ್ಯ ಎಂದರು.

ಉದ್ಯಮಿ ಜಯರಾಮ ಶೆಟ್ಟಿ ತೊಂಬತ್ತು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಿಕಾ ಶೆಟ್ಟಿ ಆರ್ಡಿ, ಶಂಕರ್, ಹಜ್ಮಲ್, ಸುಕನ್ಯ, ತಾಲೂಕು ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ,  ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT