ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಯನ್‌ ಜಯಭೇರಿ

ಸೂಪರ್‌ ಡಿವಿಷನ್‌ ಫುಟ್‌ಬಾಲ್‌
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಎರಡನೇ ಅವಧಿಯಲ್ಲಿ ಮೂರು ಗೋಲುಗಳನ್ನು ಕಲೆ ಹಾಕಿದ ಸ್ಟೂಡೆಂಟ್‌ ಯೂನಿಯನ್ ತಂಡದವರು ಸೂಪರ್ ಡಿವಿಷನ್‌ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 3–2 ಗೋಲು ಗಳಿಂದ ಬಿಎಫ್‌ಸಿ ಎದುರು ಜಯ ಪಡೆದರು.
 
ಅಶೋಕ ನಗರದಲ್ಲಿರುವ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡದ ಬೈಕೊ 15ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಟಿ.ಪಿ. ಸೌರವ್‌ 56ನೇ ನಿಮಿಷದಲ್ಲಿ ಗೋಲು ತಂದುಕೊಟ್ಟರು. ಈ ವೇಳೆ ಯುನೈಟೆಡ್ ತಂಡದ ಖಾತೆಯಲ್ಲಿ ಒಂದೂ ಗೋಲು ಇರದಿದ್ದ ಕಾರಣ ಬಿಎಫ್‌ಸಿಗೆ ಗೆಲುವು ಖಚಿತವೆಂದೇ ಭಾವಿಸಲಾಗಿತ್ತು.
 
ಆದರೆ ಈ ಬಾರಿಯ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಯುನೈಟೆಡ್‌ ತಂಡಕ್ಕೆ ಎಮಾನುಯೆಲ್‌ 68 ಮತ್ತು 79ನೇ ನಿಮಿಷದಲ್ಲಿ ಗೋಲು ತಂದುಕೊಟ್ಟು ಸಮಬಲಕ್ಕೆ ಕಾರಣ ರಾದರು. 89ನೇ ನಿಮಿಷದಲ್ಲಿ ನವೀನ್‌ ಚೆಂಡನ್ನು ಗುರಿ ಸೇರಿಸಿ ಎದುರಾಳಿ ತಂಡದ ಜಯದ ಆಸೆ ನುಚ್ಚುನೂರು ಮಾಡಿದರು.
 
ಯುನೈಟೆಡ್‌ ಐದು ಪಂದ್ಯಗಳ ನ್ನಾಡಿದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಬಿಎಫ್‌ಸಿ ಕೂಡ ಇಷ್ಟೇ ಪಂದ್ಯಗಳನ್ನಾಡಿದ್ದು ಒಂದು ಪಂದ್ಯದಲ್ಲಿ  ಜಯ ಪಡೆದಿದೆ.
 
ಎಡಿಇಗೆ ಜಯ: ‘ಎ’ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಡಿಇ 2–1 ಗೋಲುಗಳಿಂದ ಪರಿಕ್ರಮ ಎದುರು ಗೆಲುವು ಸಾಧಿಸಿತು.
 
ವಿಜಯೀ ತಂಡದ ಶರತ್‌ (32ನೇ ನಿಮಿಷ) ಮತ್ತು ಕಪಿಲ್‌ (68ನೇ ನಿ.) ಜಯಕ್ಕೆ ಕಾರಣರಾದರು. ಮೂರು ಪಂದ್ಯಗಳಲ್ಲಿ ಗೆಲುವು ಪಡೆದು   ಹತ್ತು ಪಾಯಿಂಟ್ಸ್‌ ಹೊಂದಿ ರುವ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT