ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ಸಮುದಾಯ ಭವನ ಕಾಮಗಾರಿ ಪೂರ್ಣಕ್ಕೆ ಗಡುವು

₹2.19 ಕೋಟಿ ವಿದ್ಯಾರ್ಥಿ ವೇತನ ಬಾಕಿ ಬಿಡುಗಡೆಗೆ ಕ್ರಮ: ಸಚಿವ ಪರಮೇಶ್ವರ್‌
Last Updated 4 ಫೆಬ್ರುವರಿ 2017, 5:10 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ  ಮೂರು ವರ್ಷಗ ಳಿಂದ ಬಾಕಿ ಉಳಿಸಿಕೊಂಡಿರುವ ಸುಮಾರು ₹2.19 ಕೋಟಿ ವಿದ್ಯಾರ್ಥಿ ವೇತನವನ್ನು ತಕ್ಷಣ ಸರ್ಕಾರದಿಂದ ಬಿಡುಗಡೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
 
ನಗರ ಜಿಲ್ಲಾ ಪಂಚಾಯಿತಿ ಸಭಾಂಗ ಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತ ನಾಡಿದರು.
 
ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಕೈಗೆತ್ತಿಕೊಂಡಾಗ ಶಾಸಕ ಡಿ.ಎನ್‌.ಜೀವರಾಜ್‌, 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಅಧಿಕಾರಿಗಳು ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುವ ಸಬೂಬು ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಕಾಲ ದಲ್ಲಿ ವಿದ್ಯಾರ್ಥಿ ವೇತನ ನೀಡದಿದ್ದರೆ ಬಡ ಮತ್ತು ದಲಿತ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಭೆಗೆ ಸರಿಯಾದ ಮಾಹಿತಿ ನೀಡದೆ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಜೀವರಾಜ್‌ ಪ್ರಶ್ನೆಗೆ ಶಾಸಕರಾದ ಬಿ.ಬಿ.ನಿಂಗಯ್ಯ, ಸಿ.ಟಿ.ರವಿ ಕೂಡ ದನಿಗೂಡಿಸಿದರು.
 
‘ಇದೊಂದು ಗಂಭೀರ ವಿಷಯ. ನಾವೆಲ್ಲ ವಿದ್ಯಾರ್ಥಿ ವೇತನದಲ್ಲಿ ಓದಿದ ವರು. ನಿಮಗೆ ಆ ತೊಂದರೆ ಇರಲಿ ಲ್ಲವೆಂದು ಭಾವಿಸುತ್ತೇನೆ. ನಿಮ್ಮ ಕಾಳಜಿ ಸಂತೋಷ ಉಂಟು ಮಾಡುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಹಣ ಬಿಡುಗಡೆ ಮಾಡಿಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.
 
ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಬೇಕಿದ್ದ ಸಮುದಾಯ ಭವನ ಕಾಮಗಾರಿಯಲ್ಲೂ ಪ್ರಗತಿಯಾಗ ದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸಿದ ಸಚಿವರು, ಬಾಕಿ ಉಳಿಸಿಕೊಂಡಿ ರುವ 52 ಸಮುದಾಯ ಭವನಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿ ಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿ ಕಾರಿ ಮಂಜುನಾಥ್‌ಗೆ ಗಡುವು ನೀಡಿದರು.
 
ಬರಗಾಲದ ಹಿನ್ನೆಲೆಯಲ್ಲಿ ತೆಗೆದು ಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇ ಶಕಿ ಎಂ.ಸಿ.ಸೀತಾ ಅವರಿಂದ ಮಾಹಿತಿ ಕೇಳಿದ ಸಚಿವರು, ಜಿಲ್ಲೆಯಲ್ಲಿ ಶೇ 32ರಷ್ಟು ಮಳೆ ಕೊರತೆ ಉಂಟಾಗಿದ್ದರೂ ಶೇ 87.7ರಷ್ಟು ಬಿತ್ತನೆ ಹೇಗಾಯಿತು ಎಂದು ಪ್ರಶ್ನಿಸಿದರು.
 
ಸೆಪ್ಟೆಂಬರ್‌ ಹಾಗೂ ನವೆಂಬರ್‌ನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿ ಬೆಳೆ ಹಾನಿಯಾಗಿದೆ. ಆದರೆ, ಬಿತ್ತನೆ ಅವಧಿ ಯಲ್ಲಿ ಸ್ವಲ್ಪಮಟ್ಟಿಗೆ ಮಳೆ ಆಗಿತ್ತು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಉತ್ತ ರಿಸಿದರು. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಎಷ್ಟು ರೈತರು ನೋಂದಣಿ ಮಾಡಿಸಿದ್ದಾರೆ. ಆ ರೈತರಿಗೆ ಎಷ್ಟು ಪರಿಹಾರ ಬರಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ಜನಪ್ರತಿನಿಧಿ ಗಳು ಕೇಳಿದಾಗ ಕೃಷಿ ಮತ್ತು ತೋಟ ಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಮಂಜಸ ಉತ್ತರ ಸಿಗಲಿಲ್ಲ.
 
ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿ ಕಾರಿಗಳು ಕೊಳವೆ ಬಾವಿ ಫಲಾನುಭ ವಿಗಳ ಪಟ್ಟಿಯನ್ನು ತಿದ್ದಿದ್ದಾರೆಂದು ಆರೋಪಿಸಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಸಚಿವರ ಗಮನಕ್ಕೆ ತಂದಾಗ, ತಕ್ಷಣ ತನಿಖೆ ನಡೆಸಿ ಪಟ್ಟಿ ತಿದ್ದಿರುವ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.
 
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಶಾಸಕರ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿ ಕೈಬಿಟ್ಟು ತಮಗೆ ಬೇಕಾದವರಿಗೆ ಸೌಲಭ್ಯ ಕೊಡುತ್ತಿದ್ದಾರೆ. ಶಾಸಕರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುತ್ತಿದ್ದಾರೆ ಎಂದು ಶಾಸಕರು ಪಕ್ಷಭೇದ ಮರೆತು ದೂರು ಸಲ್ಲಿಸಿದರು. ರಾಜ್ಯಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
 
ಕುದುರೆಮುಖ ರಾಷ್ಟ್ರೀಯ ಉದ್ಯಾ ನದಲ್ಲಿರುವ ಕುಟುಂಬಗಳು ಸ್ವಯಂಪ್ರೇರಿ ತವಾಗಿ ಅರಣ್ಯದಿಂದ ಹೊರಬರಲು ಸಿದ್ಧವಾಗಿದ್ದರೂ ಅರಣ್ಯಾಧಿಕಾರಿಗಳು ಪುನರ್ವಸತಿ ಪ್ಯಾಕೇಜ್‌ ಒದಗಿಸುತ್ತಿಲ್ಲ. ಪುನರ್ವಸತಿ ಕಲ್ಪಿಸಬೇಕಾದ ಅಧಿಕಾ ರಿಗಳು ಆಸ್ತಿ ಮತ್ತು ಬೆಳೆಯ ಪುನರ್‌ ಸಮೀಕ್ಷೆ ಮಾಡುವುದಾಗಿ ಸಂತ್ರಸ್ತ ಕುಟುಂಬಗಳಿಗೆ ತೊಂದರೆ ನೀಡುತ್ತಿ ದ್ದಾರೆ ಎಂದು ಶಾಸಕ ಜೀವರಾಜ್‌ ಸಭೆ ಗಮನಕ್ಕೆ ತಂದರು. 
 
382 ಕುಟುಂಬಗಳು ಪರಿಹಾರ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಿವೆ. ಈಗಾಗಲೇ 91 ಕುಟುಂಬಗಳಿಗೆ ಪ್ಯಾಕೇಜ್‌ ನೀಡ ಲಾಗಿದೆ. 22 ಕುಟುಂಬಗಳಿಗೆ ₹42 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇಲಾಖೆಯ ಬೇರೆ ಶೀರ್ಷಿಕೆಯಲ್ಲಿ ಸುಮಾರು ₹180 ಕೋಟಿ ಉಳಿದಿದ್ದು, ವನ್ಯಜೀವಿ ವಿಭಾ ಗದ ರಾಜ್ಯ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ನೀಡಿದರೆ ಆ ಹಣವನ್ನು ವರ್ಗಾಯಿಸಿಕೊಂಡು ಸಂತ್ರಸ್ತ ರಿಗೆ ಪುನರ್‌ವಸತಿ ಕಲ್ಪಿಸಬಹುದು ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು.
 
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವ ಬಗ್ಗೆ ಮೆಸ್ಕಾಂ ಎಂಜಿ ನಿಯರ್‌ಗಳು ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡ ಸಚಿವರು ಬಾಕಿ ಉಳಿದಿರುವ 276 ಕೊಳವೆ ಬಾವಿಗಳಿಗೆ ಮಾರ್ಚ್‌ ಅಂತ್ಯದೊಳಗೆ ವಿದ್ಯುತ್‌ ಸಂಪರ್ಕ ನೀಡಿರಬೇಕು ಎಂದು ತಾಕೀತು ಮಾಡಿದರು.
 
ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಭಾಗದಲ್ಲಿ 2 ಜನರನ್ನು ಬಲಿ ತೆಗೆದು ಕೊಂಡಿರುವ ಒಂಟಿ ಸಲಗವನ್ನು ಫೆಬ್ರು ವರಿ ಅಂತ್ಯದೊಳಗೆ ಹಿಡಿದು ಅರಣ್ಯ ಸೇರಿಸುವಂತೆ ಗಡುವು ನೀಡಿದರು. ಶೃಂಗೇರಿ –ಕೆರೆಕಟ್ಟೆ ಹೆದ್ದಾರಿ ಅಭಿವೃದ್ಧಿ ಕೈಬಿಡುವಂತೆ ಸರ್ಕಾರ ತೆಗೆದುಕೊಂಡಿ ರುವ ತೀರ್ಮಾನ ಪುನರ್‌ ಪರಿಶೀಲಿಸಲು ಕೋರಿಕೆ ಸಲ್ಲಿಸುವಂತೆಯೂ ಜಿಲ್ಲಾಧಿ ಕಾರಿಗೆ ಸಚಿವರು ಸೂಚಿಸಿದರು.
 
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆರ್‌.ರಾಗಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇದ್ದರು.
 
**
ಗಂಗಾಕಲ್ಯಾಣ ಯೋಜನೆ ಅನುಷ್ಠಾನ ಕುಂಠಿತವಾಗಿರುವುದು ಬಹಳ ಗಂಭೀರ ವಿಚಾರ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
-ಡಾ.ಜಿ.ಪರಮೇಶ್ವರ್‌
ಜಿಲ್ಲಾ ಉಸ್ತುವಾರಿ ಸಚಿವ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT