ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿ ತಂಡದ ಬೈಕೊ 15ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಟಿ.ಪಿ. ಸೌರವ್ 56ನೇ ನಿಮಿಷದಲ್ಲಿ ಗೋಲು ತಂದುಕೊಟ್ಟರು. ಈ ವೇಳೆ ಯುನೈಟೆಡ್ ತಂಡದ ಖಾತೆಯಲ್ಲಿ ಒಂದೂ ಗೋಲು ಇರದಿದ್ದ ಕಾರಣ ಬಿಎಫ್ಸಿಗೆ ಗೆಲುವು ಖಚಿತವೆಂದೇ ಭಾವಿಸಲಾಗಿತ್ತು.