ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಕನ್ನಡ ನಿಘಂಟು

Last Updated 16 ಮಾರ್ಚ್ 2017, 6:31 IST
ಅಕ್ಷರ ಗಾತ್ರ

ಆನ್‌ಲೈನ್‌ ಯುಗದಲ್ಲಿ ಎಲ್ಲವೂ ಕುಳಿತಲ್ಲಿಂದಲೇ ಆಗಬೇಕೆಂದು ಬಯಸುವ ಮಂದಿಯೇ ಹೆಚ್ಚು. ಚಿಕ್ಕದೊಂದು ಪೆನ್ನು ಕೊಳ್ಳುವುದರಿಂದ ಹಿಡಿದು ಮನೆಗೆ ಬೇಕಾದ ದಿನಸಿ ಕೊಳ್ಳುವವರೆಗೂ ಆನ್‌ಲೈನ್‌ ವ್ಯವಹಾರ ಈಗ ಹೆಚ್ಚಾಗಿದೆ. ಖರೀದಿಯಷ್ಟೇ ಅಲ್ಲ ಜ್ಞಾನವೂ ಆನ್‌ಲೈನ್‌ ಮೂಲಕ ಪಸರಿಸುತ್ತಿರುವ ಕಾಲವಿದು. ಹೀಗಾಗಿಯೇ ಆನ್‌ಲೈನ್‌ ಕೋರ್ಸ್‌, ಆನ್‌ಲೈನ್‌ ಪರೀಕ್ಷೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.

ಏನಾದರೂ ಗೊತ್ತಾಗದಿದ್ದರೆ ಅದರ ಬಗ್ಗೆ ಹೆಚ್ಚು ಯೋಚಿಸದೆ ‘ಗೂಗಲ್‌ ಮಾಡು’ ಎಂಬ ಸರಳ ಉತ್ತರ ಬೇಗ ಸಿಗುತ್ತದೆ. ಏನೇ ಸಂದೇಹಗಳಿದ್ದರೂ ಗೂಗಲ್‌ ಗುರುವಿನಲ್ಲಿ ಕೇಳಿ ಸಂದೇಹ ಪರಿಹರಿಸಿಕೊಳ್ಳುವವರೂ ಈಗ ಕಡಿಮೆಯೇನಿಲ್ಲ. ಇಂಗ್ಲಿಷ್‌ನ ಪದಗಳ ಸ್ಪೆಲ್ಲಿಂಗ್ ಹಾಗೂ ಉಚ್ಚಾರಣೆ ಬಗ್ಗೆ ಸಂದೇಹ ಬಂದಾಗ ಗೂಗಲ್‌ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಕನ್ನಡದ ಪದವೊಂದರ ಬಗ್ಗೆ ಸಂದೇಹ ಬಂದಾಗ ಮೊದಲು ನೆನಪಾಗುವುದು ಕನ್ನಡ ನಿಘಂಟು.

ಆದರೆ, ನಿಘಂಟು ಪುಸ್ತಕ ತಕ್ಷಣ ಲಭ್ಯವಿಲ್ಲದ ಕಡೆ ಏನು ಮಾಡುವುದು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಅದುವೇ ಆನ್‌ಲೈನ್‌ ಕನ್ನಡ ನಿಘಂಟು. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ನಲ್ಲಿರುವ ನಿಘಂಟು ವಿಭಾಗ ಕನ್ನಡ ಪದಗಳ ನಿಮ್ಮ ಸಂದೇಹಕ್ಕೆ ತಕ್ಷಣದಲ್ಲಿ ಪರಿಹಾರ ನೀಡುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ ಅನ್ನು ಇತ್ತೀಚೆಗೆ ಮರುವಿನ್ಯಾಸಗೊಳಿಸಲಾಗಿದೆ. ಅನೇಕ ಉಪಯುಕ್ತ ಮಾಹಿತಿ ಕೊಂಡಿಗಳ ಜತೆಗೆ ಇಲ್ಲಿರುವ ಆನ್‌ಲೈನ್‌ ನಿಘಂಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಆನ್‌ಲೈನ್‌ ನಿಘಂಟಿನಲ್ಲಿ ನಿಮಗೆ ಅನುಮಾನ ಬಂದ ಕನ್ನಡ ಪದಗಳನ್ನು ಯುನಿಕೋಡ್‌ನಲ್ಲಿ ಟೈಪಿಸಿ ‘ಹುಡುಕು’ ಕ್ಲಿಕ್ಕಿಸಿದರೆ ಆಯಿತು. ಆ ಪದದ ಬೇರೆ ಬೇರೆ ಸಂದರ್ಭಗಳ ಪ್ರಯೋಗಗಳ ಬಗ್ಗೆ ನಿಮಗೆ ಮಾಹಿತಿ ಸಿಗಲಿದೆ.

ಉದಾಹರಣೆಗೆ ನಿಮಗೆ ‘ಪೊಸಯಿಸು’ ಎಂಬ ಪದಕ್ಕೆ ಅರ್ಥ ಗೊತ್ತಿಲ್ಲವಾದರೆ ಈ ಆನ್‌ಲೈನ್‌ ನಿಘಂಟಿನ ಸರ್ಚ್‌ ಟೂಲ್‌ಗೆ ಈ ಪದವನ್ನು ಟೈಪ್‌ ಮಾಡಿ, ‘ಹುಡುಕು’ ಎಂಬಲ್ಲಿ ಕ್ಲಿಕ್‌ ಮಾಡಿ. ಈ ಪದಕ್ಕೆ ಇರುವ ಎಲ್ಲಾ ಅರ್ಥಗಳೂ ಆನ್‌ಲೈನ್‌ ನಿಘಂಟಿನ ಪರದೆಯ ಮೇಲೆ ಮೂಡುತ್ತವೆ. ಈ ಪದದ ಬಳಿಕ ಬೇರೆ ಪದ ಹುಡುಕಬೇಕೆಂದರೆ ‘ಹುಡುಕು’ ಆಯ್ಕೆಯ ಪಕ್ಕದಲ್ಲಿರುವ ‘ಅಳಿಸಿ’ ಎಂಬಲ್ಲಿ ಕ್ಲಿಕ್ಕಿಸಿ, ಬೇರೆ ಪದವನ್ನು ಮತ್ತೆ ಸರ್ಚ್‌ ಟೂಲ್‌ಗೆ ಹಾಕಿ.

ಕ್ಲಿಷ್ಟವಾದ ಕನ್ನಡ ಪದಗಳ ಅರ್ಥ ಹಾಗೂ ಹಳಗನ್ನಡ ಪದಗಳ ಬಗ್ಗೆ ಸಂದೇಹಗಳಿದ್ದರೆ ನೀವಿದ್ದಲ್ಲೇ ಕ್ಷಣಮಾತ್ರದಲ್ಲಿ ಅನುಮಾನ ಪರಿಹರಿಸಿಕೊಳ್ಳಬಹುದು. ಅಂದಹಾಗೆ ನೀವು ಹುಡುಕಲು ನೀಡುವ ಪದ ಯುನಿಕೋಡ್‌ನಲ್ಲೇ ಟೈಪಿಸಿರಬೇಕು.

ಆನ್‌ಲೈನ್‌ ಕನ್ನಡ ನಿಘಂಟಿನ ಕೊಂಡಿ: bit.ly/2mRlAK3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT