ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಡಿ ಸರಬರಾಜಿಗೆ ‘ರೋಬೋ’ ಪರಿಚಾರಕಿ

Last Updated 4 ಮಾರ್ಚ್ 2017, 12:17 IST
ಅಕ್ಷರ ಗಾತ್ರ
ADVERTISEMENT

ಇಸ್ಲಾಮಾಬಾದ್‌: ಪಾಕಿಸ್ತಾನದ ಉಪಹಾರ ಕೇಂದ್ರವೊಂದು ರೋಬೋಟ್‌ ‘ಪಾರಿಚಾರಿಕಿ’ಯರನ್ನು ಬಳಸಿ ಆಹಾರ ಸೇವೆ ಒದಗಿಸುತ್ತಿದೆ.

ಮುಲ್ತಾನ್‌ ನಗರದಲ್ಲಿನ ‘ಪಿಜ್ಜಾ.ಕಾಂ’ ಆಹಾರ ಸೇವೆ ಒದಗಿಸಲು ರೋಬೋಟ್‌ಗಳನ್ನು ಬಳಸುತ್ತಿರುವ ಸುದ್ದಿ ಸ್ಥಳೀಯ ಮಾಧ್ಯಮದ ಮೂಲಕ ಪ್ರಸಾರವಾಗುತ್ತಿದ್ದಂತೆ ಗ್ರಾಹಕರ ಸಂಖ್ಯೆ ದಿಢೀರ್‌ ಹೆಚ್ಚಳವಾಗಿದೆ.

25 ಕೆ.ಜಿ. ತೂಕದ ರೋಬೋಟ್‌ಗಳು 5 ಕೆ.ಜಿ.ಯಷ್ಟು ಆಹಾರ ಪದಾರ್ಥಗಳನ್ನು ಹೊತ್ತು ಸಾಗುತ್ತವೆ. ನಿಗದಿತ ಟೇಬಲ್‌ಗಳತ್ತ ಸಾಗಿ ಗ್ರಾಹಕರಿಗೆ ವಂದಿಸಿ ಉಪಾಹಾರ ನೀಡುತ್ತವೆ. ಸಾಗುವ ಮಧ್ಯೆ ಉಂಟಾಗುವ ಅಡಚಣೆಯನ್ನೂ ಇವು ನಿವಾರಿಸಿಕೊಂಡು ಸಾಗುತ್ತವೆ.

ಇಸ್ಲಾಮಾಬಾದ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಶಿಕ್ಷಣ ಪೂರೈಸಿರುವ ಉಪಹಾರ ಕೇಂದ್ರ ಮಾಲೀಕರ ಪುತ್ರ ಸೈಯದ್ ಒಸಾಮಾ ಅಜಿಜ್‌ ಈ ರೋಬೋಟ್‌ಗಳನ್ನು ಸಿದ್ಧಪಡಿಸಿದ್ದಾರೆ.

ಚೀನಾದಲ್ಲಿ ಈಗಾಗಲೇ ವಿವಿಧ ಸೇವೆಗಳಲ್ಲಿ ಬಳಕೆಯಲ್ಲಿರುವ ರೋಬೋ ತಂತ್ರಜ್ಞಾನದಿಂದ ಪ್ರೇರಣೆ ಪಡೆಯಲಾಗಿದೆ. ದೇಶೀಯವಾಗಿ ನಿರ್ಮಿಸಲಾಗಿರುವ ಈ ರೋಬೋಗಳಿಗೆ ಮಹಿಳೆಯ ದೇಹದ ಆಕಾರ ನೀಡಿದ್ದು, ಕುತ್ತಿಗೆಗೆ ಸ್ಕಾರ್ಫ್‌ ಹಾಕಲಾಗಿದೆ ಎಂದು ಅಜಿಜ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT