ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಅಕೌಂಟ್‌ಗೆ ಎರಡು ಹಂತದ ಸುರಕ್ಷತೆ

Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಕುತಂತ್ರಿಗಳು ಹೆಚ್ಚಾಗಿರುವ ಈ ಕಾಲದಲ್ಲಿ ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತವಾಗಿದ್ದರೂ ಅದು ಕಡಿಮೆಯೇ. ಪದೇ ಪದೇ ಇಮೇಲ್‌ಗೆ ಕನ್ನಹಾಕುವ ಕುತಂತ್ರಿಗಳಿಂದ ಪಾರಾಗುವುದು ಹಲವರಿಗೆ ದೊಡ್ಡ ತಲೆನೋವು. ಆದರೂ ಅಕೌಂಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕಾದ್ದು ಇಂದು ಅತ್ಯಗತ್ಯ.

ಎಷ್ಟು ಸುರಕ್ಷಿತವಾದ ಪಾಸ್‌ವರ್ಡ್‌ ಕೊಟ್ಟರೂ ಹ್ಯಾಕರ್‌ಗಳು ತುಂಬಾ ಚಾಲಾಕಿಗಳಾಗಿರುತ್ತಾರೆ. ಈ ಚಾಲಾಕಿಗಳಿಗೆ ಕನ್ನಹಾಕಲು ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ಗೂಗಲ್‌ ಅಕೌಂಟ್‌ನಲ್ಲಿ ಸೈನ್‌ಇನ್‌ಗಾಗಿ ಎರಡು ಹಂತದ ಸುರಕ್ಷತಾ ವಿಧಾನವಿದೆ. (2 Step Verification) ನಿಮ್ಮ ಗೂಗಲ್‌ ಅಕೌಂಟ್‌ ಸುರಕ್ಷಿತವಾಗಿರಿಸಿಕೊಳ್ಳಲು ಈ ಎರಡು ಹಂತದ ಸುರಕ್ಷಾ ವಿಧಾನವನ್ನು ನೀವೂ ಅಳವಡಿಸಿಕೊಳ್ಳಬಹುದು.

ನಿಮ್ಮ ಬ್ರೌಸರ್‌ನಲ್ಲಿ google.com/landing/2step/ ಲಿಂಕ್‌ ಕ್ಲಿಕ್ಕಿಸಿ. ಪುಟ ತೆರೆದ ನಂತರ Get Started ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಜಿಮೇಲ್‌ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಟೈಪ್‌ ಮಾಡಿ ಸೈನ್‌ಇನ್‌ ಆಗಿ. ಈಗ ತೆರೆದುಕೊಳ್ಳುವ ಪುಟದಲ್ಲಿ ಮತ್ತೆ Get Started ಮೇಲೆ ಕ್ಲಿಕ್ಕಿಸಿ. ಮತ್ತೊಮ್ಮೆ ಪಾಸ್‌ವರ್ಡ್‌ ಟೈಪಿಸಿ ಎಂಟರ್‌ ಒತ್ತಿ.

Let's set up your phone ಪುಟದಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಇಲ್ಲಿ ನಿಮಗೆ ಸಂದೇಶದ ಮೂಲಕ ಅಥವಾ ಕರೆಯ ಮೂಲಕ ವೆರಿಫಿಕೇಷನ್‌ ಕೋಡ್‌ ಸ್ವೀಕರಿಸುವ ವ್ಯವಸ್ಥೆ ಇದೆ. ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ TRY IT ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಮೊಬೈಲ್‌ಗೆ ಸಂದೇಶ ಅಥವಾ ಕರೆಯ ಮೂಲಕ ಕೋಡ್‌ ಬರುತ್ತದೆ.

ಮೊಬೈಲ್‌ಗೆ ಬಂದ ಆರು ಅಂಕಿಗಳ ಕೋಡ್‌ ಅನ್ನು ನಮೂದಿಸಿ NEXT ಮೇಲೆ ಕ್ಲಿಕ್‌ ಮಾಡಿ. ನಂತರ ಬರುವ ಪುಟದಲ್ಲಿ ಕಾಣಿಸುವ TURN ON ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಗೂಗಲ್‌ ಅಕೌಂಟ್‌ ಎರಡು ಹಂತದ ಸುರಕ್ಷತೆಗೆ ಹೊಂದಿಕೆಯಾಗಿರುತ್ತದೆ.

ಪ್ರತಿ ಬಾರಿ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗುವಾಗಲೂ ವೆರಿಫಿಕೇಷನ್‌ ಕೋಡ್ ನಮೂದಿಸಬೇಕಾಗುತ್ತದೆ. ನೀವು ನಿತ್ಯ ಬಳಸುವ ಡಿವೈಸ್‌ ಅಥವಾ ನಿಮ್ಮ ಪಿಸಿಗೆ ಈ ವೆರಿಫಿಕೇಷನ್‌ ಅಗತ್ಯವಿಲ್ಲ ಎನಿಸಿದರೆ ಸೈನ್‌ಇನ್‌ ವೇಳೆ ಪಾಸ್‌ವರ್ಡ್‌ ಬಾರ್‌ ಕೆಳಗಿನ  Don't ask again on this computer ಮೇಲೆ ಕ್ಲಿಕ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT